ಕಾಸರಗೋಡು

ಖಾಸಗಿ ಬಸ್ ಟಿಕೆಟ್ ದರ ಹೆಚ್ಚಿಸಲು ನಿರ್ಧಾರ: ಮುಷ್ಕರ ಹಿಂಪಡೆದ ಬಸ್ ಮಾಲೀಕರ ಸಂಘ

ಕಾಸರಗೋಡು :  ಕೇರಳದಲ್ಲಿ ಮಾರ್ಚ್ 23ರ ಮಧ್ಯರಾತ್ರಿಯಿಂದ ಆರಂಭಗೊಂಡಿದ್ದ ಖಾಸಗಿ ಬಸ್ ಮುಷ್ಕರವನ್ನು ಹಿಂಪಡೆಯಲಾಗಿದೆ. ರಾಜ್ಯದ ಖಾಸಗಿ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಾರಿಗೆ ಖಾತೆ ಸಚಿವ ಆಂಟನಿ ರಾಜು ಅವರೊಂದಿಗೆ ತಿರುವನಂತಪುರದಲ್ಲಿ ಭಾನುವಾರ ನಡೆಸಿದ ಸಭೆಯಲ್ಲಿ ಮುಷ್ಕರ ಕೈಬಿಡುವ ನಿರ್ಧಾರಕ್ಕೆ ಬರಲಾಗಿದೆ.

ಬಸ್ ಪ್ರಯಾಣ ದರವನ್ನು ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿರುವುದರಿಂದ ಮುಷ್ಕರವನ್ನು ಹಿಂಪಡೆಯಲಾಗಿದೆ ಎಂದು ಬಸ್ ಮಾಲೀಕರು ತಿಳಿಸಿದ್ದಾರೆ.

ಬಸ್ ಮಾಲೀಕರ ಸಂಘದ ಮನವಿ ಮೇರೆಗೆ ಮಾತುಕತೆ ನಡೆದಿದೆ ಎಂದು ಸರಕಾರವು ಹೇಳಿಕೆ ನೀಡಿದೆ. ಸಭೆಯಲ್ಲಿ ಟಿಕೆಟ್ ದರ ಹೆಚ್ಚಿಸುವ ಕುರಿತು ಭರವಸೆ ನೀಡಲಾಗಿದೆ ಆದರೆ ಅದನ್ನು ಜಾರಿಗೆ ತರುವ ದಿನಾಂಕವನ್ನು ಮುಂದೆ ತೀರ್ಮಾನಿಸಲಾಗುವುದು ಎಂದು ಸರಕಾರವು ತಿಳಿಸಿದೆ.

ಇದೇ ವೇಳೆ ಪ್ರಯಾಣ ದರ ಏರಿಕೆಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಖಾಸಗಿ ಬಸ್ ಮಾಲೀಕರು ಮುಷ್ಕರ ನಡೆಸಿದ್ದಾರೆ. ಇದರಿಂದಾಗಿ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಬೇಕಾಯಿತು. ಸರಕಾರದ ನಿರ್ಲಕ್ಷ್ಯ ಧೋರಣೆಯೇ ಜನರು ಸಮಸ್ಯೆ ಎದುರಿಸಲು ಕಾರಣವಾಯಿತು ಎಂದು ಖಾಸಗಿ ಬಸ್ ಮಾಲೀಕರು ಹೇಳಿದ್ದಾರೆ.

Sneha Gowda

Recent Posts

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ: ಆರೋಪಿ ಬಿಭವ್‌ ಕುಮಾರ್‌ ವಶಕ್ಕೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ನಡೆಸಿದ ಆರೋಪಿ, ಅರವಿಂದ್‌ ಕೇಜ್ರಿವಾಲ್‌ ಆಪ್ತ ಕಾರ್ಯದರ್ಶಿ…

8 mins ago

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ: ಪ್ರಯಾಣಿಕನ ಮೇಲೆ ಪ್ರಕರಣ ದಾಖಲು

ಬೆಂಗಳೂರಿನಿಂದ ಪುಣೆಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಚೆಕ್-ಇನ್ ಬ್ಯಾಗ್‌ನಲ್ಲಿ ಬಾಂಬ್ ಅಡಗಿಸಿಟ್ಟಿರುವುದಾಗಿ ಸುಳ್ಳು ಬೆದರಿಕೆ ಹಾಕಿ ಭೀತಿ…

17 mins ago

ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ : ನಿತಿನ್‌ ಗಡ್ಕರಿ

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ ಎನ್ನುವ ಕಾಂಗ್ರೆಸ್‌ ಆರೋಪಕ್ಕೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ…

28 mins ago

ತೀರ್ಥಯಾತ್ರೆಗೆ ಬಂದ ನಾಲ್ವರು ನದಿಯಲ್ಲಿ ಮುಳುಗಿ ದಾರುಣ ಸಾವು

ತೀರ್ಥಯಾತ್ರೆಗೆಂದು ಅತಿಥಿ ಗೃಹಕ್ಕೆ ಬಂದಿದ್ದವರು ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಲ್ಲಾಪುರದ ಕಾಗಲ್ ತಾಲೂಕಿನ…

47 mins ago

ಪ್ರಾಚೀನರ ಕಲಾ ಕೊಡುಗೆಗಳ ಸಂರಕ್ಷಣೆ ಅಗತ್ಯ: ನೇಮಿರಾಜ ಶೆಟ್ಟಿ

ಇತಿಹಾಸವನ್ನು ಚಿತ್ರಗಳ ಮೂಲಕ ಜೋಪಾಸನೆ ಮಾಡುವ ಕಾಯಕವೂ ಅತ್ಯಂತ ಶ್ರೇಷ್ಠ. ಮುಂದಿನ ಪೀಳಿಗೆಗೆ ಪ್ರಾಚೀನರ ಕಲಾ ಕೊಡುಗೆಯನ್ನು ಸಂರಕ್ಷಣೆ ಮಾಡುವುದು…

52 mins ago

ಮತ್ತೆ ವಿವಾದಕ್ಕೆ ಸಿಲುಕಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ

ಒಂದು ವರ್ಷದ ಸಾಧನೆಯ ರಿಪೋರ್ಟ್ ಕಾರ್ಡ್ ಹಿಡಿದು ಹಿರಿಯ ಬಿಜೆಪಿ ಮುಖಂಡರ ಬಳಿ ಶಾಸಕ ಅಶೋಕ್ ಕುಮಾರ್ ರೈ ತೆರಳಿದ್ದು, ಶಾಸಕ…

1 hour ago