Categories: ಮಂಗಳೂರು

ಮಂಗಳೂರು: ಭಾರತ್ ಪಿ.ಯು ಕಾಲೇಜಿನಲ್ಲಿ ಹಿಜಾಬ್ ಗಲಾಟೆ,ಕಾಲೇಜಿಗೆ ರಜೆ ಘೋಷಣೆ

ಮಂಗಳೂರು: ನಗರದ ಉಳ್ಳಾಲದ ಭಾರತ್ ಪಿಯು ಕಾಲೇಜಿನಲ್ಲಿ ಹಿಜಾಬ್ ಸಮಸ್ಯೆ ತಾರಕಕ್ಕೇರಿದೆ‌. ಶಿಕ್ಷಣ ಇಲಾಖೆಯ ಆದೇಶದಂತೆ ಹಿಜಾಬ್‌ ಧರಿಸಬೇಡಿ ಎಂದು ಕಾಲೇಜಿನ‌ ಆಡಳಿತ ಮಂಡಳಿ ತಿಳಿಸಿದ್ದಕ್ಕೆ, ರೊಚ್ಚಿಗೆದ್ದ ವಿದ್ಯಾರ್ಥಿನಿಯರು ಕೋರ್ಟ್ ಆದೇಶ ಬರಲಿ ಮತ್ತೆ ನೋಡುವ ಎಂದು ಸವಾಲೆಸೆದಿದ್ದಾರೆ.

ಇಲ್ಲಿ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಉಪನ್ಯಾಸಕರಿಗೂ ಹಿಜಾಬ್ ತೆಗೆದು ಬರುವಂತೆ ಸೂಚನೆ ನೀಡಲಾಗಿದೆ. ಅತ್ತ ಹಿಜಾಬ್ ಧರಿಸುತ್ತೇವೆ ಎಂದು ಪಟ್ಟು ಹಿಡಿದ ವಿದ್ಯಾರ್ಥಿನಿಯರು ಟಿಸಿ ಕೊಡಿ ಇಲ್ಲವೇ ಕೋರ್ಟ್ ಆದೇಶ ಬರುವವರೆಗೆ ರಜೆ ಕೊಡಿ ಎಂದು ಪ್ರತಿಭಟನೆಗೆ ಇಳಿದ್ರು. ಈ ವಿಷಯ ತಿಳಿದ ಉಳ್ಳಾಲ ಪೊಲೀಸರು ಘಟನಾ ಸ್ಥಳಕ್ಕೆ ಬಂದಾಗ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು.

ವಿಷಯ ಅರಿತ ಶಾಸಕ ಯು.ಟಿ ಖಾದರ್ ಕಾಲೇಜಿನ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿದರು. ವಿದ್ಯಾರ್ಥಿಗಳ ಭವಿಷ್ಯ ಮುಖ್ಯ, ವಿದ್ಯಾಭ್ಯಾಸ ಹಾಳಾಗಬಾರದು‌ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಎಲ್ಲವೂ ಸರಿ ಹೋಗುವವರೆಗೆ ಪಿ.ಯು ಕಾಲೇಜಿಗೆ ರಜೆ ಘೋಷಣೆ ಮಾಡುವಂತೆ ಸೂಚಿಸಿದ್ದಾರೆ.

Sneha Gowda

Recent Posts

ಪ್ರಜ್ವಲ್ ಪ್ರಕರಣ ಕಾಂಗ್ರೆಸ್ ನಿಂದ ರಾಜಕೀಯ: ಅರವಿಂದ ಲಿಂಬಾವಳಿ ಆರೋಪ

ಪ್ರಜ್ವಲ್ ಲೈಂಗಿಕ ಹಗರಣದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಆರೋಪಿಸಿದರು.

26 seconds ago

ಬಿಸಿಲಿನ ತಾಪದಿಂದ ಹೊಲದಲ್ಲಿ ಕೆಲಸಕ್ಕೆ ಹೋಗಿದ್ದ ರೈತ ಸಾವು

ಬಿಸಿಲಿನ ತಾಪದಿಂದ ಹೊಲದ ಕೆಲಸಕ್ಕೆ ತೆರಳಿದ್ದ ರೈತರೊಬ್ಬರು ಸಾವಿಗೀಡಾದ ಘಟನೆ ಜಾಲಿಬೆಂಚಿ ಗ್ರಾಮದಲ್ಲಿ ನಡೆದಿದೆ.

16 mins ago

ದೇವೇಗೌಡರ ಕುಟುಂಬ ನೈತಿಕ ಹೊಣೆ ಹೊತ್ತು ರಾಜಕೀಯ ಬಿಡಲಿ: ಮೊಯ್ಲಿ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ದೇವೇಗೌಡರ ಕುಟುಂಬ ನೈತಿಕ ಹೊಣೆ ಹೊತ್ತು ರಾಜಕೀಯ ಬಿಡಬೇಕು ಎಂಬ…

23 mins ago

ಬಾಲಕನನ್ನು ಕಚ್ಚಿದ ನಾಯಿಯನ್ನು ಕೊಂದು ತಿಂದ ಭೂಪ

ತನ್ನ ಸೋದರಳಿಯನಿಗೆ ಕಚ್ಚಿದ ಸಾಕುನಾಯಿಯನ್ನು ವ್ಯಕ್ತಿಯೊಬ್ಬ ಕೊಂದು ತಿಂದ ಘಟನೆ ಥೈಲ್ಯಾಂಡಿನಲ್ಲಿ ನಡೆದಿದ್ದು, ಇದರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

39 mins ago

ಯೋಗಿ ಆದಿತ್ಯನಾಥ್ ಅವರ ಡೀಪ್‌ಫೇಕ್ ವೀಡಿಯೋ ಶೇರ್ ಮಾಡಿದ ಆರೋಪಿಯ ಬಂಧನ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಅವರ ಡೀಪ್‌ಫೇಕ್ ವೀಡಿಯೋವನ್ನು ಪೋಸ್ಟ್ ಮಾಡಿ ಶೇರ್ ಮಾಡಿದ ಆರೋಪದ ಮೇಲೆ ಉತ್ತರಪ್ರದೇಶ ಎಸ್‌ಟಿಎಫ್  ತಂಡ…

54 mins ago

ಉರುಳಿಗೆ ಸಿಲುಕಿದ ಚಿರತೆಯನ್ನು ರಕ್ಷಿಸಿ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ

ಉರುಳಿಗೆ ಸಿಲುಕಿ ನರಳುತ್ತಿದ್ದ ಚಿರತೆಯನ್ನು ರಕ್ಷಿಸಿ ಸುರಕ್ಷಿತವಾಗಿ ನಾಗರಹೊಳೆ ಅಭಯಾರಣ್ಯಕ್ಕೆ ಬಿಟ್ಟ ಘಟನೆ ಪಿರಿಯಾಪಟ್ಟಣ ತಾಲೂಕಿನ ಮಲ್ಲಿನಾಥಪುರ ಗ್ರಾಮದ ಅರಣ್ಯ ನಡು ತೋಪಿನಲ್ಲಿ ನಡೆದಿದೆ.

1 hour ago