Categories: ಮಂಗಳೂರು

ಡಾ.ಬಿ.ಆರ್ ಅಂಬೇಡ್ಕರ್ ಸಮಸ್ತ ಜನಕೋಟಿಯ ಏಳಿಗೆಗೆ ಶ್ರಮಿಸಿದರು; ಸುನಿಲ್ ಕುಮಾರ್ ಬಜಾಲ್

ಜಾತಿ ವ್ಯವಸ್ಥೆಯ ಕರಾಳತೆಗೆ ಬಲಿಯಾಗಿದ್ದ ಭಾರತದಲ್ಲಿ ಕೆಳ ಜಾತಿಯಲ್ಲಿ ಹುಟ್ಟಿ ಅಸ್ಪ್ರಶ್ಯತೆಯ ಎಲ್ಲಾ ನೋವುಗಳನ್ನು ಅನುಭವಿಸಿ ಅದೇ ಜಾತಿ ವ್ಯವಸ್ಥೆಯ ವಿರುದ್ದ ಧ್ರಢವಾದ ಸಮರ ಸಾರಿ ಶೋಷಿತ ಸಮುದಾಯದ ಕಣ್ಮಣಿಯಾಗಿ ಮೆರೆದ ಡಾ.ಬಿ.ಆರ್ ಅಂಬೇಡ್ಕರ್ ರವರು ತನ್ನ ಜೀವನವನ್ನು ಶೋಷಿತ ಕೆಳ ಸಮುದಾಯದ ಜನತೆಗಾಗಿ ಮೀಸಲಿಟ್ಟವರು. ಅದರ ಜೊತೆಗೆ ರೈತ ಕಾರ್ಮಿಕ ವಿದ್ಯಾರ್ಥಿ ಯುವಜನತೆ ಮಹಿಳೆಯರ ಪರವಾಗಿ ಅಪಾರ ಕಾಳಜಿ ವಹಿಸಿ ನ್ಯಾಯ ಒದಗಿಸಿದ ಮಹಾನ್ ಚೇತನ.ಹೀಗೆ ಅಂಬೇಡ್ಕರ್ ಸಮಸ್ತ ಜನಕೋಟಿಗಳ ಏಳಿಗೆಗಾಗಿ ಶ್ರಮಿಸಿರುವುದು ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ಅತ್ಯಂತ ಪ್ರಭಾವೀ ನಾಯಕರಾಗಿದ್ದರು ಎಂದು CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಅಭಿಪ್ರಾಯ ಪಟ್ಟರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 131ನೇ ಜನ್ಮ ದಿನಾಚರಣೆಯ ಅಂಗವಾಗಿ ಯೆಯ್ಯಾಡಿ ಕೊಂಚಾಡಿಯಲ್ಲಿ ಜರುಗಿದ ಬಹಿರಂಗ ಸಭೆಯಲ್ಲಿ ಅವರು ಭಾಗವಹಿಸುತ್ತಾ,ಈ ಮಾತುಗಳನ್ನು ಹೇಳಿದರು

ಮುಂದುವರಿಸುತ್ತಾ ಅವರು, ತತ್ವಶಾಸ್ತ್ರ, ಅರ್ಥಶಾಸ್ತ್ರಗಳ ಆಳವಾದ ಅದ್ಯಯನದ ಜೊತೆಗೆ ಕಾನೂನು ಪದವಿ ಪಡೆದ ಅಂಬೇಡ್ಕರ್ ರವರ ಸಾಮಾಜಿಕ ರಾಜಕೀಯ ಪ್ರಜ್ಞೆ ಆಧುನಿಕ ಭಾರತದ ಮೇಲೆ ಗಾಢವಾದ ಪರಿಣಾಮ ಬೀರಿದೆ. ಪುರೋಹಿತಶಾಹಿ ವರ್ಗದ ಹಿತಾಸಕ್ತಿಯನ್ನು ಕಾಪಾಡುವ ಜಾತಿ ವ್ಯವಸ್ಥೆಯ ವಿರುದ್ದ ಸೆಟೆದೆದ್ದು ಮನುಷ್ಯರೆಲ್ಲರೂ ಸಮಾನರು ಎಂದು ಹೇಳಿದ ಅಂಬೇಡ್ಕರ್ ರವರು ಇಡೀ ಜಗತ್ತು ಕೊಂಡಾಡುವಂತೆ ಮಾಡಿದ ಅತ್ಯದ್ಭುತ ಸಂವಿಧಾನವನ್ನು ರಚಿಸಿ ದೇಶಕ್ಕೆ ಕೊಡುಗೆ ನೀಡಿದರು ಎಂದು ಹೇಳಿದರು

ಪ್ರಾಸ್ತಾವಿಕವಾಗಿ ಮಾತನಾಡಿದ DYFI ಮಂಗಳೂರು ನಗರಾಧ್ಯಕ್ಷರಾದ ನವೀನ್ ಕೊಂಚಾಡಿಯವರು ಮಾತನಾಡುತ್ತಾ, ಸ್ವಾತಂತ್ರ್ಯ ಎಂಬುದು ಸ್ವೇಚ್ಛಾಚಾರವಲ್ಲ, ಬದಲಿಗೆ ಅದು ಒಂದು ಸಂಪೂರ್ಣ ಜವಾಬ್ದಾರಿ.ನಮ್ಮ ರಕ್ತದ ಕೊನೆಯ ಹನಿ ಇರುವವರೆಗೂ ನಮ್ಮ ಸ್ವಾತಂತ್ರ್ಯವನ್ನು ರಕ್ಷಿಸಲು ಧ್ರಢಸಂಕಲ್ಪ ಹೊಂದಬೇಕು ಎಂದು ಹೇಳಿದ ಅಂಬೇಡ್ಕರ್ ರವರು ಸ್ವಾತಂತ್ರ್ಯಗೊಂಡ ನಮ್ಮ ದೇಶಕ್ಕೆ ಅತ್ಯತ್ತಮವಾದ ಸಂವಿಧಾನ ರಚಿಸುವ ಮೂಲಕ ಭದ್ರ ಬುನಾದಿಯನ್ನು ಹಾಕಿದರು.ಜಾತಿ ಧರ್ಮ ಭಾಷೆಯ ಹೆಸರಿನಲ್ಲಿ ನಿರಂತರವಾಗಿ ದ್ವೇಷ ಹರಡುತ್ತಿದ್ದ ಭಾರತದಲ್ಲಿ ಅಂಬೇಡ್ಕರ್ ರಚಿಸಿದ ಸಂವಿಧಾನ ನಿಟ್ಟುಸಿರು ಬಿಡುವಂತಾಯಿತು.ಸ್ವಾತಂತ್ರ್ಯ ದೊರೆತ 75 ವರ್ಷಗಳಲ್ಲಿ ದೇಶವನ್ನು ಒಂದಾಗಿ ಉಳಿಸಿದ್ದು ಹಾಗೂ ಕೆಲವರ್ಗದ ಜನರು ಉನ್ನತ ಸ್ಥಾನವನ್ನು ಅಲಂಕರಿಸಲು ಸಾಧ್ಯವಾಗಿದ್ದು ಸಂವಿಧಾನದಿಂದ ಮಾತ್ರವೇ ಹೊರತು ಬೇರೇನಿಲ್ಲ ಎಂದು ಹೇಳಿದರು

ಸಭೆಯ ಅಧ್ಯಕ್ಷತೆಯನ್ನು ಹಿರಿಯ ನಾಯಕರಾದ ನಾರಾಯಣರವರು ವಹಿಸಿದ್ದರು.ಮಾಜಿ ಸೈನಿಕರಾದ ವೇಣುಗೋಪಾಲರವರು ಅಂಬೇಡ್ಕರ್ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿದರು. ವೇದಿಕೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ನಗರಾಧ್ಯಕ್ಷರಾದ ರಾಧಾಕ್ರಷ್ಣ,ಕಾರ್ಮಿಕ ಮುಖಂಡರಾದ ರವಿಚಂದ್ರ ಕೊಂಚಾಡಿರವರು ಉಪಸ್ಥಿತರಿದ್ದರು

ಪ್ರಾರಂಭದಲ್ಲಿ ಪ್ರವೀಣ್ ಕೊಂಚಾಡಿಯವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ, ಕೊನೆಯಲ್ಲಿ ಪದ್ಮನಾಭ ಕೊಂಚಾಡಿಯವರು ವಂದಿಸಿದರು.

Gayathri SG

Recent Posts

ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

ಇಲ್ಲಿನ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಹಂತಕ ಗಿರೀಶ ಉರುಫ್‌ ವಿಶ್ವ ಸಾವಂತ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ಮತ್ತೊಂದು ಪ್ರಕರನ…

26 mins ago

ʼರಾಹುಲ್ ಮತ್ತು ನಾನು ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಬಿಜೆಪಿ ಲಾಭವಾಗುತ್ತಿತ್ತುʼ

ದೇಶದ್ಯಾಂತ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ನಡೆಸಬೇಕೆಂಬ ಉದ್ದೇಶದಿಂದ ನಾನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ, ರಾಹುಲ್ ಗಾಂಧಿ…

29 mins ago

ಪೊಲೀಸ್‌ ಕಸ್ಟಡಿಯಲ್ಲಿಯೇ ದಂಪತಿ ಆತ್ಮಹತ್ಯೆ: ರೊಚ್ಚಿಗೆದ್ದು ಠಾಣೆಗೆ ಬೆಂಕಿ ಹಚ್ಚಿದ ಗ್ರಾಮಸ್ಥರು

ಪೊಲೀಸ್‌ ಕಸ್ಟಡಿಯಲ್ಲಿಯೇ ಗಂಡ ಹಾಗೂ ಹೆಂಡತಿ ಮೃತಪಟ್ಟಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.

52 mins ago

ಆತ್ಮಹತ್ಯೆಗೆ ಮುನ್ನ ನಟ ಚಂದು ಲಾಸ್ಟ್​ ಮೆಸೇಜ್​ ಇದು

ಇದು ತೆಲುಗು ಕಿರುತೆರೆ ನಟ ಚಂದು ಆತ್ಮಹತ್ಯೆಗೂ ಮುನ್ನ ಬರೆದ ಸಂದೇಶ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಂದುವಿನ ಕೊನೆಯ ಮೆಸೇಜ್​…

1 hour ago

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆ ಸಾಧ್ಯತೆ

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

1 hour ago

ಜೀವ -ಜಲ ಉಳಿಸಲು ಸ್ವಯಂ ಪ್ರೇರಣೆಯ ಪಾಲ್ಗೊಳ್ಳುವಿಕೆ ಮುಖ್ಯ: ಪ್ರಭಾಕರ ಶರ್ಮಾ

ನೀರಿನ ಮಿತ ಬಳಕೆ, ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರು  ಸ್ವಯಂ ಪ್ರೇರಿತರಾಗಿ ತಮ್ಮ ಇತಿ ಮಿತಿಯಲ್ಲಿ ಸಣ್ಣ ಕೊಡುಗೆಗಳನ್ನು ನೀಡುವ ಮೂಲಕ…

1 hour ago