Categories: ಮಂಗಳೂರು

ಉಜಿರೆ: ಜಾಗದ ವಿಷಯವಾಗಿ ಮರಾಠಿ ಕುಟುಂಬಗಳ ನಡುವೆ ವಿವಾದ

ಬೆಳ್ತಂಗಡಿ : ಮರಾಠಿ ಸಮುದಾಯವು ಎಲ್ಲರೂ ಒಗ್ಗೂಡಿ ಅನ್ಯೋನತೆಯಿಂದ ಜೀವಿಸುವ ಕುಟುಂಬವಾಗಿದೆ. ಇತ್ತೀಚೆಗೆ ಉಜಿರೆ ಗುರಿಪಳ್ಳ ಸಮೀಪದ ಅಳಕೆ ಎಂಬಲ್ಲಿ ಜಾಗದ ವಿಷಯವಾಗಿ ಮರಾಠಿ ಕುಟುಂಬಗಳ ನಡುವೆ ವಿವಾದಗಳು ಬಂದಿದ್ದು ಇದು ಪೋಲೀಸ್ ಠಾಣೆಯಲ್ಲಿ ಬಗೆಹರಿದ ಘಟನೆಯಾಗಿದೆ. ಈ ಘಟನೆಗೆ ಸಂಬಂಧಿಸಿ ಬಿ.ಎಂ ಭಟ್ ಮತ್ತು ಈಶ್ವರಿ ಎಂಬವರು ಮಧ್ಯಪ್ರವೇಶಿಸಿ ಮರಾಠಿ ಕುಟುಂಬದ ನಡುವೆ ದ್ವೇಷ ಬರುವಂತೆ ಮಾಡಿದ್ದು ಇದನ್ನು ಖಂಡಿಸುವುದಲ್ಲದೆ ಮುಂದೆ ಈ ವಿಚಾರವಾಗಿ ಬಂದರೆ ಇಡೀ ಮರಾಠಿ ಸಮಾಜ ಪ್ರತಿಭಟನೆ ನಡೆಸುತ್ತೇವೆ ಎಂದು ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂತೋಷ್ ಅತ್ತಾಜೆ ಹೇಳಿದ್ದಾರೆ.

ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಿ.ಎಂ.ಭಟ್ ಎಂಬುವರು ವಿವಾದವನ್ನು ಸೃಷ್ಠಿ ಮಾಡಿದ ಕಾರಣ ಇಂದು ಅಮಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಾಗಿದೆ.

ಇವರ ಕುಟುಂಬದಲ್ಲಿ ಮಕ್ಕಳು ಮತ್ತು ದನ ಕರುಗಳು ಇದ್ದು ಇವರನ್ನು ನೋಡುವ ಗತಿ ಇಲ್ಲದಾಗಿದೆ. ಮುಂದಿನ ದಿನಗಳಲ್ಲಿ ಮರಾಠಿ ಕುಟುಂಬಗಳ ಮಧ್ಯೆ ಯಾವುದೇ ಸಮಸ್ಯೆ ಬಂದಲ್ಲಿ ಸಮುದಾಯದ ಮುಖಂಡರು ಸೇರಿ ಬಗೆಹರಿಸಲಿದ್ದೇವೆ. ಈಗ ಅಳಕ್ಕೆ ಎಂಬಲ್ಲಿರುವ ಕುಟುಂಬಗಳ ಮದ್ಯೆ ನಡೆಯುತ್ತಿರುವ ಜಾಗದ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಸರಿಪಡಿಸಲಾಗುವುದು.

ಜಾಗದ ಸಮಸ್ಯೆ ಅಲ್ಲದೆ ಬೇರೆ ಯಾವುದೇ ಸಮಸ್ಯೆ ಬಂದರೂ ಕೂಡ ಪರಿಹರಿಸಲಾಗುವುದು. ಬಿ.ಎಂ ಭಟ್ ಎಂಬವರು ಅನೀಲ್ ಎಂಬವರ ವಿರುದ್ಧ ಸೇಡು ತೀರಿಸುವ ಸಲುವಾಗಿ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದು ಅವರು ಅವರದೇ ಸಮಾಜದ ಬಗ್ಗೆ ನೋಡಿಕೊಳ್ಳಲಿ. ಅದರಂತೆ ಈಶ್ವರಿ ಎಂಬವರು ಕೂಡ ಅವರ ಸಮಾಜದ ಬಗ್ಗೆಯೇ ನೋಡಿಕೊಳ್ಳಲಿ ನಮ್ಮ ಸಮಾಜದ ಬಗ್ಗೆ ಮುಂದೆ ಮಧ್ಯಪ್ರವೇಶಿಸಿದರೆ ನಾವೇ ತಕ್ಕ ಶಾಸ್ತಿ ಮಾಡಲಿದ್ದೇವೆ ಎಂದರಲ್ಲದೆ ಇಲ್ಲಿ ಮರಾಠಿ ಸಮುದಾಯವನ್ನು ಆದಿವಾಸಿಗಳೆಂದು ಬಿಂಬಿಸಿರುವುದು ತಪ್ಪು ಎಂದರು.

ಗೊಷ್ಠಿಯಲ್ಲಿ ಮರಾಠಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಲಿಂಗಪ್ಪ ನಾಯ್ಕ್, ಮುಖಂಡ ವಸಂತ ಉಜಿರೆ , ಸಂದೇಶ್ ಗುರಿಪಳ್ಳ ಉಪಸ್ಥಿತರಿದ್ದರು.

Sneha Gowda

Recent Posts

ಸ್ವಾತಿ ಮೇಲಿನ ಹಲ್ಲೆ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಬಿಭವ್ ಅರ್ಜಿ

ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ…

14 mins ago

ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

ಇಲ್ಲಿನ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಹಂತಕ ಗಿರೀಶ ಉರುಫ್‌ ವಿಶ್ವ ಸಾವಂತ ವಿರುದ್ಧ ಬೆಂಡಿಗೇರಿ ಠಾಣೆಯಲ್ಲಿ ಮತ್ತೊಂದು ಪ್ರಕರನ…

56 mins ago

ʼರಾಹುಲ್ ಮತ್ತು ನಾನು ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಬಿಜೆಪಿ ಲಾಭವಾಗುತ್ತಿತ್ತುʼ

ದೇಶದ್ಯಾಂತ ಕಾಂಗ್ರೆಸ್‌ ಪಕ್ಷದ ಪರವಾಗಿ ಪ್ರಚಾರ ನಡೆಸಬೇಕೆಂಬ ಉದ್ದೇಶದಿಂದ ನಾನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ, ರಾಹುಲ್ ಗಾಂಧಿ…

58 mins ago

ಪೊಲೀಸ್‌ ಕಸ್ಟಡಿಯಲ್ಲಿಯೇ ದಂಪತಿ ಆತ್ಮಹತ್ಯೆ: ರೊಚ್ಚಿಗೆದ್ದು ಠಾಣೆಗೆ ಬೆಂಕಿ ಹಚ್ಚಿದ ಗ್ರಾಮಸ್ಥರು

ಪೊಲೀಸ್‌ ಕಸ್ಟಡಿಯಲ್ಲಿಯೇ ಗಂಡ ಹಾಗೂ ಹೆಂಡತಿ ಮೃತಪಟ್ಟಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.

1 hour ago

ಆತ್ಮಹತ್ಯೆಗೆ ಮುನ್ನ ನಟ ಚಂದು ಲಾಸ್ಟ್​ ಮೆಸೇಜ್​ ಇದು

ಇದು ತೆಲುಗು ಕಿರುತೆರೆ ನಟ ಚಂದು ಆತ್ಮಹತ್ಯೆಗೂ ಮುನ್ನ ಬರೆದ ಸಂದೇಶ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಂದುವಿನ ಕೊನೆಯ ಮೆಸೇಜ್​…

2 hours ago

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆ ಸಾಧ್ಯತೆ

ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

2 hours ago