Categories: ಮಂಗಳೂರು

ಮಂಗಳೂರು ಧರ್ಮಪ್ರಾಂತ್ಯದ ಭಾರತೀಯ ಕಥೊಲಿಕ ಯುವ ಸಂಚಾಲನಕ್ಕೆ 75 ವರ್ಷದ ಸಂಭ್ರಮ

ಮಂಗಳೂರು: ಮಂಗಳೂರಿನಲ್ಲಿ 75 ವರ್ಷದ ಸೇವೆ, ನಾಯಕತ್ವ ಹಾಗೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ಭಾರತೀಯ ಕಥೊಲಿಕ ಯುವ ಸಂಚಾಲನದ ಅಮೃತೋತ್ಸವವನ್ನು ಆಚರಿಸುವುದು ನಮಗೆ ಅಭಿಮಾನ. ಇದೇ ಜೂನ್ 12 ರಂದು ವಾಮಂಜೂರು ಚರ್ಚ್ ಸಭಾಭವನದಲ್ಲಿ ಮಧ್ಯಾಹ್ನ 2.15 ರಿಂದ ಕಾರ್ಯಕ್ರಮ ಆರಂಭವಾಗಿ, ಬಲಿಪೂಜೆ, ವೇದಿಕೆ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಯುವಜನರ ಮುಂದಳತ್ವದಲ್ಲಿ ನಡೆಯಲಿರುವುದು.

ಈ ಕಾರ್ಯಕ್ರಮಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವ|ಪೀಟರ್ ಪಾವ್ಲ್ ಸಲ್ಡಾನಾ, ಕರ್ನಾಟಕ ಪ್ರಾಂತೀಯ ಯುವಜನರ ಮುಖಂಡರಾದ ಅ|ವಂ| ಹೆನ್ರಿ ಡಿ’ಸೋಜಾ, ಧರ್ಮಧ್ಯಕ್ಷರು, ಬಳ್ಳಾರಿ ಧರ್ಮಪ್ರಾಂತ್ಯ, ವಂದನೀಯ ಚೇತನ್ ಮಚಾದೊ, ನಿರ್ದೇಶಕರು, ಐ.ಸಿ.ವೈ.ಎಮ್. ಭಾರತ, ವಂ|ಲೂರ್ಡ್ ರಾಜ್, ನಿರ್ದೇಶಕರು, ಐ.ಸಿ.ವೈ.ಎಮ್. ಕರ್ನಾಟಕ, ವಂ| ಜೇಮ್ಸ್ ಡಿ’ಜೋಜಾ, ಧರ್ಮಗುರುಗಳು, ವಾಮಂಜೂರು, ವಂ|ವಿನ್ಸೆಂಟ್ ಮೊಂತೆರೊ, ಮಾಜಿ ನಿರ್ದೇಶಕರು ,ಐ.ಸಿ.ವೈ.ಎಮ್, ಮಂಗಳೂರು ಧರ್ಮಪ್ರಾಂತ್ಯ, ರಿಚ್ಚಾರ್ಡ್ ಡಿ’ಸೊಜಾ, ಮಾಜಿ ಅಧ್ಯಕ್ಷರು, ಐ.ಸಿ.ವೈ.ಎಮ್, ಮಂಗಳೂರು ಧರ್ಮಪ್ರಾಂತ್ಯ, ಅಡ್ವೊಕೇಟ್ ಆಂತೊನಿ ಜೂಡಿ, ಅಧ್ಯಕ್ಷರು, ಐ.ಸಿ.ವೈ.ಎಮ್ ಭಾರತ, ನೇವಿನ್ ಆಂತೊನಿ, ಅಧ್ಯಕ್ಷರು, ಐ.ಸಿ.ವೈ.ಎಮ್ ಕರ್ನಾಟಕ ಇವರು ಈ ಕಾರ್ಯಕ್ರಮಕ್ಕೆ ಆಗಮಿಸಲಿರುವರು ಹಾಗೂ 75 ವರ್ಷ ಸೇವೆ ಸಲ್ಲಿಸಿದ ಅಧ್ಯಕ್ಷರು, ಹಿತಚಿಂತಕರು ಹಾಗೂ ಮಂಗಳೂರು ಧರ್ಮ ಪ್ರಾಂತ್ಯದ ಯುವಜನರು ಇದರಲ್ಲಿ ಭಾಗಿಯಾಗುವರು.

ಭಾರತೀಯ ಕಥೊಲಿಕ ಯುವ ಸಂಚಾಲನ (ಐ.ಸಿ.ವೈ.ಎಮ್.), ಭಾರತದ ಉತ್ತಮ ಸೇವೆ ನೀಡುವ ಯುವಜನರ ಸಂಚಾಲನದಲ್ಲಿ ಇದೂ ಒಂದು. ಇದು 1947 ಫೆಬ್ರವರಿ 18 ರಂದು ಅಧಿಕೃತ ವಾಗಿ ಮಂಗಳೂರು ಧರ್ಮ ಪ್ರಾಂತ್ಯದಲ್ಲಿ ಸ್ಥಾಪನೆಯಾಯಿತು. 5 ಧರ್ಮಾಧ್ಯಕ್ಷರು, 15 ನಿರ್ದೇಶಕರು, 4 ಧರ್ಮಭಗಿನಿಯರು, ಸುಮಾರು 51 ಅಧ್ಯಕ್ಷರ ಮುಂದಾಳತ್ವದಲ್ಲಿ ಈ ಸಂಚಾಲನದ ಮೂಲಕ ಸಮಾಜಕ್ಕೆ ಉತ್ತಮ ಸೇವಯನ್ನು ನೀಡಿದ್ದಾರೆ. ಪ್ರಸ್ತತ ಅ|ವ| ಡೊ. ಪೀಟರ್ ಪಾವ್ಲ್ ಸಲ್ಡಾನಾ ಇವರ ಮಾರ್ಗದರ್ಶನದಲ್ಲಿ ಈ ಸಂಚಾಲನ 75 ವರ್ಷಗಳ ಸಂಭ್ರಮ ಆಚರಣೆ ಮಾಡಲು ಸಿದ್ಧವಾಗಿದೆ.

ಪ್ರಸ್ತುತ ವ| ಅಶ್ವಿನ್ ಕಾರ್ಡೊಜಾ, ಐ.ಸಿ.ವೈ.ಎಮ್‍. ನಿರ್ದೇಶಕರು; ಜೈಸನ್ ಕ್ರಾಸ್ತಾ, ಐ.ಸಿ.ವೈ.ಎಮ್ ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷರು; ಬ್ಲೇರಿಲ್ ವಿಶ್ಮಾ ಡಿಕುನ್ಹಾ, ಐ.ಸಿ.ವೈ.ಎಮ್ ಮಂಗಳೂರು ಧರ್ಮಪ್ರಾಂತ್ಯದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಜೊತೆ ಇತರ ಪದಾಧಿಕಾರಿಗಳು ಉತ್ತಮ ಸೇವಯನ್ನು ಸಮಾಜಕ್ಕೆ ನೀಡುತ್ತಿದ್ದಾರೆ.

ಇಂದು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಐ.ಸಿ.ವೈ.ಎಮ್‍. ನಿರ್ದೇಶಕರಾದ ವ| ಅಶ್ವಿನ್ ಕಾರ್ಡೊಜಾರವರು ಭಾರತೀಯ ಕಥೊಲಿಕ ಯುವ ಸಂಚಾಲನದ ಅಮೃತೋತ್ಸವದ ಆಚರಣೆಯ ಬಗ್ಗೆ ಮಾಹಿತಿ ನೀಡಿದರು. ಐ.ಸಿ.ವೈ.ಎಮ್. ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷರಾದ ಜೈಸನ್ ಕ್ರಾಸ್ತಾ, ಐ.ಸಿ.ವೈ.ಎಮ್. ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಲ್ಸಿಟ ಕಾರ್ಡೊಜಾ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರದೀಪ್ ರೊಸಾರಿಯೊ ಉಪಸ್ಥಿತರಿದ್ದರು.

Gayathri SG

Recent Posts

ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ : ನಿತಿನ್‌ ಗಡ್ಕರಿ

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ ಎನ್ನುವ ಕಾಂಗ್ರೆಸ್‌ ಆರೋಪಕ್ಕೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ…

1 min ago

ತೀರ್ಥಯಾತ್ರೆಗೆ ಬಂದ ನಾಲ್ವರು ನದಿಯಲ್ಲಿ ಮುಳುಗಿ ದಾರುಣ ಸಾವು

ತೀರ್ಥಯಾತ್ರೆಗೆಂದು ಅತಿಥಿ ಗೃಹಕ್ಕೆ ಬಂದಿದ್ದವರು ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಲ್ಲಾಪುರದ ಕಾಗಲ್ ತಾಲೂಕಿನ…

20 mins ago

ಪ್ರಾಚೀನರ ಕಲಾ ಕೊಡುಗೆಗಳ ಸಂರಕ್ಷಣೆ ಅಗತ್ಯ: ನೇಮಿರಾಜ ಶೆಟ್ಟಿ

ಇತಿಹಾಸವನ್ನು ಚಿತ್ರಗಳ ಮೂಲಕ ಜೋಪಾಸನೆ ಮಾಡುವ ಕಾಯಕವೂ ಅತ್ಯಂತ ಶ್ರೇಷ್ಠ. ಮುಂದಿನ ಪೀಳಿಗೆಗೆ ಪ್ರಾಚೀನರ ಕಲಾ ಕೊಡುಗೆಯನ್ನು ಸಂರಕ್ಷಣೆ ಮಾಡುವುದು…

25 mins ago

ಮತ್ತೆ ವಿವಾದಕ್ಕೆ ಸಿಲುಕಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ

ಒಂದು ವರ್ಷದ ಸಾಧನೆಯ ರಿಪೋರ್ಟ್ ಕಾರ್ಡ್ ಹಿಡಿದು ಹಿರಿಯ ಬಿಜೆಪಿ ಮುಖಂಡರ ಬಳಿ ಶಾಸಕ ಅಶೋಕ್ ಕುಮಾರ್ ರೈ ತೆರಳಿದ್ದು, ಶಾಸಕ…

35 mins ago

ಚಾಮರಾಜನಗರ: ಹಾಸನೂರು ಘಾಟ್ ಬಳಿ ಕಾರು ಪಲ್ಟಿ

ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು ಘಾಟ್ ಬಳಿ ಕಾರೊಂದು ಪಲ್ಟಿಯಾದ ಘಟನೆ ನಡೆದಿದೆ.

55 mins ago

ಫ್ಲಾಟ್‌ಗಳನ್ನು ನಿರ್ಮಿಸಲು 8 ಮರಗಳನ್ನು ಕಡಿದ ಬಿಲ್ಡರ್ ವಿರುದ್ಧ ಎಫ್‌ಐಆರ್

ಫ್ಲಾಟ್‌ಗಳನ್ನು ನಿರ್ಮಿಸಲು ಎಂಟು ಮರಗಳನ್ನು ಕಡಿದ ಆರೋಪದ ಮೇಲೆ ಆಂಧ್ರಪ್ರದೇಶ ಮೂಲದ ಬಿಲ್ಡರ್ ವಿರುದ್ಧ ಬಿಬಿಎಂಪಿ ಅರಣ್ಯ ವಿಭಾಗವು ಎಫ್‌ಐಆರ್…

1 hour ago