ಕಾಸರಗೋಡು: ಲಂಚ ಪ್ರಕರಣ, ನ್ಯಾಯಾಲಯಕ್ಕೆ ಆರೋಪ  ಪಟ್ಟಿ ಸಲ್ಲಿಸಿದ ಕ್ರೈಂ ಬ್ರಾಂಚ್

ಕಾಸರಗೋಡು: ಮಂಜೇಶ್ವರ  ವಿಧಾನಸಭಾ ಚುನಾವಣೆಯಲ್ಲಿ  ಲಂಚ ಪ್ರಕರಣಕ್ಕೆ  ಸಂಬಂಧಪಟ್ಟಂತೆ  ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್  ಕಾಸರಗೋಡು ಜಿಲ್ಲಾ  ನ್ಯಾಯಾಲಯದಲ್ಲಿ ಆರೋಪ  ಪಟ್ಟಿ ಸಲ್ಲಿಸಿದೆ.

ಬಿಜೆಪಿ ರಾಜ್ಯಅಧ್ಯಕ್ಷ  ಕೆ . ಸುರೇಂದ್ರನ್  ಪ್ರಥಮ ಆರೋಪಿಯಾಗಿರುವ  ಈ ಪ್ರಕರಣದಲ್ಲಿ ಒಟ್ಟು ಆರು ಮಂದಿ ಒಳಗೊಂಡಿದ್ದಾರೆ.  ಬಿಜೆಪಿ ಜಿಲ್ಲಾ ಮಾಜಿ  ಅಧ್ಯಕ್ಷ  ಬಾಲಕೃಷ್ಣ ಶೆಟ್ಟಿ,  ಯುವ ಮೋರ್ಚಾ ಮುಖಂಡ ಸುನಿಲ್  ನಾಯ್ಕ್ ,  ವೈ .ಸುರೇಶ್, ಮಣಿಕಂಠ ರೈ, ಲೋಕೇಶ್ ನೋಂಡ  ಉಳಿದ ಆರೋಪಿಗಳೆಂದು ಕ್ರೈಂ ಬ್ರಾಂಚ್ ಗುರುತಿಸಿದೆ.

೨೦೨೧ ರಲ್ಲಿ ನಡೆದ ಕೇರಳ ವಿಧಾನ ಸಭಾ ಚುನಾವಣೆಯಲ್ಲಿ   ಮಂಜೇಶ್ವರದಿಂದ ಬಿ ಎಸ್ಪಿ ಅಭ್ಯರ್ಥಿಯಾಗಿ  ನಾಮಪತ್ರ ಸಲ್ಲಿಸಿದ್ದ  ಕೆ. ಸುಂದರ ರವರನ್ನು ನಾಮಪತ್ರ ಹಿಂದಕ್ಕೆ ಪಡೆಯಲು ಬಿಜೆಪಿ ಅಭ್ಯರ್ಥಿಯಾಗಿದ್ದ  ಕೆ ಸುರೇಂದ್ರನ್  ಎರಡೂ ವರೆ ಲಕ್ಷ ರೂ . ನಗದು ಹಾಗೂ ಮೊಬೈಲ್ ಫೋನ್ ನೀಡಿದ್ದು , ಮಾತ್ರವಲ್ಲ  ಇತರ  ಆಮಿಷಗಳನ್ನು ನೀಡಲಾಗಿತ್ತು. ಈ  ಬಗ್ಗೆ ಚುನಾವಣೆ ಬಳಿಕ ಕೆ. ಸುಂದರವರೆ   ಬಹಿರಂಗಪಡಿಸಿದ್ದರು.

ಇದರಂತೆ ಎಲ್ ಡಿ ಎಫ್ ಅಭ್ಯರ್ಥಿಯಾಗಿದ್ದ ವಿ . ವಿ ರಮೇಶನ್ ನೀಡಿದ್ದ ದೂರಿನಂತೆ ೨೦೨೧ ರ ಜೂನ್ ನಲ್ಲಿ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ನ್ಯಾಯಾಲಯದ ಆದೇಶದಂತೆ  ಕ್ರೈಂ ಬ್ರಾಂಚ್ ಗೆ ಒಪ್ಪಿಸಲಾಗಿತ್ತು,  ಸುರೇಂದ್ರನ್ ವಿರುದ್ಧ ಪರಿಶಿಷ್ಟ ಜಾತಿ  ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ  ತಡೆ  ಮೊಕದ್ದಮೆ , ಅನುಮತಿ ಇಲ್ಲದೆ ಮನೆಗೆ ಅತಿಕ್ರಮ ದೂರುಗಳನ್ನು ದಾಖಲಿಸಲಾಗಿದೆ .

Ashika S

Recent Posts

ಪ್ರೀತಿಸಿ ಮದುವೆಯಾದ ಅನ್ಯಕೋಮಿನ ಜೋಡಿ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಮುಸ್ಲಿಂ ಯುವತಿ ಬಾದಾಮಿ ಮೂಲದ ರುಬಿನಾ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಬಾಗಲಕೋಟೆ…

10 mins ago

ಮೆಲ್ಬೋರ್ನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಹತ್ಯೆ

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ  ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

31 mins ago

ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…

1 hour ago

ಅಕ್ಷಯ ತೃತೀಯದಂದು ಬಾಲ್ಯವಿವಾಹ ನಡೆಯದಂತೆ ಕ್ರಮ

ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…

1 hour ago

ಜೆಪಿ ನಡ್ಡಾ, ಬಿವೈ ವಿಜಯೇಂದ್ರಗೆ ಸಮನ್ಸ್‌ ಜಾರಿ ಮಾಡಿದ ಬೆಂಗಳೂರು ಪೊಲೀಸ್

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರಿಗೆ…

2 hours ago

ಹಳ್ಳಕ್ಕೆ ತಡೆಗೋಡೆ ನಿರ್ಮಾಣ: ತೆರವಿಗೆ ಆಗ್ರಹಿಸಿ ಮನವಿ

ಕೊಪ್ಪಾ ತಾಲೂಕಿನ ಕಾಡ್ಕೆರೆಯಲ್ಲಿ ಕುಡಿಯುವ ನೀರಿನ ಹಳ್ಳಕ್ಕೆ ಪ್ರಭಾವಿಗಳು ನಿರ್ಮಿಸಿರುವ ತಡೆಗೋಡೆಯನ್ನು ತೆರವುಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು…

2 hours ago