Categories: ಮಂಗಳೂರು

ಬಂಟ್ವಾಳ: ಅಕ್ರಮ ದನ ಸಾಗಾಟಕ್ಕೆ ಯತ್ನ

 ಬಂಟ್ವಾಳ: ಅಕ್ರಮ ದನ ಸಾಗಣೆ ತಡೆಯಲು ಹೋದ ಎಸ್​ಐ ಮೇಲೆ ದುಷ್ಕರ್ಮಿಗಳು ವಾಹನ ನುಗ್ಗಿಸಲು ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ಕುದ್ಕೊಳಿ ಎಂಬಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ಅದೃಷ್ಟವಶಾತ್ ಅಪಾಯದಿಂದ ಎಸ್​ಐ ಪಾರಾಗಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ವಾಮದಪದವು ಸಮೀಪದ ಕುದ್ಕೊಳಿ ಎಂಬಲ್ಲಿ ಪುಂಜಾಲಕಟ್ಟೆ ಎಸ್​ಐ ಸುತೇಶ್ ಎಂಬವರ ಮೇಲೆ ದನ ಸಾಗಾಟ ಮಾಡುತ್ತಿದ್ದ ಆರೋಪಿಗಳು ವಾಹನ ನುಗ್ಗಿಸಲು ಪ್ರಯತ್ನಿಸಿದ್ದಾರೆ. ರಾತ್ರಿ ವೇಳೆ ರೌಂಡ್ಸ್​ನಲ್ಲಿದ್ದ ಸುತೇಶ್ ಅವರು ಕುದ್ಕೊಳಿ ಎಂಬಲ್ಲಿ ಸಂಶಯಾಸ್ಪದ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದ್ದರು. ಆಗ ಚಾಲಕ ವಾಹನ ನಿಲ್ಲಿಸದೆ ಎಸ್​ಐ ಮೇಲೆ ನುಗ್ಗಿಸಿದ್ದಾನೆ. ಆ ಬಳಿಕ ವಾಹನ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.

ವಾಹನದಲ್ಲಿ ಇಬ್ಬರು ಆರೋಪಿಗಳು ಮೂರು ಗೋವುಗಳನ್ನು ಸಾಗಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರಾತ್ರಿ ವೇಳೆ ಹಟ್ಟಿಯಿಂದ ಕಳ್ಳತನ ಮಾಡಿ ತಂದಿರುವ ಗೋವುಗಳಾಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

Ashika S

Recent Posts

ಪಾಕಿಸ್ತಾನವನ್ನು ನಾವು ಗೌರವಿಸಬೇಕು ಎಂದ ಮಾಜಿ ಸಚಿವ ಮಣಿಶಂಕರ್ ಅಯ್ಯರ್‌

ಈ ಹಿಂದೆಯೂ ಪಾಕಿಸ್ತಾನವನ್ನು ಹಾಡಿಹೊಗಳಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್‌ ಮಾಜಿ ಸಚಿವ ಮಣಿಶಂಕರ್ ಅಯ್ಯರ್‌ ಈಗ ಮತ್ತೊಂದು ವಿವಾದಾತ್ಮಕ…

58 seconds ago

ಅವರೆಕಾಳು ಕಚೋರಿ ಮನೆಯಲ್ಲೇ ಮಾಡುವುದು ಹೇಗೆ?

ಬಿಸಿ, ಬಿಸಿ ಅವರೆ ಕಚೋರಿಯನ್ನು ಮನೆಯಲ್ಲಿಯೇ ಮಾಡಿ ಸವಿಯುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ತಯಾರಿಯ ಬಗೆಗಿನ ಮಾಹಿತಿ.

28 mins ago

ಬೃಹತ್ ನಕಲಿ ಸಿಮ್ ಜಾಲ ದಂಧೆ ಬೆಳಕಿಗೆ: ಆನ್ಲೈನ್ ವಂಚಕರಿಗೆ ಮಡಿಕೇರಿಯಿಂದ ಸಿಮ್ ಸಪ್ಲೈ

ಆನ್ ಲೈನ್ ಮೂಲಕ ವಿವಿಧ ರೀತಿಯಲ್ಲಿ ವಂಚಿಸಿ ಲಕ್ಷ ಲಕ್ಷ ಹಣವನ್ನು ದೋಚುತ್ತಿದ್ದ ನಯ ವಂಚಕ ದಂಧೆಕೋರರಿಗೆ ಗ್ರಾಹಕರ ಬದಲಿ…

36 mins ago

ಮಹಿಳೆಯ ಎಳೆದೊಯ್ದು ಕಾರು ಪಾರ್ಕಿಂಗ್‌ನಲ್ಲಿ ಅತ್ಯಾಚಾರ; ಭೀಕರ ದೃಶ್ಯ ಸೆರೆ

ಮಹಿಳೆ ಮೇಲೆ ಹಿಂಬದಿಯಿಂದ ಬೆಲ್ಟ್ ಮೂಲಕ ದಾಳಿ ನಡೆಸಿ, ಆಕೆಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ ಭೀಕರ ಘಟನೆ ನ್ಯೂಯಾರ್ಕ್ ನಗರದಲ್ಲಿ…

39 mins ago

ಮಲತಂದೆಯಿಂದಲೇ ಬಾಲಿವುಡ್ ನಟಿ ಕೊಲೆ; ಕೋರ್ಟ್

ಬಾಲಿವುಡ್ ನಟಿ ಲೈಲಾ ಖಾನ್ ಹತ್ಯೆ ಪ್ರಕರಣದಲ್ಲಿ ಮಲತಂದೆ ಪರ್ವೀನ್ ತಾಕ್ ದೋಷಿ ಎಂದು ಮುಂಬೈ ಸೆಷನ್ ಕೋರ್ಟ್ ಘಟನೆ…

51 mins ago

ಅಮೆರಿಕಕ್ಕೆ ಕೊಂಡೊಯ್ಯುವ ಶ್ವಾನಗಳಿಗೆ ಮೈಕ್ರೊಚಿಪ್‌ ಅಳವಡಿಕೆ ಕಡ್ಡಾಯ

ಅನ್ಯ ದೇಶಗಳಿಂದ ಅಮೆರಿಕಕ್ಕೆ ಕೊಂಡೊಯ್ಯುವ ಶ್ವಾನಗಳಿಗೆ ಕನಿಷ್ಠ 6 ತಿಂಗಳಾಗಿರಬೇಕು ಮತ್ತು ರೇಬಿಸ್‌ ತಡೆಗಟ್ಟುವ ಲಸಿಕೆ ಹಾಕಿಸಿರುವ ಮಾಹಿತಿ ಇರುವ…

54 mins ago