ಕಾಸರಗೋಡು: “ಕೋಟೆಯಿಂದ ಕೋಟೆಗೆ” ಎಂಬ ಪಾರಂಪರಿಕ ಪ್ರವಾಸ!

ಕಾಸರಗೋಡು : ಜಿಲ್ಲೆಯ ವಿವಿಧ ಕೋಟೆಗಳನ್ನು ಸಂದರ್ಶಿಸಿ ಅವುಗಳ ಚಾರಿತ್ರಿಕ ಹಿನ್ನೆಲೆಯನ್ನು ನೆನಪಿಸುವ ವಿದ್ಯಾರ್ಥಿಗಳ ಅಧ್ಯಯನ ಯಾತ್ರೆ ನಡೆಸಲಾಗಿದೆ.

ಕೋಟೆಗಳ ನಾಡು ಎಂದೇ ಹೆಸರಾಗಿರುವ ಕಾಸರಗೋಡು ಜಿಲ್ಲೆಯ ವಿವಿಧ ಕೋಟೆಗಳಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾ ವಾರ್ತಾ ಕಛೇರಿಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರವಾಸವು ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಹಾಗೂ ಐತಿಹಾಸಿಕ ಸ್ಮಾರಕಗಳಿಗಿರುವ ಹಿನ್ನೋಟವಾಯಿತು.

ವಿಶ್ವ ಪರಂಪರೆ ಸಪ್ತಾಹದ ಪ್ರಯುಕ್ತ ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆ ಕಾಸರಗೋಡು, ಜಿಲ್ಲಾ ಮಾಹಿತಿ ಕಛೇರಿ ಕಾಸರಗೋಡು, ಜಿಲ್ಲಾ ಪ್ರವಾಸೋದ್ಯಮ ಪ್ರಮೋಷನ್ ಕೌನ್ಸಿಲ್ ಕಾಸರಗೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರವಾಸೋದ್ಯಮ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡುವ ಅಧ್ಯಯನ ಪ್ರವಾಸ, “ಕೋಟೆಯಿಂದ ಕೋಟೆಗೆ” ಎಂಬ ಪಾರಂಪರಿಕ ಪ್ರವಾಸದ ಭಾಗವಾಗಿ ಜಿಲ್ಲೆಯ ಕೋಟೆಗಳಿಗೆ ಭೇಟಿ ನೀಡಲಾಯಿತು.

ಈ ಕೋಟೆಗಳು ಕಾಸರಗೋಡಿನ ಆರ್ಥಿಕ ಅಭಿವೃದ್ಧಿಯ ಹಾಗೂ ಬಂದರುಗಳ ಮೂಲಕ ಇರುವ ನೈಸರ್ಗಿಕ ಸಂಪನ್ಮೂಲಗಳನ್ನು ರಫ್ತು ಮಾಡಿರುವುದರ ಸಾಕ್ಷಿಯಾಗಿದೆ. ಈ ಕೋಟೆಗಳಿಗಿರುವ ಪ್ರವಾಸವು ನಾಡಿನ ಇತಿಹಾಸದ ಮರು ಓದುವಿಕೆಯಾಯಿತು. ಕೋಟೆಗಳ ಪ್ರವಾಸ ವಿದ್ಯಾರ್ಥಿಗಳಿಗಂತೂ ಹೊಸ ಅನುಭವ. ಜಿಲ್ಲೆಯ ವಿವಿಧ ಕಾಲೇಜುಗಳ 47 ಟ್ರಾವೆಲ್ ಮತ್ತು ಟೂರಿಸಂ ವಿದ್ಯಾರ್ಥಿಗಳು ಪ್ರವಾಸದಲ್ಲಿ ಭಾಗಿಯಾಗಿದ್ದರು.

ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಯಾತ್ರೆಗೆ ಚಾಲನೆ ನೀಡಿದರು. ಸಹಾಯಕ ಜಿಲ್ಲಾಧಿಕಾರಿ ಡಾ. ಮಿಥುನ್ ಪ್ರೇಮರಾಜ್, ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್, ಡಿಟಿಪಿಸಿ ಕಾರ್ಯದರ್ಶಿ ಲಿಜೋ ಜೋಸೆಫ್, ಫಾಕ್ ಲ್ಯಾಂಡ್ ಚೆಯರ್ ಮೇನ್ ಅಡ್ವ ವಿಜಯರಾಜನ್, ರವೀಂದ್ರನ್ ಪಾಡಿ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಟ್ರಾವೆಲ್ ಆಂಡ್ ಟೂರಿಸಂ ವಿಭಾಗದ ಮುಖ್ಯಸ್ಥೆ ( ಎಚ್ ಒ ಡಿ) ಡಾ. ಸಿಂಧು ಜೋಸೆಫ್, ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದ ಪ್ರವಾಸೋದ್ಯಮ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕೆ. ಐ. ಶಿವಪ್ರಸಾದ್, ಪ್ರವಾಸಿ ಮಾರ್ಗದರ್ಶಿ ನಿರ್ಮೇಶ್ ಕುಮಾರ್ ಮತ್ತಿತರರು ದ್ವಜ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು, ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯ, ಮಾಲಿಕ್ ದಿನಾರ್ ಕಾಲೇಜು, ಮಲಬಾರ್ ಕಾಲೇಜು ಎಂಬಿವುಗಳ ಟ್ರಾವೆಲ್ ಆಂಡ್ ಟೂರಿಸಂ ವಿದ್ಯಾರ್ಥಿಗಳು ಕೋಟೆಗಳಿಗಿರುವ ಪ್ರವಾಸದಲ್ಲಿ ಭಾಗಿಯಾದರು.

Sneha Gowda

Recent Posts

ಮುಸ್ಲಿಂ ಯುವತಿಯೊಂದಿಗೆ ಮದುವೆ : ಖಾಕಿ ವಿರುದ್ಧ ಹಿಂದೂ ಸಂಘಟನೆ ಪ್ರತಿಭಟನೆ

ಬಾದಾಮಿ ಮೂಲದ ರುಬಿನಾ ಮತ್ತು ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಲ ಬಾಗಲಕೋಟೆ ಎಸ್​ಪಿ ಕಚೇರಿಗೆ ಬಂದಿದ್ದು,…

16 mins ago

ಹಾಸ್ಟೆಲ್‌ ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಮಹಾರಾಷ್ಟ್ರದ ಪುಣೆಯಲ್ಲಿರುವ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಪುಣೆಯ (COEP) ಹಾಸ್ಟೆಲ್‌ನಲ್ಲಿ ಯುವತಿಯೊಬ್ಬಳು ಮಾಡಿದ ಭಾನಗಡಿ ಈಗ ಹಾಸ್ಟೆಲ್‌ನ ಎಲ್ಲ ವಿದ್ಯಾರ್ಥಿನಿಯರು…

36 mins ago

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

ಬೆಳ್ತಂಗಡಿಯ ಬಡವರ ಬಂಧು, ಮಾಜಿ ಶಾಸಕ ವಸಂತ ಬಂಗೇರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿರುತ್ತಾರೆ. ಗುರುವಾರ ಮುಂಜಾನೆ…

59 mins ago

ಇಂದು ಎಸ್​ಎಸ್​ಎಲ್​​ಸಿ ಫಲಿತಾಂಶ : ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು?

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಬೆಳಗ್ಗೆ 10.30ಕ್ಕೆ ಪ್ರಕಟವಾಗಲಿದೆ. ರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ…

1 hour ago

ಡಾ. ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ನಗರದ ಕೆಎಂಸಿಯ ನ್ಯೂರೋಲಜಿ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಡಾ. ಜಿ.ಜಿ ಲಕ್ಷ್ಮಣ ಪ್ರಭು ಅವರಿಗೆ ದಿಲ್ಲಿಯ ರಾಷ್ಟ್ರೀಯ ವೈದ್ಯಕೀಯ…

1 hour ago

ಲಕ್ನೋ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ 10 ವಿಕೆಟ್​ಗಳ ಭರ್ಜರಿ ಜಯ

ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 57ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್‌ ತಂಡ…

2 hours ago