Categories: ಮಂಗಳೂರು

ಉತ್ತಮ ಪರಂಪರೆ, ಧರ್ಮ, ಸಂಸ್ಕೃತಿಯನ್ನು ದ.ಕ. ಜಿಲ್ಲೆಯ ಜನರು ಕಾಪಾಡಿಕೊಂಡು ಬಂದಿದ್ದಾರೆ: ಡಿ.ಕೆ.ಶಿವಕುಮಾರ್

ಬಂಟ್ವಾಳ : ಎಲ್ಲಾ ಧರ್ಮದ ಜನರಿಗೂ ಬದುಕಲು ಅವಕಾಶ ನೀಡಿದ ಅವಿಭಜಿತ ದ.ಕ. ಜಿಲ್ಲೆ ಪವಿತ್ರವಾದ ಜಿಲ್ಲೆ. ಸಂಸ್ಕೃತಿ, ಶಿಕ್ಷಣ, ಧರ್ಮಕ್ಷೇತ್ರಗಳಿಗಳಿಗೆ ಹೆಸರುವಾಸಿಯಾದ ಈ ಜಿಲ್ಲೆಯಲ್ಲಿ ಉತ್ತಮ ಪರಂಪರೆ, ಧರ್ಮ, ಸಂಸ್ಕೃತಿಯನ್ನು ಇಲ್ಲಿನ ಜನರು ಕಾಪಾಡಿಕೊಂಡು ಬಂದಿದ್ದಾರೆ. ಇಲ್ಲಿನ ಜನ ಇಡೀ ರಾಜ್ಯಕ್ಕೆ ಮಾರ್ಗದರ್ಶಕರು, ಜಾತಿ, ಧರ್ಮದ ಭೇದ ಬಿಟ್ಟು ಒಗ್ಗಟ್ಟಿನಿಂದ ಬದುಕುತ್ತಿದ್ದೀರಿ. ಈಗ ಕೆಲವಡೆ ಸ್ವಲ್ಪ ವ್ಯತ್ಯಾಸ ಕಂಡು ಬರುತ್ತಿದ್ದರೂ ಅಂತಿಮವಾಗಿ ನಂಬಿಕೆ, ಪ್ರೀತಿ, ವಿಶ್ವಾಸ ಮಾತ್ರ ಉಳಿದು ಮಾನವ ಧರ್ಮಕ್ಕೆ ಜಯವಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ಪಂಜಿಕಲ್ಲು ‌ಗ್ರಾಮದ ಬಾಲೇಶ್ವರ ಬಳಿ ಶಿಲಾಮಯವಾಗಿ ನಿರ್ಮಾಣಗೊಂಡಿರುವ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ನೂತನ ಏಕಶಿಲಾ ಮಾನಸ್ತಂಭೋಪರಿ ಚತುರ್ಮುಖ 1008 ಶ್ರೀ ಆದಿನಾಥ ತೀರ್ಥಂಕರರ ಪಂಚಕಲ್ಯಾಣ , ಪ್ರತಿಷ್ಠಾ ಮಹೋತ್ಸವದಲ್ಲಿ ಸೋಮವಾರ ಕೊನೆಯ ದಿನದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು‌ ಮಾತನಾಡಿದರು.
ಅಧ್ಬುತವಾದ ಬಸದಿ ಇಲ್ಲಿ ನಿಮಾಣಗೊಂಡಿದೆ. ಇಂತಹ ಪವಿತ್ರ ಕಾರ್ಯಕ್ಕೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಆದಿನಾಥ ಸ್ವಾಮೀ ಶಾಂತಿ ನೆಮ್ಮದಿಯನ್ನು ನೀಡಲಿ ಎಂದು ಶುಭ ಕೋರಿದ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದೇ ವಿಶೇಷ ವಿಮಾನದ ಮೂಲಕ ಆಗಮಿಸಿರುವುದಾಗಿ ತಿಳಿಸಿದರು.

ಮಾಜಿ ಸಚಿವ ರಮಾನಾಥ ರೈ ಅತಿಥಿ‌ಸ್ಥಾನದಿಂದ ಮಾತನಾಡಿ, ಜೈನ ಸಮುದಾಯ ಚಿಕ್ಕ ಸಮಾಜವಾದರೂ ಬಲಿಷ್ಠವಾಗಿದೆ. ವರ್ತಮಾನ ಕಾಲದಲ್ಲಿ ಅಹಿಂಸಾ ಪರಮೋ ಧರ್ಮದ ಸಿದ್ಧಾಂತ ಅಗತ್ಯವಿದ್ದು, ಭವಿಷ್ಯದಲ್ಲಿ ಅಹಿಂಸಾ ಸಮಾಜ ನಿರ್ಮಾಣವಾಗಲಿ ಎಂದು ಆಶಿಸಿದರು.
ಮೂಡಬಿದ್ರೆ ಜೈನ ಮಠದ ಸ್ವಸ್ತಿಶ್ರೀ ಡಾ.ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿ ಅವರು ಆರ್ಶೀವಚನಗೈದರು.

ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ.ಸುರೇಂದ್ರಕುಮಾರ್ ಸಭಾಧ್ಯಕ್ಷತೆ ವಹಿಸಿದ್ದರು. ವಿ.ಪ.ಸದಸ್ಯ‌ರಾದ ಮಂಜುನಾಥ ಭಂಡಾರಿ,ಮಾಜಿ ಸಚಿವ ಅಭಯಚಂದ್ರ ಜೈನ್, ಜೀರ್ಣೋದ್ದಾರ , ಪಂಚಕಲ್ಯಾಣ ಮಹೋತ್ಸವ ಸಮಿತಿ‌ ಕಾರ್ಯದರ್ಶಿ ದೇವಕುಮಾರ್, ಭಾರತೀಯ ಜೈನ್ ಮಿಲನ್ ನ ಮಂಗಳೂರು ವಿಭಾಗದ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ,ಜಿಲ್ಲಾ ಯುವಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಥುನ್ ರೈ ವೇದಿಕೆಯಲ್ಲಿದ್ದರು.

ಪಂಚಕಲ್ಯಾಣ ಮಹೋತ್ಸವ ಸಮಿತಿ‌ ಅಧ್ಯಕ್ಷ ಸುದರ್ಶನ್ ಜೈನ್ ಪ್ರಸ್ತಾವನೆಗೈದು, ಸ್ವಾಗತಿಸಿದರು.ಪತ್ರಕರ್ತೆ ನಮಿತಾ ಜೈನ್ ಕಾರ್ಯಕ್ರಮ ನಿರೂಪಿಸಿ ,ವಂದಿಸಿದರು.

ಆದಿನಾಥ ತೀರ್ಥಂಕರರ ಪ್ರತಿಷ್ಠೆ:
ಸೋಮವಾರ ಬಸದಿಯಲ್ಲಿ ೧೦೦೮ ಭಗವಾನ್ ಶ್ರೀ ಆದಿನಾಥ ತೀರ್ಥಂಕರರ ಪ್ರತಿಷ್ಠೆ, ನಯನೋನ್ಮಿಲನ, ಕೇವಲಜ್ಞಾನ ಕಲ್ಯಾಣ ಮಹೋತ್ಸವ, ಮುಖವಸ್ತ್ರ ಉದ್ಘಾಟನೆ, ಮೇಗಿನನೆಲೆ ೧೦೦೮ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಿಂಬ ಪ್ರತಿಷ್ಠಾ ವಿಧಾನ, ಮುಖವಸ್ತ್ರ ಉದ್ಘಾಟನೆ, ೫೪ ಕಲಶ ಅಭಿಷೇಕ, ಮಾನಸ್ತಂಭೋಪರಿ ಶ್ರೀ ಆದಿನಾಥ ತೀರ್ಥಂಕರರ ಚತುರ್ಮುಖ ಬಿಂಬ ಪ್ರತಿಷ್ಠೆ, ೧೦೮ ಕಲಶಾಭಿಷೇಕ, ೧೨.೩೫ಕ್ಕೆ ಶಿಖರಾರೋಹಣ, ಶ್ರೀ ಬಲಿ ವಿಧಾನ, ಯಾಗಮಂಡಲಾರಾಧನೆ, ಮಧ್ಯಾಹ್ನ ಸಮವಸರಣ ಪೂಜೆ, ಶ್ರೀ ಸಿದ್ಧಚಕ್ರಯಂತ್ರಾರಾಧನೆ, ಭಗವಾನ್ ಶ್ರೀ ಆದಿನಾಥ ಸ್ವಾಮಿಗೆ ೧೦೦೮ ಕಲಶಮಹಾಭಿಷೇಕ ಮಹೋತ್ಸವ. ಸಂಜೆ ವೈಭವದ ಅಗ್ರೋದಕ ಮೆರವಣಿಗೆಯು ನಡೆಯಿತು. ಈ ಎಲ್ಲಾ ವೈಧಿಕ ವಿಧಿವಿಧಾನಕ್ಕೆ 108 ಅಮೋಘಕೀರ್ತಿ ಮುನಿ ಮಹಾರಾಜರು, ಅಮರಕೀರ್ತಿ ಮುನಿ ಮಹಾರಾಜರು,105 ಕುಲ್ಲಕ್ ನಿರ್ವಾಣ್ ಸಾಗರ ಮಹಾರಾಜರ ಮೂಡಬಿದ್ರೆ ಜೈನ ಮಠದ ಸ್ವಸ್ತಿಶ್ರೀ ಡಾ.ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾಸ್ವಾಮಿ ಗಳು ಸೇರಿಂದಂತೆ ಸಾವಿರಾರು ಮಂದಿ ಶ್ರಾವಕ, ಶ್ರಾವಕಿಯರು ಸಾಕ್ಷಿಗಳಾದರು.ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ ಸಂಗಮ ಹಾಗೂ ನೃತ್ಯ‌ರೂಪಕ “ಸತ್ಯ ಮೇವ ಜಯತೆ ಹಾಗೂ ಜಿನಗಾನ ವಿಶಾರದೆ ಜಯಶ್ರೀ ಡಿ ಜೈನ್ ಹೊರನಾಡು ಇವರಿಂದ ಸಂಗೀತ ಪೂಜಾಷ್ಠಕ ನಡೆಯಿತು.

Gayathri SG

Recent Posts

ಜಿಂಕೆ ಕೊಂದು ಎಳೆದೊಯ್ದ ಹುಲಿ : ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ದೃಶ್ಯ

ಬಂಡೀಪುರದಲ್ಲಿ ಸಪಾರಿಗೆ ತೆರಳಿದ್ದ ವಾಹನಗಳ ಸನಿಹದಲ್ಲೇ ಹುಲಿಯೊಂದು ಜಿಂಕೆಯನ್ನ ಭೇಟೆಯಾಡಿ ಎಳೆದೊಯ್ಯುತ್ತಿರುವ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.

50 mins ago

ಮೇ 29ಕ್ಕೆ ವಿಜಯಪುರಕ್ಕೆ ಮಾಜಿ ಉಪ ಮುಖ್ಯ ಮಂತ್ರಿ ಲಕ್ಷ್ಮಣ್ ಸವದಿ ಆಗಮನ

ಮುಂಬರುವ 7 ಮೇ 2024 ರಂದು ಜರುಗುವ ಸಾರ್ವತ್ರಿಕ ವಿಜಯಪುರ (ಮೀಸಲು) ಲೋಕಸಭೆ ಚುನಾವಣೆ ಪ್ರಚಾರದ ಅಂಗವಾಗಿ ಸ್ಟಾರ್ ಪ್ರಚಾರಕರು…

1 hour ago

ಮಾಜಿ ಶಾಸಕ ದೇಸಾಯಿಯವರನ್ನು ಭೇಟಿಯಾದ ಆಲಗೂರ್

ಜಿಲ್ಲೆಯ ಹಿರಿಯ ಮುತ್ಸದ್ದಿ ಹಾಗೂ ಮಾಜಿ ಶಾಸಕರಾದ ಶಿವಪುತ್ರಪ್ಪ ದೇಸಾಯಿಯವರನ್ನು ಭಾನುವಾರ ತಾಳಿಕೋಟೆಯಲ್ಲಿ ಲೋಕಸಭೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರೊ.ರಾಜು…

1 hour ago

ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಮತಯಾಚನೆ ನಡೆಸಿದ ಖೂಬಾ, ಖಾಶೆಂಪುರ್, ಬೆಲ್ದಾಳೆ

ಬೀದರ್ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವರಾದ ಭಗವಂತ ಖೂಬಾರವರು, ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ…

1 hour ago

ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

ಕರ್ನಾಟಕ ಪ್ರವಾಸದಲ್ಲಿರುವ ಮೋದಿಗೆ‌ ಗೋ ಬ್ಯಾಕ್ ಘೋಷಣೆ ಎದುರಾಗಿದೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಬಿಜೆಪಿ‌ ಸರ್ಕಾರದ‌ ಡಿಎನ್‌ಎ ಕರ್ನಾಟಕ…

1 hour ago

ಸಾಕು ನಾಯಿ ಕಾಣೆ : ಬೇಸರದಿಂದ 12 ವರ್ಷದ ಬಾಲಕಿ ಆತ್ಮಹತ್ಯೆ

ಪ್ರೀತಿಯ ಶ್ವಾನ ನಾಪತ್ತೆಯಾಗಿದೆ ಎಂದು ಬೇಸರ ಗೊಂಡು 12 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

2 hours ago