News Karnataka Kannada
Monday, April 29 2024
ಮಂಗಳೂರು

ಕೂಳೂರು-ಕೋಡಿಕಲ್ ನಾಗಬನ ಧ್ವಂಸ ಪ್ರಕರಣ: ಎಂಟು ಮಂದಿ ಆರೋಪಿಗಳ ಬಂಧನ

Arrest 22082021
Photo Credit :

ಮಂಗಳೂರು : ನಗರದ ಕೋಡಿಕಲ್ ಮತ್ತು ಕೂಳೂರಿನಲ್ಲಿ ನಡೆದ ನಾಗಬನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾವೂರಿನ ಸಫ್ವಾನ್, ಪ್ರವೀಣ್ ಅನಿಲ್ ಮೊಂತೇರೊ, ಸೊಹೈಲ್, ನಿಖಿಲೇಶ್, ಜಯಕುಮಾರ್, ಪ್ರತೀಕ್, ಮಂಜುನಾಥ್ ಮತ್ತು ನೌಷಾದ್ ಬಂದಿತ ಆರೋಪಿಗಳು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಆರೋಪಿಗಳನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವುದು ಗಮನಕ್ಕೆ ಬಂದಿದೆ. ಅವರ ಪತ್ತೆಗೂ ಕಾರ್ಯಾಚರಣೆ ಮುಂದುವರಿದಿದೆ ಎಂದರು.

ಸರ ಕಳ್ಳತನ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿದ್ದು ಬೇಲ್ ಮೂಲಕ ಹೊರ ಬಂದಿರುವ ಇರ್ಷಾದ್ ಮತ್ತು ಅಚ್ಚಿ ಎಂಬ ಆರೋಪಿಗಳು ಪ್ರಕರಣದ ಮೂಲ ಸೂತ್ರದಾರರು. ನಗರದಲ್ಲಿ ಕಳ್ಳತನಕ್ಕೆ ಪೊಲೀಸರು ಅಡ್ಡಿಯಾಗುತ್ತಿದ್ದು, ಪೊಲೀಸರ ಗಮನ ಬೇರಡೆ ಸೆಳೆಯಲು ಸಂಚು ರೂಪಿಸಿದ್ದರು. ಇದನ್ನು ತಮ್ಮ ಬಳಗದ ಸಫ್ವಾನ್ ಕಾವೂರು ಗಮನಕ್ಕೆ ತಂದಿದ್ದರು.

ಸಫ್ವಾನ್ ತಂಡದವರು ಸೇರಿಕೊಂಡು ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸಿದರೆ ಪೊಲೀಸರ ಗಮನ ಆ ಕಡೆ ಹೋಗುತ್ತೆ ಎಂದು ನಾಗಬನ ಧ್ವಂಸ ಕೃತ್ಯ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಈ ಮಾಹಿತಿ ನೀಡಿದ್ದಾರೆ. ಇನ್ನಷ್ಟು ವಿಚಾರಣೆ ನಟೆಯುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಆರೋಪಿಗಳ ಪತ್ತೆಗೆ 40 ಮಂದಿಯನ್ನು ಒಳಗೊಂಡ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂದಿಸಿದೆ. ಉಳಿದ ಆರೋಪಿಗಳನ್ನು ಕೂಡ ಶೀಘ್ರ ಬಂಧಿಸಲಾಗುವುದು ಎಂದವರು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು