Categories: ಮಂಗಳೂರು

ಉಜ್ವಲ ಗ್ಯಾಸ್ ಮಂಜೂರಾಗಿ ಒಂದು ವರ್ಷ ಸಂದರೂ 23 ಕುಟುಂಬಗಳಿಗೆ ಸಂಪರ್ಕ ಮರೀಚಿಕೆ

ಬೆಳ್ತಂಗಡಿ: ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ ಉಜ್ವಲ ಗ್ಯಾಸ್ ಲಾಯಿಲ ಗ್ರಾಮದ 23 ಕುಟುಂಬಗಳಿಗೆ ಮಂಜೂರಾಗಿ‌ ವರ್ಷ ಸಂದರೂ ಇನ್ನೂ ಕೂಡ ಸೌಲಭ್ಯದ ವಿತರಣೆ ಆಗಿಲ್ಲ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಈ ಸಂಬಂಧ ಬೆಸ್ಟ್ ಫೌಂಡೇಶನ್ ಲಾಯಿಲ ಘಟಕದ ಪದಾಧಿಕಾರಿಗಳು ಮೇ.31 ರಂದು ಪುತ್ತೂರು ಸಹಾಯಕ ಆಯುಕ್ತರ ಸಮ್ಮುಖ ತಹಶಿಲ್ದಾರ್ ಮಹೇಶ್ ಜೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಜೊತೆಗೆ ಒಂದು ವಾರದೊಳಗೆ ಈ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಆಗದಿದ್ದರೆ ಸಂಘಟನೆಯ ತಾಲೂಕು ಘಟಕದ ನೇತೃತ್ವದಲ್ಲಿ ತಾಲೂಕಿನ ಇತರ ಗ್ರಾಮಗಳಲ್ಲಿರುವ ಇದೇ ರೀತಿಯ ವಂಚಿತ ಫಲಾನುಭವಿಗಳ‌ನ್ನು ಜೊತೆ ಸೇರಿಸಿ ಪ್ರತಿಭಟನೆಯ ಹಾದಿಹಿಡಿಯುವುದಾಗಿ ತಿಳಿಸಲಾಗಿದೆ.

ಫಲಾನುಭವಿಗಳಾದ ದೇಜಮ್ಮ, ಗೀತಾ, ಜಾನಕಿ,ಕುಸುಮಾ, ಲೀಲಾವತಿ, ಲೀಲಾವತಿ ಸೋಮನಾಥ, ಮೆಗ್ಡಲೆನ್ ಮಿರಾಂದಾ, ಮಾರ್ಗರೆಟ್ ಅನಿತಾ, ನಳಿನಾಕ್ಷಿ, ನಳಿನಿ, ಓಣೆದಿ, ಪ್ರೀತಿಕಾ, ಪ್ರೇಮಲತಾ, ರತ್ನಾವತಿ, ರುಕ್ಮಿಣಿ, ಶಾಜಿದಾ ಭಾನು, ಶೀಲಾ ಪಿಂಟೋ, ಸೂಕ್ಷ್ಮಾ, ಸ್ಟೆಲ್ಲಾ ಡಿಸೋಜಾ, ಸ್ಟೆಲ್ಲಾ ಪಿಂಟೋ, ಸುಲೋಚನಾ, ಸೂಕ್ಷ್ಮಾ, ಸುಂದರಿ, ವಸಂತಿ ಮತ್ತು ಝುಲೈಕಾ ಎಂಬವರೇ ಇದೀಗ ಇಂದು ವರ್ಷದಿಂದ ಸರಕಾರದ ಸೌಲಭ್ಯಕ್ಕಾಗಿ ಕಾಯುತ್ತಿರುವವರು. ಲಭ್ಯ ಮಾಹಿತಿ ಪ್ರಕಾರ ಇವರಿಗೆ ಸೌಲಭ್ಯ ಮಂಜೂರಾದ ಬಗ್ಗೆ ಫಲಾನುಭವಿಗಳಿಗೆ ಇದುವರೆಗೆ ಮಾಹಿತಿ ಕೂಡ ನೀಡಲಾಗಿಲ್ಲ. ಅಲ್ಲದೆ, ಮುಂದಕ್ಕೆ ದೊಡ್ಡ ಸಮಾವೇಶ ನಡೆಸಿ ಆ ವೇಳೆ ನಿಮ್ಮನ್ನು ಕರೆಯುತ್ತೇವೆ. ಅಲ್ಲೇ ನಿಮಗೆ ದೊರೆಯಕಲಿದೆ ಎಂದು ಕೆಲವರು ಹಿಂದೆ ಸಮಾಧಾನಪಡಿಸಿದ್ದಾರೆ ಎಂದೂ ಆಪಾದಿಸಲಾಗಿದೆ.

ಒಟ್ಟಾರೆ ಈ ಫಲಾನುಭವಿಗಳಿಗೆ ಬೆಸ್ಟ್ ಫೌಂಡೇಶನ್ ಬೆನ್ನೆಲುಬಾಗಿ ನಿಂತಿದ್ದು ನ್ಯಾಯದೊರಕಿಸಿಕೊಡುವ ಭರವಸೆ ನೀಡಿದೆ ಎಂದು ತಿಳಿದುಬಂದಿದೆ.

ಮಂಗಳವಾರ ಮನವಿ ನೀಡುವ ವೇಳೆ ಬೆಸ್ಟ್ ಫೌಂಡೇಶನ್ ತಾಲೂಕು ಸಲಹೆಗಾರ, ತಾ.ಪಂ ಮಾಜಿ ಸದಸ್ಯ ಸುಧಾಕರ ಬಿ.ಎಲ್, ಲಾಯಿಲ ಘಟಕದ ಪ್ರಮುಖರಾದ ಮಧುಸೂಧನ್, ಸಲೀಂ ಆದರ್ಶನಗರ, ಉಮರ್ ಲಾಯಿಲ, ಸುರೇಶ್ ಪುತ್ರಬೈಲು, ದೇವರಾಜ್ ಪಡ್ಲಾಡಿ ಮೊದಲಾದವರು ಉಪಸ್ಥಿತರಿದ್ದರು

Ashika S

Recent Posts

ಡಿ ಬಾಸ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್ ಔಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್‌ ರಿಲೀಸ್ ಆಗಿದೆ. ಸಿನಿಮಾದ ತೆರೆ ಹಿಂದಿನ ಗ್ಲಿಂಪ್ಸ್ ಇದಾಗಿದೆ.…

5 mins ago

ಧಾರವಾಡದ ಪೇಡಾ ಈ ಬಾರಿ ಯಾರ ಬಾಯಿಗೆ ಬೀಳಲಿದೆ?; ಜೋಶಿ ವಿರುದ್ಧ ವಿನ್ ಆಗ್ತಾರಾ ವಿನೋದ್

ಕರ್ನಾಟಕದ ವಾಣಿಜ್ಯ ನಗರಿ ಎಂದೇ ಪ್ರಸಿದ್ಧಿ ಪಡೆದ ಜಿಲ್ಲೆ ಧಾರವಾಡ. ಬಾಯಿ ನೀರೂರಿಸುವ ಧಾರವಾಡ ಪೇಡಾಕ್ಕೆ ಧಾರವಾಡವಲ್ಲದೆ ಬೇರೆ ಸಾಟಿಯಿಲ್ಲ,…

7 mins ago

ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ 3 ವಾರಸುದಾರರಿಲ್ಲದ ಶವಗಳ ಅಂತ್ಯಸಂಸ್ಕಾರ

ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಮೂರು ಅಪರಿಚಿತ ವ್ಯಕ್ತಿಗಳ ಶವದ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಗೌರಯುತವಾಗಿ ನಡೆಸಲಾಯಿತು.

27 mins ago

ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆಯಡಿ 1 ಲಕ್ಷ ರೂ. ಜಮಾ

ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಇಬ್ಬರು ಹೆಂತಿಯರು ಇರುವವರಿಗೆ 2 ಲಕ್ಷ ರೂ. ಆರ್ಥಿಕ ನೆರವು…

41 mins ago

ಕಿಂಗ್ಸ್‌-ರಾಯಲ್ಸ್‌ ಕದನದಲ್ಲಿ ಕಲಾಶ್‌ನಿಕಾವೋ: ಕೊಹ್ಲಿ ಕೆಣಕಿ ಉಳಿದವರುಂಟೇ

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆರ್‌ ಸಿ ಬಿ ತಂಡ ಪಂಜಾಬ್ ಕಿಂಗ್ಸ್ ಅನ್ನು 60 ರನ್‌ಗಳಿಂದ…

57 mins ago

ಭಾರೀ ಗಾಳಿ ಮಳೆಗೆ ಮನೆಯ ಗೇಟ್ ಬಿದ್ದು ಬಾಲಕಿ ಮೃತ್ಯು

ಮಳೆ ಜತೆಗೆ ರಭಸವಾಗಿ ಬೀಸಿದ ಬಿರುಗಾಳಿಗೆ ಮನೆಯ ಗೇಟ್ ಕಿತ್ತು ಬಂದಿದ್ದು, ಇದೇ ವೇಳೆ ಮನೆಯ ಮುಂದೆ ಆಟವಾಡುತ್ತಿದ್ದ 7…

1 hour ago