Categories: ಬೀದರ್

ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಮತಯಾಚನೆ ನಡೆಸಿದ ಖೂಬಾ, ಖಾಶೆಂಪುರ್, ಬೆಲ್ದಾಳೆ

ಬೀದರ್:  ಬೀದರ್ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವರಾದ ಭಗವಂತ ಖೂಬಾರವರು, ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್ ರವರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆರವರು ಭಾನುವಾರ ದಿನವಿಡೀ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆ ನಡೆಸಿದರು.

ಮೊದಲಿಗೆ ಶ್ರೀಕ್ಷೇತ್ರ ಹೊನ್ನಿಕೇರಿಯ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿ, ಗ್ರಾಮದಿಂದ ಮತಯಾಚನೆ ಆರಂಭಿಸಿದ ಅವರು, ಬಳಿಕ ಕಪಲಾಪೂರ, ಕೋಳಾರ (ಕೆ), ಅಮಲಾಪೂರ, ಯಾಕಾತಪೂರ, ಬರೂರು ಸೇರಿದಂತೆ ವಿವಿಧೆಡೆ ಮತಯಾಚಿಸಿದರು.

ಈ ವೇಳೆ ಮಾತನಾಡಿದ ಅಭ್ಯರ್ಥಿ ಭಗವಂತ ಖೂಬಾರವರು, ನಾನು ಎರಡು ಬಾರಿ ಸಂಸದನಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಭಾರತೀಯ ಜನತ ಪಕ್ಷ ಮೂರನೇ ಬಾರಿಗೆ ನನ್ನನ್ನ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ನಮಗೆ ಈ ಬಾರಿ ಜೆಡಿಎಸ್ ಕೂಡ ಕೈ ಜೋಡಿಸಿದೆ. ಈ ಬಾರಿ ಕೂಡ ನನ್ನನ್ನು ಗೆಲ್ಲಿಸಿ ಕಳಿಸಿದರೆ ನಾನು ಇನ್ನಷ್ಟು ಯೋಜನೆಗಳನ್ನು ಬೀದರ್ ಲೋಕಸಭಾ ಕ್ಷೇತ್ರಕ್ಕೆ ತರುತ್ತೇನೆ ಎಂದರು.

ಯಾವ ಪರಿವಾರ ಭಾಲ್ಕಿಯನ್ನು ಅಭಿವೃದ್ಧಿ ಮಾಡಿಲ್ಲವೋ ಆ ಪರಿವಾರ ಜಿಲ್ಲೆಯನ್ನು ಹೇಗೆ ಅಭಿವೃದ್ಧಿ ಮಾಡುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈಶ್ವರ್ ಖಂಡ್ರೆರವರ ಅಸಹಕಾರದ ನಡುವೆಯೇ ನಾನು ಹತ್ತು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಜಿಲ್ಲೆಯಲ್ಲಿ ಮಾಡಿದ್ದೇನೆ.

ಖಂಡ್ರೆಯವರಿಗೆ ಅಭಿವೃದ್ಧಿಯ ಪರಿಕಲ್ಪನೆಯೇ ಇಲ್ಲ. ಅವರು ಪ್ರತಿನಿಧಿಸುವ ಕ್ಷೇತ್ರದಲ್ಲೇ ಒಂದೇ ಒಂದು ಸ್ಟೇಡಿಯಂ ಇಲ್ಲ. ಇನ್ನೂ ಅವರು ಜಿಲ್ಲೆಯನ್ನು ಹೇಗೆ ಅಭಿವೃದ್ಧಿ ಮಾಡುತ್ತಾರೆ ಎಂದು ಭಗವಂತ ಖೂಬಾರವರು ಪ್ರಶ್ನಿಸಿದರು.
ನಾನು ಸಂಸದನಾದ ಬಳಿಕ ನನ್ನ ಕ್ಷೇತ್ರದಲ್ಲಿ ಶಕ್ತಿ ಮೀರಿ ಒಡಾಟ ಮಾಡಿದ್ದೇನೆ. ಜನರಿಗೆ ಸ್ಪಂದಿಸುವ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಸಚಿವನಾಗಿಯೂ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ.

ತಾವು ನನ್ನನ್ನು ಮೂರನೇ ಅವಧಿಗೆ ಸಂಸದರನ್ನಾಗಿ ಆಯ್ಕೆ ಮಾಡಿ ಕಳುಹಿಸಿ ಎಂದು ಕ್ಷೇತ್ರದ ಜನರಿಗೆ ಕೇಂದ್ರ ಸಚಿವ ಭಗವಂತ ಖೂಬಾರವರು ಮನವಿ ಮಾಡಿದರು. ಈ ವೇಳೆ ಮಾತನಾಡಿದ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು, ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸಮಾನತೆಯಿಂದ ಕೆಲಸ ಮಾಡಿ ಎನ್‌ಡಿಎ ಅಭ್ಯರ್ಥಿಗೆ ಹೆಚ್ಚಿನ ಲೀಡ್ ಕೊಡಬೇಕು. ಇದು ನರೇಂದ್ರ ಮೋದಿ – ರಾಹುಲ್ ಗಾಂಧಿಯವರ ಎಲೆಕ್ಷನ್ ಆಗಿದೆ ಎಂದರು.

ಕಾಂಗ್ರೆಸ್ ನವ್ರು ಬರಿ ಸುಳ್ಳು ಹೇಳ್ತಾರೆ. ಚುನಾವಣೆಗೆ ಮುನ್ನ ಇವ್ರು ಹತ್ತು ಕೆ.ಜಿ ಅಕ್ಕಿ ಕೊಡ್ತಿವಿ ಅಂದಿದ್ರು. ಈಗ ಕಾಂಗ್ರೆಸ್ ನವ್ರು ನಿಮ್ಮ ಊರಿಗೆ ಬಂದ್ರೆ ಹತ್ತು ಕೆ.ಜಿ ಅಕ್ಕಿ ಕೇಳ್ರಿ. ಮೊದ್ಲು ಹತ್ತು ಕೆ.ಜಿ ಅಕ್ಕಿ ಕೊಟ್ಟು ವೋಟ್ ಕೇಳ್ರಿ ಎಂದು ಹೇಳಿ. ಕಾಂಗ್ರೆಸ್ ನವರ ಗ್ಯಾರಂಟಿಗಳು ಲೆಕ್ಕಕ್ಕೆ ಇಲ್ಲದಾಗಿವೆ.

ಸ್ವಾತಂತ್ರ ಭಾರತದಲ್ಲಿ ಬೀದರ್ ನಿಂದ ಯಾರೂ ಕೂಡ ಕೇಂದ್ರ ಸಚಿವರು ಆಗಿರಲಿಲ್ಲ. ಮೊದಲ ಬಾರಿಗೆ ಭಗವಂತ ಖೂಬಾರವರು ಕೇಂದ್ರ ಸಚಿವರಾಗಿದ್ದಾರೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಖೂಬಾರವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಬೀದರ್ ನಿಂದ ದೆಹಲಿಯವರೆಗೂ ಟ್ರಾಕ್ ಕ್ಲೇರ್ ಇರಬೇಕು ಅಂದ್ರೆ ಖೂಬಾರವರ ಗೆಲುವು ಅಗತ್ಯವಾಗಿದೆ. ಆಗಾಗಿ ಕ್ಷೇತ್ರದ ಜನರು ಖೂಬಾರವರನ್ನು ಗೆಲ್ಲಿಸಬೇಕು ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.

ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆರವರು ಮಾತನಾಡಿ, ಬಿಜೆಪಿ, ಜೆಡಿಎಸ್ ಎರಡು ಸೇರಿ ಅತಿ ಹೆಚ್ಚಿನ ಮತ ತೆಗೆದುಕೊಳ್ಳಬೇಕು. ನಾವು ನಮ್ಮ ಮಕ್ಕಳು ಸುರಕ್ಷಿತವಾಗಿ ಇರಬೇಕು ಎನ್ನುವುದಾರರೇ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು.

ಬೀದರ್ ಇನ್ನಷ್ಟು ಅಭಿವೃದ್ಧಿ ಆಗಬೇಕು ಎಂದ್ರೆ ಖೂಬಾ ಮತ್ತೊಮ್ಮೆ ಸಂಸದರಾಗಿಬೇಕು ಎಂದರು.
ಕಾಂಗ್ರೆಸ್ ನವ್ರು ತೋರಿಸಿದ ಚೆಂಬು ಅಕ್ಷಯ ಪಾತ್ರೆಯಾಗಿದೆ. ಮೋದಿಯವರು ಅಕ್ಷಯ ಪಾತ್ರೆ ನೀಡುವ ಕೆಲಸ ಮಾಡಿದ್ದಾರೆ. ಆದರೆ ಕಾಂಗ್ರೆಸ್ ನವ್ರು ಖಾಲಿ ಚೆಂಬು ಎನ್ನುತ್ತಿದ್ದಾರೆ. ಮೋದಿಯವರು, ಖೂಬಾರವರು ಕೊಟ್ಟ ಕೊಡುಗೆಯಿಂದ ಸಾಕಷ್ಟು ರಸ್ತೆಗಳಾಗಿವೆ. ಬಿಜೆಪಿ, ಜೆಡಿಎಸ್ ಎರಡು ಪಕ್ಷ ಒಂದಾಗಿ ಖೂಬಾರವರನ್ನು ಗೆಲ್ಲಿಸಿಕೊಂಡು ಬರುವ ಕೆಲಸ ಮಾಡಬೇಕು ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆರವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಜು ಕಡ್ಯಾಳ, ದೇವೇಂದ್ರ ಸೋನಿ, ರಾಜಶೇಖರ ಜವಳೆ, ಪರಶುರಾಮ, ಸಂಜುಕುಮಾರ್ ಮಾಶೆಟ್ಟಿ, ಜೈಸಿಂಗ್ ರಾಠೋಡ್, ರಾಜರೆಡ್ಡಿ, ಹಣಮಂತರಾವ್ ಮೈಲಾರಿ, ಶಿವರಾಜ ಶೆಮಶೆಟ್ಟಿ, ಪರಶುರಾಮ, ನಾಗಭೂಷಣ ಕಮಠಾಣೆ ಸೇರಿದಂತೆ ಅನೇಕರಿದ್ದರು.

Nisarga K

Recent Posts

ರಸ್ತೆಯಲ್ಲಿ ಸಿಕ್ಕಿದ್ದ ಪೆನ್‌ಡ್ರೈವ್ ಅನ್ನು ಶಾಸಕ ಎ.ಮಂಜುಗೆ ಕೊಟ್ಟಿದ್ದೆ: ನವೀನ್ ಗೌಡ

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ಹಂಚಿಕೆ ಆರೋಪ ಎದುರಿಸುತ್ತಿರುವ ನವೀನ್ ಗೌಡ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿರುವ ಪೋಸ್ಟ್ ಭಾರೀ…

5 mins ago

ಡಿಫರೆಂಟ್ ಗೆಟಪ್‌ನಲ್ಲಿ ಎಂಟ್ರಿ ಕೊಟ್ಟ ನಟ ಮಿತ್ರ

ಕನ್ನಡದ ಹಾಸ್ಯನಟ ಮಿತ್ರ ಇದೀಗ ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಚಿತ್ರದಲ್ಲಿ ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

33 mins ago

ಶೀಘ್ರದಲ್ಲೇ ಎರ್ನಾಕುಲಂನಿಂದ ಬೆಂಗಳೂರಿಗೆ ವಂದೇ ಭಾರತ್ ಆರಂಭ

ಲೋಕಸಭೆ ಚುನಾವಣೆ ಮುಗಿದ ಬಳಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲೇ ಕೊಚ್ಚಿಯ ಎರ್ನಾಕುಲಂನಿಂದ ಬೆಂಗಳೂರಿಗೆ ಸಂಚಾರ ಪ್ರಾರಂಭಿಸಲಿದೆ.

59 mins ago

ಅಂಬೇಡ್ಕರ್ ಜಯಂತೋತ್ಸವದ ಅಂಗವಾಗಿ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ 133ನೇ ಜಯಂತೋತ್ಸವ ಅಂಗವಾಗಿ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ವಿಮೋಚನಾ ಯುವಕರ ಸಂಘದ…

1 hour ago

ಗಾಳಿ ಮಳೆಗೆ ಮರ ಬಿದ್ದು ಮನೆಗೆ ಹಾನಿ; ಶಾಸಕರ ಭೇಟಿ, ತಕ್ಷಣ ವ್ಯವಸ್ಥೆ ಮಾಡುವಂತೆ ಸೂಚನೆ

ಭಾನುವಾರ ಸಂಜೆ ಪುತಯ್ತೂರು ನಗರ ವ್ಯಾಪ್ತಿಯಲ್ಲಿ ಭಾರೀ ಗಾಳಿಮಳೆ ಬಂದಿದ್ದು ಬಪ್ಪಳಿಗೆಯ ಸಿಂಗಾಣಿ ಎಂಬಲ್ಲಿ ಕಮಲ ಎಂಬವರ ಮನೆಯ ಮಾಡಿನ…

1 hour ago

‘ಸೀತಾರಾಮ’ ಖ್ಯಾತಿಯ ವೈಷ್ಣವಿಗೆ ದಂಡ ವಿಧಿಸಿದ ರಿಯಲ್ ಪೊಲೀಸರು

ಯಾವಾಗಲೂ ಯಾರೇ ಆದರೂ ಟ್ರಾಫಿಕ್​ ರೂಲ್ಸ್​​ ಪಾಲನೆ ಮಾಡಲೇ ಬೇಕು. ಅದು ರಿಯಲ್ ಆಗಿರಲಿ ಅಥವಾ ರೀಲ್ ಆಗಿರಲಿ. ಹೌದು…

2 hours ago