ಮಂಗಳೂರು

‘ಎದೆತುಂಬಿ ಹಾಡುವೆನು ರಿಯಾಲಿಟಿ ಶೋ’ ಎರಡನೇ ಸ್ಥಾನ ಪಡೆದ ಮಂಗಳೂರಿನ ಸಂದೇಶ್‌

ಮಂಗಳೂರು :ಕನ್ನಡ  ಕಲರ್ಸ್‌ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋನಲ್ಲಿ ಮಂಗಳೂರಿನ ಸಂದೇಶ್‌ ನೀರುಮಾರ್ಗ ಅವರು ರನ್ನರ್‌ಅಪ್‌ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

ಈ ರಿಯಾಲಿಟಿ ಶೋನಲ್ಲಿ ಅಂತಿಮ ಹಂತ ತಲುಪಿದ್ದ 6 ಸ್ಪರ್ಧಿಗಳ ಪೈಕಿ ನಾಲ್ವರು ಫೈನಲ್‌ ಪ್ರವೇಶಿಸಿದ್ದರು. ಅದರಲ್ಲಿ ಸಂದೇಶ್‌ ಮೊದಲಿಗರು. ಕೊನೆಯ ಎರಡು ಸ್ಥಾನದಲ್ಲಿ ಮೊದಲ ಸ್ಥಾನವನ್ನು ಬಳ್ಳಾರಿಯ ಚಿನ್ಮಯ್‌ ಅವರು ಪಡೆದರೆ ಎರಡನೇ ಸ್ಥಾನ ಸಂದೇಶ್‌ ನೀರುಮಾರ್ಗ ಅವರ ಪಾಲಾಗಿದೆ. ಇದರ ಜತೆ 5 ಲಕ್ಷ ರೂ. ನಗದು ಗೆದ್ದಿದ್ದಾರೆ.

ಈ ಕುರಿತು ಸಂದೇಶ್‌ ಅವರು ಉದಯವಾಣಿಗೆ ಪ್ರತಿಕ್ರಿಯಿಸಿ, “ಈ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದಕ್ಕೆ ನನಗೆ ಹೆಮ್ಮೆ ಇದೆ. ಫೈನಲ್‌ ಪ್ರವೇಶಿಸಿದ್ದೇ ದೊಡ್ಡ ಸಾಧನೆ. ಶೋನಲ್ಲಿ ಭಾಗವಹಿಸಿ ಹಾಡುಗಾರಿಕೆಯ ಅನೇಕ ವಿಷಯಗಳನ್ನು ಕಲಿತೆ’ ಎಂದಿದ್ದಾರೆ.

Gayathri SG

Recent Posts

ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ ನಿಧನ

ಮುಂಬಯಿಯ ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ (75) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು.

15 mins ago

ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ: 10 ಮಂದಿ ಸಜೀವ ದಹನ

ಬಸ್‌ಗೆ ಬೆಂಕಿ ಹತ್ತಿಕೊಂಡು 10 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ  ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ ವೇಯಲ್ಲಿ…

31 mins ago

11 ತಿಂಗಳಿನಲ್ಲಿ ಬರೋಬ್ಬರಿ 5.38 ಕೋಟಿ ದಂಡ ವಸೂಲಿ ಮಾಡಿದ ಬಿಎಂಆರ್‌ಸಿಎಲ್‌

ನಮ್ಮ ಮೆಟ್ರೋದಲ್ಲಿ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಹಲವಾರು ನೀತಿ ನಿಯಮಗಳನ್ನು ಬಿಎಂಆರ್‌ಸಿಎಲ್‌ ಜಾರಿ ಮಾಡಿದೆ. ಬರೀ ನಿಯಮ ಮಾಡಿದ್ದು ಮಾತ್ರವಲ್ಲದೇ…

1 hour ago

ಆರ್‌ಸಿಬಿ ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯ: ಸೈಬರ್‌ ಖದೀಮರಿಂದ ವಂಚನೆ

ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್‌ ನೀಡುತ್ತೇವೆ…

1 hour ago

ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು ಮುಂದಾದ ಸರಕಾರ

ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸರಕಾರಕ್ಕೆ ಸವಾಲಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು…

2 hours ago

ಬಹುಭಾಷೆಯಲ್ಲಿ ಡಬ್ ಆಗಿದೆ ದೊಡ್ಮನೆ ಕುಡಿಯ ‘ಯುವ’ ಸಿನಿಮಾ

ದೊಡ್ಮನೆ ಕುಡಿ ಯುವರಾಜ್‌ಕುಮಾರ್ ನಟನೆಯ ‘ಯುವ’ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದು ಇದೀಗ ಬಹುಭಾಷೆಯಲ್ಲಿ ಯುವ ಸಿನಿಮಾ ಡಬ್ ಆಗಿದೆ.…

2 hours ago