ಮಂಗಳೂರು

ಕಳೆಂಜದಲ್ಲಿ ಯಕ್ಷಭಾರತಿ ವತಿಯಿಂದ 2 ದಿನಗಳ ಸಂಸ್ಕಾರ ಶಿಕ್ಷಣ ಶಿಬಿರ

ಬೆಳ್ತಂಗಡಿ: ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆಶ್ರಯದಲ್ಲಿ ದೇವಸ್ಥಾನದ ಆವರಣದಲ್ಲಿ ಯಕ್ಷಭಾರತಿ( ರಿ.) ಕನ್ಯಾಡಿ ಇದರ ಶಿಕ್ಷಣ ಸೇವಾ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗಾಗಿ ನಡೆದ ಎರಡು ದಿನದ ಸಂಸ್ಕಾರ ಶಿಕ್ಷಣ ಶಿಬಿರವನ್ನು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ ರಾವ್ ಮುಂಡ್ರುಪ್ಪಾಡಿ ಉದ್ಘಾಟಿಸಿ ಇಂದಿನ ಯಾಂತ್ರಿಕ ಬದುಕಿನಲ್ಲಿ ವಿದ್ಯಾರ್ಥಿಗಳಿಗೆ ಇಂತಹ ಸಂಸ್ಕಾರ ಶಿಕ್ಷಣ ಶಿಬಿರದ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಶಿಬಿರದ ಪೂರ್ಣ ಪ್ರಯೋಜನೆ ಪಡೆದು ಬದುಕಿನಲ್ಲಿ ಅಳವಡಿಸಿಕೊಂಡು ಸಂಸ್ಕಾರವಂತರಾಗಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದರು.

ಮುಖ್ಯ ಅಭ್ಯಾಗತರಾದ ಸೌತಡ್ಕ ಕ್ಷೇತ್ರದ ಪ್ರಧಾನ ಅರ್ಚಕ ಸತ್ಯಪ್ರಿಯ ಕಲ್ಲೂರಾಯರು ಶಿಬಿರಾರ್ಥಿಗಳಿಗೆ ದೇವರ ಅನುಗ್ರಹವಿರಲೆಂದು ಶುಭ ಹಾರೈಸಿದರು. ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಧರ ರಾವ್ ಕಾಯಡ, ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಹರಿದಾಸ ಗಾಂಭೀರ ಧರ್ಮಸ್ಥಳ, ಅಂಶುಮಾನ್ ಅಭ್ಯಂಕರ್ ಉಪಸ್ಥಿತರಿದ್ದರು.

ಯಕ್ಷಭಾರತಿ(ರಿ ) ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ,. ಕುl ಪ್ರಜ್ಞಾ ಮತ್ತು ಬಳಗ ಪ್ರಾರ್ಥಿಸಿ,. ಸಂಚಾಲಕ ಮಹೇಶ ಕನ್ಯಾಡಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಿಬಿರ ಸಂಯೋಜಕ ಕುಸುಮಾಕರ ಕೊತ್ತೋಡಿ ವಂದಿಸಿದರು.

ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಅಂಶುಮಾನ್ ಅಭ್ಯಂಕರ್ ಅವರು ಭಗವದ್ಗೀತೆಯ ಶ್ಲೋಕಗಳ ಪಠಣಾಭ್ಯಾಸ, ಹರಿದಾಸ ಗಾಂಭೀರ ಅವರು ಪುರಾಣದ ಕಥೆಗಳು, ಉದಯ ಸುಬ್ರಹ್ಮಣ್ಯ ಅವರು ಯೋಗ ಮತ್ತು ಆರೋಗ್ಯ, ಸುದರ್ಶನ ಕನ್ಯಾಡಿಯವರು ದೇಶೀಯ ಆಟಗಳು, ಹರೀಶ ನೆರಿಯ ಅವರು ಭಜನೆ ಮತ್ತು ಭಕ್ತಿ ಕುರಿತಾದ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಟ್ಟರು .

ಸಮಾರೋಪ ಸಮಾರಂಭ
ಎರಡು ದಿನದ ಸಂಸ್ಕಾರ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭ ದೀಪ ಜ್ಯೋತಿ ಕಾರ್ಯಕ್ರಮದೊಂದಿಗೆ ನಡೆಯಿತು. ಯಕ್ಷಭಾರತಿ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಧರ ರಾವ್ ಕಾಯಡ, ಅಳದಂಗಡಿ ಜೂನಿಯರ್ ಕಾಲೇಜಿನ ಪ್ರಾಧ್ಯಾಪಕ ಶ್ರೀಮತಿ ಭಾರತಿ ಎಂ ಎಲ್ . , ಉಜಿರೆ ತಾಲೂಕು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾರೀರಿಕ ಪ್ರಮುಖ್ ತಿಲಕ್ ಪಟ್ರಮೆ ಉಪಸ್ಥಿತರಿದ್ದರು. ಶ್ರೀಮತಿ ಸುರೇಖಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಕುlಪ್ರತಿಮಾ ಸ್ವಾಗತಿಸಿ, ಕುಸುಮಾಕರ ಕೊತ್ತೋಡಿ ಧನ್ಯವಾದ ಅರ್ಪಿಸಿದರು. ಎರಡನೇ ದಿನದ ಶಿಬಿರದಲ್ಲಿ ಮಹಾಭಾರತದ ಕಥೆಗಳು ವಿಷಯವಾಗಿ ಮಹೇಶ ಕನ್ಯಾಡಿ, ಯೋಗ-ಆರೋಗ್ಯ ವಿಷಯದ ಕುರಿತು ಶ್ರೀ ಧ.ಮ.ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಡಾlಶಂಕರ್, ಭಜನೆಯ ವಿಷಯದಕುರಿತು ಶ್ರೀಮತಿ ಸುರೇಖಾ, ನನ್ನ ದೇಶ ಭಾರತ ವಿಷಯದ ಕುರಿತು ತಿಲಕ್ ಪಟ್ರಮೆ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಶಿಬಿರದಲ್ಲಿ ಪರಿಸರದ ಒಟ್ಟು 61 ವಿದ್ಯಾರ್ಥಿಗಳು ಭಾಗವಹಿಸಿದ್ದರು.

Gayathri SG

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

7 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

8 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

9 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

9 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

9 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

9 hours ago