Categories: ಮಂಗಳೂರು

ಎಸ್ಸೆಸ್ಸೆಲ್ಸಿ ಫಲಿತಾಂಶ: 624 ಅಂಕ ಪಡೆದ ಕಾಯರ್ತಡ್ಕದ ಬಾಲಕಿ ಅನನ್ಯಾಗೆ ಸನ್ಮಾನ

ಬೆಳ್ತಂಗಡಿ: 2021-22 ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ತಾಲೂಕಿನ ಕಾಯರ್ತಡ್ಕ ಸರಕಾರಿ ಪ್ರೌಢ ಶಾಲೆಯಲ್ಲಿ ಓದಿದ ಕಡು ಬಡತನದ ಗ್ರಾಮೀಣ ಬಾಲಕಿ ಅನನ್ಯಾ 624 ಅಂಕ ಗಳಿಸಿ ಸರಕಾರಿ ಕನ್ನಡ ಮಾಧ್ಯಮ ವಿಭಾಗದಲ್ಲಿ ತಾಕೂಕಿಗೆ ಪ್ರಥಮ ಸ್ಥಾನಿಯಾಗಿ ಹಾಗೂ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.

ಕಾಯರ್ತಡ್ಕ ಗಾಳಿತೋಟ ಎಂಬಲ್ಲಿನ ಬಡಕುಟುಂಬದ ಶಾಲಿನಿ‌ ಅವರ ಪುತ್ರಿಯಾಗಿರುವ ಅನನ್ಯಾ ಅವರು ಬದುಕಿನ ಜಂಜಾಟಗಳ ನಡುವೆಯೂ ತಮಗಿದ್ದ ಸೀಮಿತ ಅವಕಾಶವನ್ನು ಬಳಸಿ ನಿಷ್ಟೆಯಿಂದ ಅಭ್ಯಾಸಮಾಡಿ ಸರಕಾರಿ ಕನ್ನಡ ಮಾದ್ಯಮ ಶಾಲಯಲ್ಲೇ ಗಮನಸೆಳೆಯಬಹುದಾದ ಸಾಧನೆ ದಾಖಲಿಸಿದ್ದಾರೆ.

ಜೆಸಿಐ ಕೊಕ್ಕಡ ಕಪಿಲಾ ದಿಂದ ಸನ್ಮಾನ: ಭವಿಷ್ಯದ ಶಿಕ್ಷಣಕ್ಕೆ ಸಹಕಾರ ಭರವಸೆ
ವಿದ್ಯಾರ್ಥಿನಿ ಅನನ್ಯಾ‌ ಅವರ ಸಾಧನೆಯನ್ನು ಗುರುತಿಸಿದ ಜೆಸಿಐ ಕೊಕ್ಕಡ ‘ಕಪಿಲಾ” ಇದರ ಪದಾಧಿಕಾರಿಗಳು ಅಧ್ಯಕ್ಷ ಶ್ರೀಧರ ರಾವ್ ಕಳೆಂಜ ಅವರ ನೇತೃತ್ವದಲ್ಲಿ ವಿದ್ಯಾರ್ಥಿನಿಯ ಮನೆಗೇ ತೆರಳಿ ತಾಯಿ ಶಾಲಿನಿ, ಸಹೋದರ ಆಕಾಶ್ ವಿ.ಬಿ ಅವರ ಸಮ್ಮುಖದಲ್ಲಿ ಮೇ.20 ಸನ್ಮಾನಿಸಿ ಪ್ರೋತ್ಸಾಹಿಸಿದರು.

ಈಕೆಯು ಮುಂದಕ್ಕೆ ವಿಜ್ಞಾನ ವಿಭಾಗದಲ್ಲಿ ಪಿ.ಯು. ಸಿ ಕಲಿಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದು ಇದಕ್ಕೆ ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆ ಉಚಿತ ಪ್ರವೇಶಾಸವಕಾಶ ಕಲ್ಪಿಸಿದೆ. ಆಕೆಯ ಎರಡು ವರ್ಷಗಳ ಶಿಕ್ಷಣಕ್ಕೆ ಪೂರಕವಾದ ಸಹಕಾರವನ್ನು ಜೇಸಿಐ ಕೊಕ್ಕಡ ಕಪಿಲಾ‌ ಹಾಗೂ ದಾನಿಗಳ ನೆರವಿನಿಂದ ಭರಿಸುವುದಾಗಿ ಜೇಸಿಐ ಅಧ್ಯಕ್ಷ ಶ್ರೀಧರ್ ರಾವ್ ಅವರು ಭರವಸೆ ನೀಡಿದ್ದಾರೆ.‌

ಸಾಧಕಿಯನ್ನು ಸನ್ಮಾನಿಸುವ ಸಂದರ್ಭದಲ್ಲಿ ಜೋಸೆಫ್ ಪಿರೇರಾ, ಜಿತೇಶ್ ಎಲ್ ಪಿರೇರಾ, ಸಂತೋಷ ಜೈನ್, ಅಕ್ಷತ್ ರೈ, ಪಿ.ಟಿ. ಸೆಬಾಸ್ಟಿನ್, ಹರೀಶ್, ಜಾನ್ಸನ್, ಜೋಸೆಫ್ ಎ.ಜೆ., ನರಸಿಂಹ ನಾಯಕ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Sneha Gowda

Recent Posts

ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆ : ಡೆತ್‌ನೋಟು ಪತ್ತೆ

ತನ್ನ ಮಕ್ಕಳಿಬ್ಬರನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಸಾವಿಗೆ ಮುನ್ನ ವಿಡಿಯೊ ಮೆಸೇಜ್‌ ಮಾಡಿರುವ ಮಹಿಳೆ, ಪತಿಯ ಕಿರುಕುಳದಿಂದ…

2 mins ago

ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟ; ಇಲ್ಲಿ ಫಲಿತಾಂಶ ವೀಕ್ಷಿಸಿ

2023-24ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶವು ಇಂದು ಪ್ರಕಟಗೊಂಡಿದೆ. ಕರ್ನಾಟಕದ ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಈ ಸಲದ…

9 mins ago

ಪ್ರಸಕ್ತ ಸಾಲಿನಿಂದ 3 ವರ್ಷ ಪದವಿ : ಉನ್ನತ ಶಿಕ್ಷಣ ಇಲಾಖೆ

ರಾಜ್ಯ ಶಿಕ್ಷಣ ಆಯೋಗದ ಮಧ್ಯಂತರ ವರದಿ ಅನುಷ್ಠಾನಕ್ಕೆ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಆಯೋಗದ ಶಿಫಾರಿಸಿನಂತೆ 2024-25ನೇ ಸಾಲಿನ…

26 mins ago

ಹುಟ್ಟೂರಿಗೆ ಆಗಮಿಸಿದ ಮಾಜಿ ಶಾಸಕ ಕೆ.ವಸಂತ ಬಂಗೇರ ಪಾರ್ಥಿವ ಶರೀರ

ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರ (79)…

53 mins ago

ಮಲಯಾಳಂ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಿರ್ದೇಶಕ ಸಂಗೀತ್ ಶಿವನ್ ಮೇ 8 ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ…

2 hours ago

ಮುಸ್ಲಿಂ ಯುವತಿಯೊಂದಿಗೆ ಮದುವೆ : ಖಾಕಿ ವಿರುದ್ಧ ಹಿಂದೂ ಸಂಘಟನೆ ಪ್ರತಿಭಟನೆ

ಬಾದಾಮಿ ಮೂಲದ ರುಬಿನಾ ಮತ್ತು ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಲ ಬಾಗಲಕೋಟೆ ಎಸ್​ಪಿ ಕಚೇರಿಗೆ ಬಂದಿದ್ದು,…

2 hours ago