ಕಾಸರಗೋಡು: ಆಟೋರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯೊಂದರ ಅಂಗಳಕ್ಕೆ ಉರುಳಿದ ಘಟನೆ ಆದಿತ್ಯವಾರ ಸಂಜೆ ಉಪ್ಪಳ ಸಮೀಪದ ಪತ್ವಾಡಿಯಲ್ಲಿ ನಡೆದಿದ್ದು, ಐವರು ಗಾಯಗೊಂಡಿದ್ದಾರೆ.
ಲತೀಫ್ , ಪತ್ನಿ ಝುಹರಾ, ಮಕ್ಕಳಾದ ಲುಬ್ನಾ, ಬಶೀರ್ ಆಟೋ ಚಾಲಕ ರಹೀಂ ಗಾಯ ಗೊಂಡವರು. ಗಾಯಾಳುಗಳನ್ನು ಉಪ್ಪಳ ಹಾಗೂ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.