Categories: ಕರಾವಳಿ

ಹಣ ಹಂಚಿಕೆ, ಅಪಪ್ರಚಾರದಿಂದ ಸೋಲು; ಅರುಣ್‌ ಕುಮಾರ್‌ ಪುತ್ತಿಲ

ಪುತ್ತೂರು: ಹಣಹಂಚಿಕೆ, ಅಪಪ್ರಚಾರದಿಂದಾಗಿ ಸಣ್ಣ ಅಂತರದಿಂದ ಸೋಲನ್ನಪ್ಪಿದ್ದೇನೆ ಎಂದು ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅರುಣ್‌ ಕುಮಾರ್‌ ಪುತ್ತಿಲ ಹೇಳಿದರು. ಸೇವಾ ಸಮರ್ಪಣಾ ಕಾರ್ಯಕ್ರಮದ ಮೂಲಕ ಕಾರ್ಯಕರ್ತರಿಗೆ ವಂದನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೂ ಸಮಾಜ ಶಕ್ತಿಯಾಗಬೇಕು ಎಂಬುವ ಆಶಯವಿತ್ತು. ಕೆಲ ನಾಯಕರ ತಪ್ಪು ಹೆಜ್ಜೆಗಳಿಂದಾಗಿ ಅಂತಹ ಅವಕಾಶ ತಪ್ಪಿ ಹೋಯಿತು. ಮೇಲಿನ ಸ್ಥಾನದಲ್ಲಿ ಕುಳಿತಿದ್ದ ನಾಯಕರ ತಪ್ಪು ನಿರ್ಧಾರದಿಂದಾಗಿ ಹಿಂದೂ ಸಮಾಜಕ್ಕೆ ಶಕ್ತಿ ಕೊಡಬೇಕಾದ ನಾವು ಶಕ್ತಿ ಕಳೆದುಕೊಂಡೆವು. ನನ್ನಲ್ಲಿ ಎಂದೂ ಜಾತಿ ಇಲ್ಲ. ಇರುವುದು ಹಿಂದುತ್ವ ಮಾತ್ರ. ಆದರೂ ನನ್ನ ಬಗ್ಗೆ ಹಲವಾರು ಅಪಮಾನ, ಅಪವಾದಗಳನ್ನು ಮಾಡಿದರು. ಅವರಿಗೆ ನನ್ನ ಕಣ್ಣೀರಿನ ಹನಿ ತಟ್ಟಲಿದೆ. ಶ್ರೀ ಮಹಾಲಿಂಗೇಶ್ವರ ಉತ್ತರ ನೀಡಲಿದ್ದಾನೆ. ಚುನಾವಣೆಯಲ್ಲಿ ನಾನು ಸೋತ್ತಿದ್ದರೂ ಕಾರ್ಯಕರ್ತರ ವಿಶ್ವಾಸಕ್ಕೆ ಪಾತ್ರನಾಗಿದ್ದೇನೆ. ಸ್ಪರ್ಧೆಯ ಮೂಲಕ ದೇಶಕ್ಕೆ ಬದಲಾವಣೆಯ ಚಿಂತನೆ ನೀಡಿದ್ದೇನೆ ಎಂದು ಹೇಳಿದರು. ಪುತ್ತಿಲ ತನ್ನನ್ನು ಬೆಂಬಲಿಸಿದ್ದ ಬಲಿಸಿದ್ದ ಕಾರ್ಯಕರ್ತರಿಗೆ ಗೌರವ ಸಲ್ಲಿಸಲು ವಿಶೇಷ ಪಾದಯಾತ್ರೆ ಹಮ್ಮಿಕೊಂಡಿದ್ದರು. ಪಾದಯಾತ್ರೆಯಲ್ಲಿ ಭಾಗವಹಿಸಿದ ಸುಮಾರು ೫೦೦೦ ಕಾರ್ಯಕರ್ತರು ಪಾಲ್ಗೊಂಡಿದ್ದರು.

Umesha HS

Recent Posts

ಗೋಶಾಲೆ ಜಾನುವಾರುಗಳಿಗೆ ಮೇವು ವಿತರಿಸಿಲ್ಲ ಎಂದು ರೈತರು ಪ್ರತಿಭಟನೆ

ಏಪ್ರಿಲ್ 25ರಿಂದ ಕೆ ವಿ ಎನ್ ದೊಡ್ಡಿ, ಎಂ ಟಿ ದೊಡ್ಡಿ ಗ್ರಾಮದ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಮೇವು ವಿತರಿಸಿಲ್ಲ ಎಂದು…

7 mins ago

ಭಾರಿ ಮಳೆ : 78 ಮಂದಿ ಸಾವು, 100ಕ್ಕೂ ಹೆಚ್ಚು ಜನ ನಾಪತ್ತೆ

ಬ್ರೆಜಿಲ್‌ನ ದಕ್ಷಿಣ ಭಾಗದಲ್ಲಿರು ರಿಯೋ ಗ್ರಂಡ್‌ ಡೊ ಸುಲ್‌ʼ ರಾಜ್ಯಲ್ಲಿ ಸುರಿದ ಬಾರಿ ಮಳೆಯಿಂದಾಗಿ ಪ್ರವಾಹ ಯಂಟಾಗಿದ್ದು ಈವರೆಗೂ 78…

22 mins ago

ಕಾಂಗ್ರೆಸ್‌ ಸಚಿವನ ಆಪ್ತನ ಮನೆಗೆ ಇಡಿ ದಾಳಿ : ಕಂತು ಕಂತು ಹಣದ ರಾಶಿ ಜಪ್ತಿ

ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಅಲಂ ಅವರ ಆಪ್ತ ಕಾರ್ಯದರ್ಶಿ ಮನೆಗೆ ಐಡಿ ರೈಡ್‌ ಮಾಡಿದ್ದು 30 ಕೋಟಿ ಅಧಿಕ ಹಣ…

47 mins ago

ಕಾಂಗ್ರೆಸ್‌ ಮುಖಂಡ ಡಾ. ನಾಗರೆಡ್ಡಿ ಪಾಟೀಲ್‌ ನಿಧನ

ಕಲಬುರ್ಗಿ ಜಿಲ್ಲೆಯ ಸೇಡಂ ಮತಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ ಮುಖಂಡರಾಗಿದ್ದ ಡಾ. ನಾಗರೆಡ್ಡಿ ಪಾಟೀಲ್‌ (79) ಇಂದು ಬೆಳಗಿನ…

54 mins ago

ಟಿ20 ವಿಶ್ವಕಪ್​ಗೆ ಭಯೋತ್ಪಾದಕರ ಬೆದರಿಕೆ !

ಜೂನ್ 2 ರಿಂದ 29 ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್​ಗೆ ಭಯೋತ್ಪಾದಕರು…

1 hour ago

ಬೆಂಗಳೂರಿನಲ್ಲಿ ಬಿಯರ್ ಕೊರತೆ; ಆಫರ್​​ಗಳಿಗೆ ಬ್ರೇಕ್

ನೀರಿನ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಬೆಂಗಳೂರು ನಗರದಲ್ಲಿ ಶೀಘ್ರದ್ಲಲೇ ಬಿಯರ್​ ಬಿಕ್ಕಟ್ಟು ಕೂಡ ಸೃಷ್ಟಿಯಾಗಬಹುದು ಎಂದು ಮಾರುಕಟ್ಟೆ ಮೂಲಗಳು ಅಂದಾಜಿಸಿದೆ.

1 hour ago