News Karnataka Kannada
Saturday, May 04 2024
ಕಾಸರಗೋಡು

ಕಾಸರಗೋಡು : ಎರಡು ಕ್ವಿಂಟಾಲ್ ಹಳಸಿದ  ಮೀನು ವಶ

Untitled 4
Photo Credit : News Kannada

ಕಾಸರಗೋಡು : ನಗರದ ಮಾರುಕಟ್ಟೆಯಿಂದ ಎರಡು ಕ್ವಿಂಟಾಲ್ ಹಳಸಿದ  ಮೀನುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಆಹಾರ ಸುರಕ್ಷಾ ಇಲಾಖೆ , ಆರೋಗ್ಯ ಇಲಾಖೆ ಹಾಗೂ ಕಾಸರಗೋಡು ನಗರಸಭೆಯ  ಅಧಿಕಾರಿಗಳು ಶನಿವಾರ ಬೆಳಿಗ್ಗೆ ಮಾರುಕಟ್ಟೆಗೆ ತೆರಳಿ ತಪಾಸಣೆ ನಡೆಸಿದ್ದು , ಭಾರೀ ಪ್ರಮಾಣದ ಕೊಳೆತ ಮೀನುಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡಿನಿಂದ ಈ ಮೀನನ್ನು ಕಾಸರಗೋಡು ಮಾರುಕಟ್ಟೆಗೆ  ತಲಪಿಸಲಾಗಿತ್ತು . ೫೦ ಬಾಕ್ಸ್ ಮೀನುಗಳಲ್ಲಿ ೮ ಬಾಕ್ಸ್ ಮೀನು ಕೊಳೆತಿರುವುದು ಕಂಡುಬಂದಿದೆ. ಈ ಮೀನನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು . ಇದು ಮಾತ್ರವಲ್ಲ ಈ ಮೀನಿಗೆ ಮಾರಕ ರಾಸಾಯನಿಕ ಪದಾರ್ಥ ಬೆರೆಸಿರುವುದು ಪತ್ತೆಯಾಗಿದೆ .

ರಾಸಾಯನಿಕ ಬೆರಕೆಯ ಮೀನುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ  ಹಿನ್ನಲೆಯಲ್ಲಿ  ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದ್ದು , ಮುಂದಿನ ದಿನಗಳಲ್ಲೂ ಈ ಬಗ್ಗೆ ನಿಗಾ ಇರಿಸಲಾಗುವುದು . ತಪಾಸಣೆ ನಡೆಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು