ಚಿಬಿದ್ರೆ: ಕಂದಕಕ್ಕೆ ಉರುಳಿದ ರಿಕ್ಷಾ, ಕೂದಲೆಳೆಯ ಅಂತರದಲ್ಲಿ ತಪ್ಪಿದ ಅನಾಹುತ

ಚಿಬಿದ್ರೆ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ಚಿಬಿದ್ರೆ ಗ್ರಾಮದ ಕಾಪು ಚಡಾವು ಎಂಬಲ್ಲಿ ರಸ್ತೆಯಿಂದ ಮೃತ್ಯುಂಜಯ ನದಿಬದಿಯ ಕಂದಕಕ್ಕೆ ರಿಕ್ಷಾ ಉರುಳಿ ಬಿದ್ದು ನಾಲ್ವರು ಗಾಯಗೊಂಡ ಘಟನೆ ಗುರುವಾರ ನಡೆದಿದೆ.

ಉಜಿರೆ ಕಡೆಯಿಂದ ಶಿವಮೊಗ್ಗದತ್ತ ಸಾಗುತ್ತಿದ್ದ ಆಟೋರಿಕ್ಷಾ ಕಾಪು ಎಂಬಲ್ಲಿ ಸಾಗುತ್ತಿದ್ದಾಗ ಮುಂದಿನಿಂದ ಬಂದ ವಾಹನಕ್ಕೆ ಸೈಡ್ ಕೊಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಹಾಗೂ ನದಿ ಮಧ್ಯದ ಸುಮಾರು 50 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಈ ಸಮಯ ನದಿಯಿಂದ ಸುಮಾರು ಒಂದು ಮೀ. ಅಂತರದಲ್ಲಿ ರಿಕ್ಷಾ ಮರ ಒಂದಕ್ಕೆ ಸಿಲುಕಿಕೊಂಡ ಕಾರಣ ಸಂಭವನೀಯ ದುರಂತ ತಪ್ಪಿದೆ.

ನದಿಯು ಈ ಭಾಗದಲ್ಲಿ ಸುಮಾರು 10 ರಿಂದ 12 ಅಡಿಯಷ್ಟು ಆಳವಿದೆ. ಶಿವಮೊಗ್ಗ ಮೂಲದ ಗಾಯಾಳುಗಳಾದ ಶಾರದಮ್ಮ, ಭಾರತೀಯಮ್ಮ,ಗೀತಾ ಹಾಗೂ ರಮೇಶ್ ಎಂಬವರನ್ನು ಕಕ್ಕಿಂಜೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಆಟೋರಿಕ್ಷಾ ಉರುಳಿದ ಕಂದಕ ಪ್ರದೇಶದಲ್ಲಿ ಸಾಕಷ್ಟು ತ್ಯಾಜ್ಯ ತಂದು ಹಾಕಲಾಗಿದ್ದು, ಪರಿಸರದಲ್ಲಿ ಹರಡಿರುವ ದುರ್ವಾಸನೆ ಹಾಗೂ ತ್ಯಾಜ್ಯಗಳ ರಾಶಿ ನಡುವೆ ಗಾಯಾಳು ಪ್ರಯಾಣಿಕರನ್ನು ಸ್ಥಳೀಯರು ಹರಸಾಹಸ ಪಟ್ಟು ಮೇಲಕ್ಕೆತ್ತಿದರು.

Gayathri SG

Recent Posts

ಬಾರ್ ಗೆ ನುಗ್ಗಿದ ಕಳ್ಳರು: 60 ಲೀಟರ್ ಮದ್ಯ ಕಳ್ಳತನ

ಜಿಲ್ಲೆಯ ಹನೂರು ಪಟ್ಟಣದ ಬಂಡಳ್ಳಿ ಮುಖ್ಯ ರಸ್ತೆಯಲ್ಲಿರುವ ಅಮೃತ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ತಡ ರಾತ್ರಿ ಕಳ್ಳರ ತಂಡ…

8 mins ago

ಬಾಳೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಕೋರಿ ರಾಷ್ಟ್ರೀಯ ಹೆದ್ದಾರಿ ಬಂದ್ ಚಳುವಳಿ

ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಚಾಮರಾಜನಗರದ ಸತ್ಯಮಂಗಲಂ ಮುಖ್ಯ ರಸ್ತೆಯಲ್ಲಿ ಜಮಾಯಿಸಿದ ಸಂಘದ ಪದಾಧಿಕಾರಿಗಳು…

24 mins ago

ಗಾಳಿ ಸಮೇತ ಭಾರಿ ಮಳೆ : ನೆಲಕಚ್ಚಿದ ಮರಗಳು

ಧಾರವಾಡದಲ್ಲಿ ಶನಿವಾರ ಗಾಳಿ ಸಮೇತ ಮಳೆಯಾಗಿದ್ದು, ಅಲ್ಲಲ್ಲಿ ಮರಗಳು ನೆಲಕಚ್ಚಿದ ಬಗ್ಗೆ ವರದಿಯಾಗಿದೆ. ಬೆಳಿಗ್ಗೆಯಿಂದ ವಿಪರೀತ ಬಿಸಿಲಿನ ವಾತಾವರಣವಿತ್ತು

48 mins ago

ಮನುಷ್ಯನ ಆರೋಗ್ಯಕ್ಕೆ ಕ್ರೀಡೆಗಳು ಅತ್ಯಂತ ಸಹಕಾರಿ : ತಮ್ಮಯ್ಯ

ಕ್ರೀಡೆಗಳು ಮನುಷ್ಯನ ಆರೋಗ್ಯವನ್ನು ಸುಸ್ಥಿರವಾಗಿ ಕಾಪಾಡುವ ಜೊ ತೆಗೆ ಮನಸ್ಸನ್ನು ಹತೋಟಿಗಿಡುವ ಬಹುದೊಡ್ಡ ಸಾಧನ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ…

59 mins ago

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು- ತಮ್ಮಯ್ಯ

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಆ ನಿಟ್ಟಿನಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಬೇಕೆಂದು ಶಾಸಕ ಎಚ್.ಡಿ. ತಮ್ಮಯ್ಯ ಅವರು ಹೇಳಿದ್ದಾರೆ. ನಗರದ ಬಸವನಹಳ್ಳಿಯ…

1 hour ago

ಮಕ್ಕಳು ಬೇಸಿಗೆ ರಜೆಯಲ್ಲಿ ಶಿಕ್ಷಣದಿಂದ ವಂಚಿತರಾಗಬಾರದು : ಶಿಕ್ಷಕ ಬಾಲಾಜಿ

ಬೇಸಿಗೆ ರಜೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಸಂಸ್ಥೆಗಳ ಬೇಸಿಗೆ ತರಬೇತಿ ಶಿಬಿರಗಳಿಗೆ ಮುಂದಿನ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಕಳಿಸುವುದು ಸಾಮಾನ್ಯ.…

1 hour ago