Categories: ಮಂಗಳೂರು

ಬೆಳ್ತಂಗಡಿ : ಕಾಡಾನೆ ಹಾವಳಿ ವಲಯ ಅರಣ್ಯಾಧಿಕಾರಿ ಭೇಟಿ

ಬೆಳ್ತಂಗಡಿ : ಮುಂಡಾಜೆ ಗ್ರಾಮದ ಧುಂಬೆಟ್ಟು,ಮಜಲು,ಕಜೆ ಪರಿಸರದಲ್ಲಿ ಕಾಡಾನೆಗಳು ನಿರಂತರ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ವಲಯಾರಣ್ಯಾಧಿಕಾರಿ ತ್ಯಾಗರಾಜ್ ಮತ್ತು ಸಿಬ್ಬಂದಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಪ್ರದೇಶ ಸೇರಿದಂತೆ ಚಾರ್ಮಾಡಿ, ನೆರಿಯ,ತೋಟತ್ತಾಡಿ, ಚಿಬಿದ್ರೆ,ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು ಹಲವಾರು ಕೃಷಿ ತೋಟಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಕೃಷಿ ನಾಶವಾಗಿದೆ.

ಇತ್ತೀಚಿನ ದಿನಗಳಲ್ಲಿ ಕಾಡಾನೆಗಳು, ಜನನಿಬಿಡ ಪ್ರದೇಶಗಳ ತನಕವು ಲಗ್ಗೆ ಇಡುತ್ತಿದ್ದು ಜನಸಾಮಾನ್ಯರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.

ಮತ್ತೆ ಕಂಡುಬಂದ ಕಾಡಾನೆಗಳು
ರಬ್ಬರ್ ಟ್ಯಾಪಿಂಗ್ ಗೆ ಹೋಗುವ ಕಾರ್ಮಿಕರಿಗೆ ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಕಾಡಾನೆಗಳು ಮತ್ತೆ ಕಂಡುಬಂದಿವೆ. ಧುಂಬೆಟ್ಟು ಪರಿಸರದಲ್ಲಿ ಕಾಡಾನೆಗಳು ತಿರುಗಾಟ ನಡೆಸಿದ್ದು ಯಾವುದೇ ಹಾನಿ ಉಂಟು ಮಾಡಿರುವ ಕುರಿತು ತಿಳಿದುಬಂದಿಲ್ಲ.

ಊರವರಿಂದ ಗಸ್ತು
ಧುಂಬೆಟ್ಟು ಪರಿಸರದಲ್ಲಿ ಕಾಡಾನೆಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಹಲವರು ಸೇರಿ ಆನೆಗಳನ್ನು ತೋಟಗಳತ್ತ ಬರುವುದನ್ನು ತಡೆಗಟ್ಟಲು ರಾತ್ರಿ ಗಸ್ತು ಆರಂಭಿಸಿದ್ದಾರೆ. ಈ ತಂಡವು ಪಾಳಿಗಳಲ್ಲಿ ರಾತ್ರಿಯಿಂದ ಬೆಳಗಿನ ತನಕ ಕಾರ್ಯನಿರ್ವಹಿಸುತ್ತದೆ.

“ಆನೆ ಹಾವಳಿ ಪ್ರದೇಶಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಲಾಗಿದೆ. ಆನೆ ಹಾವಳಿ ತಡೆ ಕುರಿತು ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು”

Sneha Gowda

Recent Posts

ಬೈಕಿಗೆ ಡಿಕ್ಕಿ ಹೊಡೆದ ಕಾರು: ಓರ್ವ ಸಾವು

ಕಾರು ​​ ಚಾಲಕನೋರ್ವ ಕುಡಿದು ಅಡ್ಡಾದಿಡ್ಡಿ ಡ್ರೈವಿಂಗ್​ ಮಾಡಿ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ.

16 mins ago

ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

ಬ್ಯಾಂಕ್‌ ಖಾತೆಗೆ ಜಮಾ ಮಾಡಲು ಎಂದು ತಂದಿದ್ದ ಹಣವು ಕಳ್ಳತನಕ್ಕೆ ಒಳಗಾದ ಘಟನೆ ಬಸವಕಲ್ಯಾಣದಲ್ಲಿ ನಡೆದಿದೆ. ಬೈಕ್ ನ ಪೆಟ್ರೋಲ್…

34 mins ago

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತ

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದಲ್ಲಿ‌ಭಾನುವಾರ ಮುಂಜಾನೆ ಅಪಘಾತಕ್ಕೀಡಾಗಿದೆ.

50 mins ago

ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ : ಪರಿಚಯಸ್ಥರಿಂದಲೇ ಕೊಲೆ ಶಂಕೆ

ತಡರಾತ್ರಿ ದುಷ್ಕರ್ಮಿಗಳು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿರುವ ಘಟನೆ ನಗರದ…

1 hour ago

ಬಿಜೆಪಿ ಈಗ ಬೆಳೆದು ನಿಂತಿದೆ ಅದಕ್ಕೆ ಆರ್ ಎಸ್ ಎಸ್ ಬೆಂಬಲ ಬೇಕಾಗಿಲ್ಲ: ಉದ್ಧವ್ ಠಾಕ್ರೆ

ಬಿಜೆಪಿ ಮತ್ತು ಆರೆಸ್ಸೆಸ್ ಸಂಬಂಧದ ಬಗ್ಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಶಿವಸೇನಾ ಯುಬಿಟಿ ಬಣದ…

1 hour ago

ನೇಹಾ, ಅಂಜಲಿ ಕೊಲೆ ಕೇಸ್​​ : ಎಡಿಜಿಪಿ ಆರ್.ಹಿತೇಂದ್ರ ಅಧಿಕಾರಿಗಳಿಗೆ ಕ್ಲಾಸ್​

ನೇಹಾ ಮತ್ತು ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಗಳು ಬಾರಿ ಸಂಚಲನ ಮೂಡಿಸಿದ್ದವು ಈ ಹಿನ್ನೆಲೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ…

1 hour ago