News Karnataka Kannada
Monday, April 29 2024
ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 21ರಿಂದ 30ರ ಹರೆಯದವರಲ್ಲಿ ಅತೀ ಹೆಚ್ಚು ಪಾಸಿಟಿವ್‌ ಪ್ರಕರಣ ವರದಿ!

Corona
Photo Credit : News Kannada

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳ ಜತೆಗೆ ಪಾಸಿಟಿವಿಟಿ ಕೂಡ ಏರಿಕೆಯಾಗುತ್ತಿದ್ದು, 21ರಿಂದ 30ರ ಹರೆಯದವರಲ್ಲಿ ಅತೀ ಹೆಚ್ಚು 1305 ಪ್ರಕರಣ ಸಕ್ರಿಯವಾಗಿದೆ. ಆದರೆ 0-5 ರ ವಯಸ್ಸಿನವರಲ್ಲಿ ಅತಿ ಕನಿಷ್ಠ 26 ವಿದ್ಯಾರ್ಥಿಗಳಲ್ಲಿ ಮಾತ್ರವೇ ಸೋಂಕು ಕಂಡು ಬಂದಿದೆ.

ಇದು ಜ.1ರಿಂದ 17ರವರೆಗೆ ಲೆಕ್ಕಾಚಾರ. ಅದರಂತೆ 6-10ರ ವಯಸ್ಸಿನ 53 ವಿದ್ಯಾರ್ಥಿಗಳಲ್ಲಿ, 11-15ರ ವಯಸ್ಸಿನ 145 ವಿದ್ಯಾರ್ಥಿಗಳಲ್ಲಿ, 16-20ರ ವಯೋಮಾನದಲ್ಲಿ 676 ಮಂದಿಯಲ್ಲಿ ಕೋವಿಡ್‌ ಸಕ್ರಿಯವಾಗಿದೆ. ವಿಶೇಷ ಎಂದರೆ ಎಲ್ಲ ವಿಭಾಗದಲ್ಲಿ ಪರಿಗಣಿಸಿದರೆ 21-30ರ ವಯಸ್ಸಿನವರಲ್ಲಿಯೇ ಕೋವಿಡ್‌ ಪ್ರಮಾಣ ಬಹಳಷ್ಟು ಹೆಚ್ಚಿದೆ ಎನ್ನುವುದು ಆರೋಗ್ಯ ಇಲಾಖೆಯ ಮಾಹಿತಿ.

ಮೂರನೇ ಅಲೆಯ ವೇಗ ಇತರ ಎರಡು ಅಲೆಗಳಿಗಿಂತ ಭಿನ್ನವಾಗಿರುವುದು ಮಾತ್ರವಲ್ಲ ಹರಡುವ ಪ್ರಮಾಣ ಕೂಡ ಅಷ್ಟೇ ಜಾಸ್ತಿಯಾಗಿದೆ. ಜ.1ರಿಂದ 17 ರವರೆಗೆ ಜಿಲ್ಲೆಯಲ್ಲಿ 5,865 ಮಂದಿಯಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳಿದ್ದು ಇದರಲ್ಲಿ 4,181 ಮಂದಿಯಲ್ಲಿ ಕೋವಿಡ್‌ ಸಕ್ರಿಯವಾಗಿದೆ ಎಂದು ಆರೋಗ್ಯ ಇಲಾಖೆಯ ಐಸಿಎಂಆರ್‌ ಪೋರ್ಟಲ್‌ ಮಾಹಿತಿ ನೀಡಿದೆ. ವಿಶೇಷವಾಗಿ 5,865 ಮಂದಿಯಲ್ಲಿ 2,672 ಮಂದಿ ಮಹಿಳೆಯರು ಹಾಗೂ 3,193 ಮಂದಿ ಪುರುಷರು ಆಗಿದ್ದಾರೆ. ಇದರಲ್ಲಿ 1,909 ಮಂದಿ ಮಹಿಳೆಯರು ಹಾಗೂ 2,272 ಮಂದಿ ಪುರುಷರಲ್ಲಿ ಕೋವಿಡ್‌ ಸಕ್ರಿಯವಾಗಿದೆ.

ಈ ಕುರಿತು ದ.ಕ. ಜಿಲ್ಲಾ ಕೋವಿಡ್‌ ನೋಡಲ್‌ ಅಧಿಕಾರಿ ಡಾ.ಅಶೋಕ್‌ ಅವರು ಹೇಳುವಂತೆ ಜಿಲ್ಲೆಯಲ್ಲಿ ಕೋವಿಡ್‌ ಪ್ರಮಾಣ ನಿಧಾನವಾಗಿ ಏರಿಕೆಯಾಗುತ್ತಿದೆ. ಜನರು ಮಾಸ್ಕ್‌ ಹಾಕುವ ಜತೆಯಲ್ಲಿ ಕೋವಿಡ್‌ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದರೆ ಮಾತ್ರ ಇದನ್ನು ನಿಯಂತ್ರಣ ಮಾಡಲು ಸಾಧ್ಯವಿದೆ. ಜನರು ಜಾಗೃತರಾಗಿ ಲಸಿಕೆ ತೆಗೆದುಕೊಳ್ಳುವ ಜತೆಗೆ ಕೋವಿಡ್‌ ನಿಯಮಗಳನ್ನು ಪಾಲನೆ ಮಾಡುವುದು ಅತೀ ಅಗತ್ಯವಾಗಿದೆ ಎಂದು ಅವರು. ಮಾಹಿತಿ ನೀಡುತ್ತಾರೆ

ದಕ್ಷಿಣ ಕನ್ನಡ ಮೂರನೇ ಕೋವಿಡ್‌ ಅಲೆಯಲ್ಲಿ ಇಲ್ಲಿಯವರೆಗೂ 21ರಿಂದ 30ರ ವಯಸ್ಸಿನವರಲ್ಲಿ 1820 ಪಾಸಿಟಿವ್‌ ಪ್ರಕರಣ ದಾಖಲಾಗಿದೆ.ಈಗ ಅದರಲ್ಲಿ ಸಕ್ರಿಯ ಪ್ರಕರಣ 1305 ಇದೆ. ಈ ವರ್ಗ ಇತರ ಎಲ್ಲ ವರ್ಗಗಳಿಗಿಂತ ಹೆಚ್ಚು ರೀತಿಯಲ್ಲಿ ಕೋವಿಡ್‌ ಪಾಸಿಟಿವ್‌ ಕಾಣಿಸಿಕೊಳ್ಳಲು ಬಹುಮುಖ್ಯವಾದ ಕಾರಣವನ್ನು ಆರೋಗ್ಯ ಇಲಾಖೆಯವರು ಹೇಳುವಂತೆ ಕೋವಿಡ್‌ ಬಂದರೆ ನಮ್ಮನ್ನು ಯಾವುದೇ ರೀತಿಯಲ್ಲಿ ಸಮಸ್ಯೆ ತಂದೊಡ್ಡುವುದಿಲ್ಲ ಎನ್ನುವ ವಿಚಾರ ಮನಸ್ಸಿನಲ್ಲಿ ತುಂಬಿರುವುದರಿಂದ ಅವರು ಮಾಸ್ಕ್‌ ಸೇರಿದಂತೆ ಕೋವಿಡ್‌ ನಿಯಮಗಳನ್ನು ಪಾಲನೆ ಮಾಡುವಲ್ಲಿ ಹಿಂದೇಟು ಹಾಕುತ್ತಾರೆ. ಈ ಕಾರಣದಿಂದ ಈ ವರ್ಗದಲ್ಲಿ ಹೆಚ್ಚು ಪಾಸಿಟಿವ್‌ ದಾಖಲಾಗುತ್ತಿದೆ. ಇದರಿಂದ ಅವರು ಇತರರ ಸಂಪರ್ಕಕ್ಕೆ ಬಂದಾಗ ಅವರಿಗೂ ಹರಡುತ್ತದೆ. ಕೆಲವೊಂದು ಮನೆಯಲ್ಲಿ ಹಿರಿಯರು, ಮಕ್ಕಳಿಗೂ ಇವರಿಂದ ಕೋವಿಡ್‌ ಹರಡುತ್ತದೆ. ಇದೇ ಕಾರಣದಿಂದ ಈ ಬಾರಿಯ ಮೂರನೇ ಅಲೆಯಲ್ಲಿ 70ರಿಂದ ಮೇಲಿನವರು 7 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸಾವುಗಳು 10ರಷ್ಟು ಆಗಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು