News Karnataka Kannada
Thursday, May 02 2024
ಮಂಗಳೂರು

ಮಂಗಳೂರು: ಮಾ.27ರಂದು”ಸಾನಿಧ್ಯ ಉತ್ಸವ-2022″

Sanidya
Photo Credit : News Kannada

ಮಂಗಳೂರು: ಗ್ರಾಮೀಣ ಪ್ರದೇಶದ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳಿಗೂ ವಿಶೇಷ ಶಾಲೆಗಳ ಅವಕಾಶ ದೊರಕಬೇಕು, ಆ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಬೇಕು, ಎಂಬ ಉದ್ದೇಶವನ್ನು ಇರಿಸಿಕೊಂಡು ಶ್ರೀ ಗಣೇಶ: ಸೇವಾ ಟ್ರಸ್ಟ್‌ ಫಾರ್ ಎಕ್ಸೆಪ್ಷನಲ್ ಪರ್ಸನ್ (0) 2003ರಲ್ಲಿ ಮಂಗಳೂರಿನ ಶಕ್ತಿನಗರದಲ್ಲಿ “ಸಾನಿಧ್ಯ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಇದೀಗ ಸಾನಿಧ್ಯವು 19 ವರ್ಷಗಳನ್ನು ಪೂರ್ಣಗೊಳಿಸುತ್ತಿದೆ.

ಪ್ರಸ್ತುತ “ಸಾನಿಧ್ಯ ” ಶಾಲೆಯಲ್ಲಿ 4 ವರ್ಷ ವಯಸ್ಸಿನಿಂದ 52 ವರ್ಷ ವಯಸ್ಸಿನವರೆಗಿನ ಸುಮಾರು 168 ಭಿನ್ನ ಸಾಮರ್ಥ್ಯದ ಮಕ್ಕಳು  ವ್ಯವಸ್ಥೆಯೊಂದಿಗೆ ವಿಶೇಷ ಶಿಕ್ಷಣ ಹಾಗೂ ತರಬೇತಿಯನ್ನು ಪಡೆಯುತ್ತಿದ್ದಾರೆ. ಸುಮಾರು 05 ಮಂದಿ ವಿಶೇಷ ಶಿಕ್ಷಕರು, ಕರಕುಶಲ ಶಿಕ್ಷಕರು ಹಾಗೂ ಶಿಕ್ಷಕಾರ ಸಿಬ್ಬಂದಿಗಳು ಸಾನಿಧ್ಯದಲ್ಲಿ ಸೇವಾ ನಿರರರಾಗಿದ್ದಾರೆ, ಪ್ರತಿಯೊಬ್ಬ ವಿಶೇಷ ವಿದ್ಯಾರ್ಥಿಗಳಲ್ಲಿ ಇರುವಂತಹ ಸುಪ್ತ ಪ್ರತಿಭೆಯನ್ನು ಗುರುತಿಸಿ ಆ ಮೂಲಕ ಅವರಿಗೆ ತರಬೇತಿಯನ್ನು ನೀಡಿ ಅವರ ಪ್ರತಿಭೆಗೆ ಅವಕಾಶಗಳನ್ನು “ಸಾನಿಧ್ಯ” ಕಲ್ಪಿಸುತ್ತಾ ಬಂದಿದೆ.

ಕೋವಿಡ್-19ರಿಂದಾಗಿ 2020 ಹಾಗೂ 21ರಲ್ಲಿ ಕಾರ್ಯಕ್ರಮ ಜರುಗಿಸಲು ಸಾಧ್ಯವಾಗಿಲ್ಲ. ಈ ವರ್ಷ ಮಾರ್ಚ್ ತಿಂಗಳ 27ರಂದು ‘ವಿಷನ್-2022’ ಹಾಗೂ ‘ಸಾನಿಧ್ಯ ಉತ್ಸವ- 2022’ ಕಾರ್ಯಕ್ರಮವನ್ನು ಮಂಗಳೂರಿನ ಕದ್ರಿ ಉದ್ಯಾನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಭಿನ್ನ ಸಾಮರ್ಥ್ಯದ ಮಕ್ಕಳು ತಮ್ಮ ತರಬೇತಿದಾರರೊಡನೆ ಸೇರಿಕೊಂಡು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಸಂಜೆ 03.30ರ ಬಳಿಕ ನಡೆಯಲಿದೆ.

“ವಿಷನ್-2022″ನ್ನು ಶ್ರೀ ಗೋಪಾಲಕೃಷ್ಣ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ದ.ಕ.ಜಿಲ್ಲೆ ಇವರು ಉದ್ಘಾಟನೆ ಮಾಡಲಿದ್ದು, ಶ್ರೀ ಸ್ವರ್ಣಸುಂದರ್- ಮಾಲಕರು, ಹೊಟೇಲ್ ಡಿಂಕಿ- ಡೈನ್, ಮಂಗಳೂರು, ಶ್ರೀಮತಿ ಜ್ಯೋತಿ ಆಳ್ವ ಬಿಜೆರ್ಫಿ ಟೆಕ್ನಾಲಜೀಸ್ ಶೈಲಿ. ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಅದೇ ದಿನ ಸಂಜೆ 5.30 ಕದ್ರಿ ಉದ್ಯಾನದಲ್ಲಿ ‘ಸಾನಿಧ್ಯ ‘ ವಿಶೇಷ ಮಕ್ಕಳ ಸಾಂಕೃತಿಕ ಪ್ರತಿಭೆಯನ್ನು ತೋರಿಸುವ ಕಾರ್ಯಕ್ರಮ “ಸಾನಿಧ್ಯ ಉತ್ಸವ-2022” ಜರುಗಲಿದೆ. ಶ್ರೀ ಯೋಗಿಶ್ ಬಿ, ಆರ್ಯ, ಜನರಲ್ ಮ್ಯಾನೇಜರ್‌ ಕೆನರಾ ಬ್ಯಾಂಕ್, ಮಂಗಳೂರು ಸರ್ಕಲ್ ಇವರು ಸಾನಿಧ್ಯ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಡಾ. ಸಂತೋಷ್ ಸೋನ್ಸ್, ಮಕ್ಕಳ ತಜ್ಞರು, ಮಕ್ಕಳ ವಿಭಾಗದ ಮುಖ್ಯಸ್ಥರು- ಎ.ಜೆ. ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶ್ರೀ ಶಶಿಧರ್ ಶೆಟ್ಟಿ ಅಧ್ಯಕ್ಷರು ಬಂಟರ ಸಂಘ ಬರೋಡ, ಉದ್ಯಮಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಶ್ರೀಯುತ ಪ್ರಕಾಶ್ ಶೆಟ್ಟಿ, ಪಿ.ಡಿ.ಓ ಉಜಿರೆ ಗ್ರಾಮ ಪಂಚಾಯತ್ ಹಾಗೂ ಶ್ರೀ ಮೊಹಮ್ಮದ್ ಆರೀಫ್ ಪಡುಬಿದ್ರೆ, ಕಾರ್ಯದರ್ಶಿಗಳು- ಎಂ ಚಾರಿಟೇಬಲ್ ಟ್ರಸ್ಟ್ ಮುಂಗಳೂರು ಇವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಆವೆ ಮರಿಯಾ, ಪ್ಯಾಲೆಯಟಿವ್ ಕೇರ್- ವಾಮಂಜೂರು, ಈ ಸಂಸ್ಥೆಯನ್ನು ಗೌರವಿಸಲಾಗುವುದು ಹಾಗೂ ಶ್ರೀಮತಿ ತಬಸ್ಸುಮ್, “ಸ್ನೇಹದೀಸ್’, ಬಿಜೈ, ಮಂಗಳೂರು, ರೋಗ ಉಮೇಶ್, ಮಾಜಿ ಅಧ್ಯಕ್ಷರು ರೋಟರಿ ಮಿಡ್ ಟೌನ್ ಮೈಸೂರು, ಶ್ರೀ ಹೇಮಂತ್ ಜಿಟೋಗ್ರಾಫರ್ ಮಂಗಳೂರು ಇವರನ್ನು

ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ಕರಿಯ ಹವ್ಯಾಸಿ ಕಲಾವಿದರಾದ ಶ್ರೀ ಸರತ್ ಕುಮಾರ್, ಕದ್ರಿ ಇವರ ನಿರ್ದೇಶನದಲ್ಲಿ, ಶ್ರೀ ಸುಚೇಶ್ ಮತ್ತು ಶ್ರೀ ದೀಕ್ಷಿತ್ ಇವರ ಸಹ ನಿರ್ದೇಶನದಲ್ಲಿ ‘ನಾನಿಧ್ಯ’ ವಿಶೇಷ ಮಕ್ಕಳಿಂದ “ಲಂಕಾದಹನ” ಎಂಬ ಯಕ್ಷಗಾನ ನಡೆಯಲಿದ್ದು, ಈ ಸಂದರ್ಭದಲ್ಲಿ ಹನುಮಾರ್‌ ಆಕಾಶ ಮಾರ್ಗವಾಗಿ ಬಂದು ಲಂಕೆಯನ್ನು ವಹಿಸುವ ಅಪೂರ್ವ ದೃಶ್ಯಾವಳಿ ಹಾಗೂ ಡಾ. ವಸಂತ್ ಕುಮಾರ್ ಶೆಟ್ಟಿ ಇವರ ನಿರ್ದೇಶನದಲ್ಲಿ ಕರ್ನಾಟಕ ವೈಭವ” ಎಂಬ ಪ್ರಹಸನ ಜರುಗಲಿದ್ದು, ಆನೆಯ ಮೇಲೆ ಅಂಬಾರಿ ನಾಗಿ ಬರುವ ರೋಹಕ ದೃಶ್ಯವನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು