ಕಾಸರಗೋಡು: ಮನೆಯ ಟೆರೆಸ್ ನಿಂದ ಬಿದ್ದು ಕೂಲಿ ಕಾರ್ಮಿಕರೋರ್ವರು ಮೃತ ಪಟ್ಟ ಘಟನೆ ಬದಿಯಡ್ಕದಲ್ಲಿ ನಡೆದಿದೆ.
ಬದಿಯಡ್ಕ ಕೆಡೆಂಜಿ ಯ ಗಂಗಾಧರ ನಾಯ್ಕ್ (40) ಮೃತ ಪಟ್ಟವರು. ಕೆಡೆಂಜಿಯ ಸಂಬಂಧಿಕರೊಬ್ಬರ ಮನೆಯ ಟೆರೆಸ್ ನಿಂದ ಕೆಳಗೆ ಬಿದ್ದಿದ್ದು ಗಂಭೀರ ಸ್ಥಿತಿಯಲ್ಲಿದ್ದ ಇವರನ್ನು ಕಾಸರಗೋಡು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟರು. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿ ಸಿಕೊಂಡಿದ್ದಾರೆ.