Categories: ಕರಾವಳಿ

20 ಅಡಿ ಆಳಕ್ಕೆ ಬಿದ್ದ ಕಾರು: ಮಹಿಳೆ ಗಾಯ

ಬಂಟ್ವಾಳ : ಕಾರೊಂದು 20 ಅಡಿ ಆಳದ ಮನೆಯಂಗಳಕ್ಕೆ ಉರುಳಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡ ಘಟನೆ ವಿಟ್ಲ-ಪುತ್ತೂರು ರಸ್ತೆಯ ಚಂದಳಿಕೆ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.


ವೀರಕಂಬ ಗ್ರಾಮದ ನಿವಾಸಿಗಳಾದ ದಿನೇಶ್ ಮಯ್ಯ ಹಾಗೂ ಸಾವಿತ್ರಿ ಎಂಬವರು ವಿಟ್ಲ ಕಡೆಯಿಂದ ಪುತ್ತೂರು ಕಡೆಗೆ ಕಾರ್ಯ ನಿಮಿತ್ತ ತೆರಳುತ್ತಿದ್ದ ವೇಳೆ ಚಂದಳಿಕೆ ಶಾಲಾ ಮುಂಭಾಗದಲ್ಲಿ ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾವನ್ನು ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ಕಳೆದು ಬೃಹತಾಕಾರದ ಆಳದಲ್ಲಿರುವ ಮನೆಯೊಂದರ ಅಂಗಳಕ್ಕೆ ಉರುಳಿದೆ.ಇದೇ ವೇಳೆ ಕಲ್ಲೊಂದಕ್ಕೆ ಸಿಲುಕಿದ ಕಾರು ಬಳಿಕ ನಿಧಾನವಾಗಿ ಅಂಗಳಕ್ಕೆ ಉರುಳಿದೆ.

ಈ ವೇಳೆ ವೇಗವೂ ಕಡಿಮೆಯಾದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಘಟನೆಯಲ್ಲಿ ಸಾವಿತ್ರಿ ಗಾಯಗೊಂಡಿದ್ದು, ಸ್ಥಳೀಯರು ಅವರನ್ನು ವಿಟ್ಲ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.ಅದೃಷ್ಟವಶಾತ್ ಇಬ್ಬರು ಪ್ರಾಣಾಪಾಯವಿಲ್ಲದೆ ಪವಾಢಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಇಲ್ಲಿಯ ಮನೆಯ ಕೆಲಸ ನಡೆಯುತ್ತಿದ್ದು, ಇದರ ಕೆಳಗಡೆ ಪ್ರತಿ ನಿತ್ಯ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಘಟನೆ ಬೆಳಿಗ್ಗೆಯೆ ಸಂಭವಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Desk

Recent Posts

ಕಾರು ಬೈಕಿನ ನಡುವೆ ಅಪಘಾತ; ಸವಾರ ಮೃತ್ಯು

ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತಿಬ್ಬರಿಗೆ ಪೆಟ್ಟಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ…

2 mins ago

ಪರಶುರಾಮ ಮೂರ್ತಿಯ ಕಾಮಗಾರಿ ನಡೆಸಲು ಕಾಂಗ್ರೆಸ್ ಅಡ್ಡಿ: ನವೀನ್‌  ನಾಯಕ್

ಪರಶುರಾಮ ಮೂರ್ತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆಸಲು ಹೈಕೋರ್ಟ್ ಅನುಮತಿ ನೀಡಿದ್ದು, ಕಾಮಗಾರಿ ಆರಂಭಕ್ಕೆ ಜಿಲ್ಲಾಡಳಿತ ತಡೆಯೊಡ್ಡುವ ಮೂಲಕ ಪರೋಕ್ಷವಾಗಿ…

23 mins ago

ಬಂಡೀಪುರ ಅರಣ್ಯ ಪ್ರದೇಶದಲ್ಲಿ ಹುಲಿ ಮೃತದೇಹ ಪತ್ತೆ

ಗಂಡು ಹುಲಿಯೊಂದರ ಮೃತದೇಹ  ಬಂಡೀಪುರ ಹುಲಿ ಸಂರಕ್ಷಿತ  ಪ್ರದೇಶದ  ಮೈಸೂರು ಜಿಲ್ಲೆಯ  ಹೆಡಿಯಾಲ ಉಪ-ವಿಭಾಗದ ಹೆಬ್ಬಳ್ಳ ಗಸ್ತಿನ ಚಾಮಲಾಪುರ ಕಟ್ಟೆಯ ಅರಣ್ಯ ಪ್ರದೇಶದಲ್ಲಿ  ಪತ್ತೆಯಾಗಿದ್ದು, ವಯೋಸಹಜವಾಗಿ…

29 mins ago

15 ವರ್ಷದಿಂದ ಸಂಸದ ರಾಘವೇಂದ್ರ ಗೆದ್ದು ಏನು ಕಡೆದು ಕಟ್ಟೆಹಾಕಿದ್ದಾರೆ: ಪ್ರದೀಪ್ ಈಶ್ವರ್

ಕಳೆದ 15 ವರ್ಷದಿಂದ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸಂಸದ ರಾಘವೇಂದ್ರ ಗೆದ್ದು ಏನು ಕಡೆದು ಕಟ್ಟೆಹಾಕಿದ್ದಾರೆ ಎಂದು ಚಿಕ್ಕಬಳ್ಳಾಪುರದ ಶಾಸಕ…

33 mins ago

ವರುಣನ ಆರ್ಭಟಕ್ಕೆ ಬೆಳೆ ನಷ್ಟ : ಬಿರುಗಾಳಿ ಮಳೆಗೆ ನೆಲಕಚ್ಚಿದ 8 ಎಕರೆ ಬಾಳೆ ಬೆಳೆ

ವರುಣ ಕ್ಷೇತ್ರದಲ್ಲಿ ವರುಣನ ಆರ್ಭಟಕ್ಕೆ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಸುಮಾರು ಎಂಟು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆಗೊನೆ…

45 mins ago

ಯೇನೆಪೋಯ ವಿಶ್ವ ವಿದ್ಯಾನಿಲಯದಲ್ಲಿ ಕೌಶಲ್ಯ ಮೌಲ್ಯಮಾಪನ ಕಾರ್ಯಾಗಾರ

ನರ್ಸಿಂಗ್ ಎಜುಕೇಶನ್ ವಿಭಾಗ, ಯೇನೆಪೋಯ ನರ್ಸಿಂಗ್ ಕಾಲೇಜು, ಹಾಗೂ ಯೇನೆಪೋಯ ವಿಶ್ವ ವಿದ್ಯಾನಿಲಯ, ಮಂಗಳೂರು. ಇದರ ಆಶ್ರಯದಲ್ಲಿ ದಿನಾಂಕ ೦೪.೦೫.೨೦೨೪…

48 mins ago