ಆಹಾರ ಖಾತರಿ ಪಡಿಸುವುದು ಸರಕಾರದ ಉದ್ದೇಶ:ಸಚಿವ ಜಿ.ಆರ್.ಅನಿಲ್

ಕಾಸರಗೋಡು : ನಾಗರಿಕ ವಿತರಣಾ ವ್ಯವಸ್ಥೆಯನ್ನು ಪೂರ್ಣವಾಗಿ ಪಾರದರ್ಶಕ ಗೊಳಿಸುವುದು ಸರಕಾರದ ಗುರಿ ಎಂದು ಕೇರಳ  ನಾಗರಿಕ ಪೂರೈಕೆ ಖಾತೆ ಸಚಿವ ಜಿ ಆರ್ ಅನಿಲ್ ಅಭಿಪ್ರಾಯ ಪಟ್ಟರು.
ಅವರು ಬುಧವಾರ ಕಾಸರಗೋಡಿನಲ್ಲಿ ಪಡಿತರ ಅಂಗಡಿಗಳ ಕುರಿತ ಅಹವಾಲು ಸ್ವೀಕಾರ ಸಮಾರಂಭದ ದಲ್ಲಿ  ಹೇಳಿದರು.ಎಲ್ಲರಿಗೂ ಆಹಾರ ಖಾತರಿ ಪಡಿಸುವುದು ಸರಕಾರದ ಉದ್ದೇಶ ವಾಗಿದೆ.ಪ್ರಥಮ ಹಂತದಲ್ಲಿ ಅನರ್ಹರ ಕೈವಶ ಇರುವ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ  ಅರ್ಹರನ್ನು ಸೇರ್ಪಡೆ ಗೊಳಿಸಲಾಗುವುದು. ಜನವರಿ ತಿಂಗಳೊಳಗೆ ಎಲ್ಲಾ ಜಿಲ್ಲಾ – ತಾಲೂಕು ಕಚೇರಿಗಳಲ್ಲಿ ಫ್ರಂಟ್  ಆಫೀಸ್  ಆರಂಭಿಸ ಲಾಗುವುದು.  ಗ್ರಾಹಕರ ದೂರುಗಳನ್ನು ಸ್ವೀಕರಿಸಿ ಅಗತ್ಯ ಕ್ರಮ ತೆಗೆದು ಕೊಳ್ಳ ಲಾಗುವುದು. ನಾಗರಿಕ ಪೂರೈಕೆ ಇಲಾಖಾ ಕಚೇರಿಗಳನ್ನು ಪೂರ್ಣ ಕಂಪ್ಯೂಟರಿಕರಣ  ಗೊಳಿಸಲಾಗುವುದು. ಅಳತೆ , ತೂಕ ದಲ್ಲಿ ವಂಚನೆ ನಡೆಯದಂತೆ ಗುಣಮಟ್ಟದ ಆಹಾರ ಧಾನ್ಯ ಗಳ ನ್ನು ವಿತರಿಸುವ ನಿಟ್ಟಿಯಲ್ಲಿ ಗಮನ ಹರಿಸಲಾಗುವುದು ಎಂದು ಸಚಿವರು ಹೇಳಿದರು.
ಗೋದಾಮು ಗಳಲ್ಲಿನ ಸಮಸ್ಯೆ ಗಳ ನ್ನು ಶೀಘ್ರ ಪರಿಹರಿಸಲಾಗುವುದು. ರಾಜ್ಯ ಸರಕಾರದ ಪ್ರಥಮ ವರ್ಷ ಪೂರ್ಣ  ಗೊಳ್ಳುವ ಮೊದಲು ರಾಜ್ಯದ ಎಲ್ಲಾ ಪಡಿತರ ಅಂಗಡಿಗಳನ್ನು ನವಿಕರಿ ಲಾಗುವುದು. ಸ್ವಚ್ಛತೆ ಹಾಗೂ ಆಹಾರ ಧಾನ್ಯ ಸಂಗ್ರಹಣೆಗೆ ಅಗತ್ಯ ವ್ಯವಸ್ಥೆ ಗಳ ನ್ನು ತೆಗೆದು ಕೊಳ್ಳ ಲಾಗುವುದು ಎಂದು ಸಚಿವರು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ  ಸಮಾರಂಭ ದಲ್ಲಿ ಜಿಲ್ಲಾಧಿಕಾರಿ  ಭಂಡಾರಿ ಸ್ವಾಗತ್ , ನಾಗರಿಕ ಪೂರೈಕೆ ಇಲಾಖಾ ರಾಜ್ಯ ನಿರ್ದೇಶಕ ಡಾ. ಡಿ. ಸಜಿತ್  ಬಾಬು ವಲಯ  ರೇಶ ನಿಂಗ್  ಉಪ ನಿಯಂತ್ರಕ  ಕೆ. ಮನೋಜ್ ಕುಮಾರ್, ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿ ಅನಿಲ್ ಕುಮಾರ್ ಉಪಸ್ಥಿತತಿದ್ದರು.
Swathi MG

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

7 hours ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

7 hours ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

7 hours ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

8 hours ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

8 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

8 hours ago