Categories: ಕರಾವಳಿ

ಹುಡುಗಿಯ ಸ್ವರದಲ್ಲಿ ಕಾಲ್-ಹಣಕ್ಕಾಗಿ ಬ್ಲಾಕ್ ಮೇಲ್ !, ಮೂಡುಬಿದಿರೆ ಯುವಕನ ಬಂಧನ

ಮೂಡುಬಿದಿರೆ: ಬೈಕಂಪಾಡಿಯ  ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ವ್ಯಕ್ತಿಯೋರ್ವರಿಗೆ ಹುಡುಗಿಯ ಸ್ವರದಲ್ಲಿ ಕಾಲ್ ಮಾಡಿ ಉಷಾ ಎಂದು ಪರಿಚಯಿಸಿಕೊಂಡು ಸಲುಗೆಯಿಂದ ಮಾತನಾಡಿ  ವೀಡಿಯೋ ಕಾಲ್ ಮಾಡಿ ಯುವತಿಯ ಖಾಸಗಿ ಅಂಗಗಳನ್ನು ತೋರಿಸಿ  ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ ಆರೋಪದಲ್ಲಿ ಮೂಡುಬಿದಿರೆ ಸಮೀಪದ ಯುವಕನೋರ್ವನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಇದೀಗ  ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ.

ಅಂದಹಾಗೆ ಈ ‘ಉಷಾ’ ನ ಅಸಲಿ ಹೆಸರು ಧನಂಜಯ. ಮೂಡುಬಿದಿರೆ ಸಮೀಪದ ಬಿರಾವು ಪರಿಸರದವನು.
ಬೈಕಂಪಾಡಿಯಲ್ಲಿ ಉದ್ಯೋಗಿಯಾಗಿರುವ ಸುರತ್ಕಲ್ ಹೊಸಬೆಟ್ಟು ನಿವಾಸಿ ನವೀನ್ ಚಂದ್ರ ಎಂಬುವರಿಗೆ ಒಂದು ಮೊಬೈಲ್ ನಂಬರ್ ನಿಂದ ಕಾಲ್ ಬರುತ್ತದೆ. ಕಾಲ್ ಮಾಡಿದ ಧನಂಜಯ ಹುಡುಗಿಯ ಸ್ವರದಲ್ಲಿ ಮಾತನಾಡುತ್ತಾ ತನ್ನನ್ನು ಉಷಾ ಎಂದು ಪರಿಚಯಿಸಿಕೊಳ್ಳುತ್ತಾನೆ. ಹೀಗೆಯೇ ಮೊಬೈಲ್ ನಲ್ಲಿ ಮಾತನಾಡುತ್ತಾ ಸಲುಗೆಗೆ ಹೋಗಿ ಒಂದು ದಿನ ವೀಡಿಯೋ ಕಾಲ್ ನಲ್ಲಿ ಮಾತನಾಡುವ ಎಂದು ವೀಡಿಯೋ ಕಾಲ್ ಮಾಡಿ ಅದರಲ್ಲಿ ಯಾವುದೋ ಹುಡುಗಿಯ ಖಾಸಗಿ ಅಂಗಗಳನ್ನು ತೋರಿಸಿ ಇಬ್ಬರೂ ಮಾತನಾಡುವ ಸ್ಕ್ರೀನ್ ಶಾಟ್ ತೆಗೆದು ಕೆಲ ದಿನಗಳ ಬಳಿಕ ಅದನ್ನು ನವೀನ ಚಂದ್ರರಿಗೆ ಕಳುಹಿಸಿ ನನಗೆ 25 ಸಾವಿರ ಹಣ ಕೊಡಬೇಕು,ಇಲ್ಲವಾದಲ್ಲಿ ಈ ವೀಡಿಯೋ ಕ್ಲಿಪ್ಪಿಂಗನ್ನು ಬೇರೆಯವರಿಗೆ ಕಳುಹಿಸುವುದಾಗಿ ಬೆದರಿಸಿದ್ದಾನೆ.

ಇದರಿಂದ ಗಾಬರಿಗೊಂಡ ನವೀನ್ ಚಂದ್ರ ಅವರು ಒಮ್ಮೆ ಎರಡು ಸಾವಿರ ಗೂಗಲ್ ಪೇ ಮಾಡಿದ್ದಾರೆ.  ಮತ್ತೆ ಕೆಲದಿನಗಳ ಬಳಿಕ ಕಾಲ್ ಮಾಡಿ ಮತ್ತೊಮ್ಮೆ 25 ಸಾವಿರಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಈ ವೇಳೆಗಾಗಲೇ ನವೀನರಿಗೆ ತನಗೆ ಕಾಲ್ ಮಾಡುತ್ತಿರುವುದು ಉಷಾ ಅಲ್ಲ ಎಂಬ ವಿಷಯ ಅರಿವಿಗೆ ಬಂದಿದೆ.
ಈ ವಿಷಯವನ್ನು ತನ್ನ ಆಪ್ತರಲ್ಲಿ ಹೇಳಿಕೊಂಡಿದ್ದಾರೆ. ಅವರು ಪೊಲೀಸರಿಗೆ ದೂರು ನೀಡಲು ಸಲಹೆ ನೀಡಿದ್ದು ಅದರಂತೆ ನವೀನ್ ಚಂದ್ರ ಅವರು ಸುರತ್ಕಲ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಧನಂಜಯನನ್ನು ಇತ್ತೀಚೆಗೆ ಮೂಡುಬಿದಿರೆಯಿಂದ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಧನಂಜಯ ನ್ಯಾಯಾಂಗ ಬಂಧನದಲ್ಲಿದ್ದು ಗುರುವಾರ ಸಂಜೆ ಆತನಿಗೆ ಜಾಮೀನು ದೊರಕಿದೆ.

Umesha HS

Recent Posts

ಮೈಸೂರಿನ ಸ್ಪಂದನ ಸೇವಾ ಸಂಸ್ಥೆಯಿಂದ ʼಅಕ್ಷಯ ಅನ್ನʼ ಕಾರ್ಯಕ್ರಮ

ಅಕ್ಷಯ ತೃತೀಯ ಅಂದ್ರೆ ಜನರು ಒಡವೆ ವಸ್ತ್ರ ತಗೋಬೇಕು. ಇದರಿಂದ ನಮ್ಮ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆ ಇದೆ. ಈ‌…

3 mins ago

ಮರುಬಿಡುಗಡೆಗೆ ತಯಾರಾಗಿದೆ ಉಪೇಂದ್ರ ಅಭಿನಯಿಸಿ, ನಿರ್ದೇಶಿಸಿದ ‘ಎ’ ಸಿನೆಮಾ

ಚುನಾವಣೆ ಹಾಗೂ ಐಪಿಎಲ್ ಕಾರಣದಿಂದ ಹೊಸ ಸಿನಿಮಾಗಳ ಬಿಡುಗಡೆ ಇಲ್ಲವಾದ ಕಾರಣ ಮತ್ತೆ ಹಳೆ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರುಗಳು…

8 mins ago

ಬಸವೇಶ್ವರ ಉದ್ಯಾನವನಕ್ಕೆ ‘ಸಾಂಸ್ಕೃತಿಕ ನಾಯಕ’ ಮರು ನಾಮಕರಣ

ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಬಸವೇಶ್ವರ ಉದ್ಯಾನವನಕ್ಕೆ 'ಸಾಂಸ್ಕೃತಿಕ ನಾಯಕ', ಮರು ನಾಮಕರಣದ ಉದ್ಘಾಟನೆಯನ್ನು ಕರ್ನಾಟಕ ಕಾಲೇಜಿನ ಪೌರ ಕಾರ್ಮಿಕ ಮಹಿಳೆ…

14 mins ago

ಟೂರಿಸ್ಟ್ ಕಾರಿನಲ್ಲಿ ಮೃತದೇಹ ಸಾಗಾಟ: ಚಾಲಕನಿಗೆ ತರಾಟೆ

ಟೂರಿಸ್ಟ್ ಕಾರಿನಲ್ಲಿ ಮೃತದೇಹ ಕೊಂಡೊಯ್ದ ಘಟನೆಯೊಂದು ಉಡುಪಿ ಜಿಲ್ಲೆಯ ಗಡಿಭಾಗ ಶಿರೂರು ಟೋಲ್ ಗೇಟ್ ಬಳಿ ನಡೆದಿದೆ.

24 mins ago

ಕರ್ನಾಟಕದ ಎಲ್ಲಾ ಭಾಷೆಗಳಲ್ಲಿಯೇ ವೈಶಿಷ್ಟ್ಯ ಪಡೆದ ಲಂಬಾಣಿ ಭಾಷೆ

ರಾಜ್ಯದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಏಳು ಭಾಷೆಗಳ ಪೈಕಿ ಲಂಬಾಣಿ ಭಾಷೆಯೂ ಒಂದಾಗಿದ್ದು, ಕಲ್ಯಾಣ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಈ…

34 mins ago

ಜಿಲ್ಲಾಧಿಕಾರಿಗಳಿಂದ ವಿಶ್ವಗುರು ಬಸವಣ್ಣನಿಗೆ ಪುಷ್ಪ ನಮನ

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 891 ಜಯಂತ್ಯೋತ್ಸವ ಅಂಗವಾಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ…

51 mins ago