Categories: ಕರಾವಳಿ

ಶಾಲೆಯಲ್ಲಿ ಅಧ್ಯಾಪಕರ ಮೇಲೆ ವಿದ್ಯಾರ್ಥಿಗಳಿಂದ ಹಲ್ಲೆ

ಕಾಸರಗೋಡು: ಮೇಲ್ಪರಂಬ  ಚಂದ್ರಗಿರಿ ಶಾಲೆಯಲ್ಲಿ  ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಜಟಾಪಟಿ ನಡೆದಿದ್ದು,  ಇಬ್ಬರು ಅಧ್ಯಾಪಕರ ಮೇಲೆ  ವಿದ್ಯಾರ್ಥಿಗಳು  ಹಲ್ಲೆ ನಡೆಸಿದ ಘಟನೆ ನಡೆದಿದೆ.

ಗಾಯಗೊಂಡಿರುವ ಮುಖ್ಯೋಪಾಧ್ಯಾಯ ವಿ . ಇಬ್ರಾಹಿಂ ( 45)ಮತ್ತು ಅಧ್ಯಾಪಕ ಪಿ . ಟಿ ಸನ್ನಿ ( 50) ರವರು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ದಿನಗಳಿಂದ ಶಾಲೆಯಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ  ಮಾತಿನ ಚಕಮಕಿ ನಡೆಯುತ್ತಿದ್ದು , ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ್ದರು.
ಅಕ್ಟೊಬರ್ 21 ರಂದು ರಾಜ್ಯ ಮೀನುಗಾರಿಕಾ ಸಚಿವೆ ಮೆರ್ಸಿಕುಟ್ಟಿ ಈ ಶಾಲಾ ಕಟ್ಟಡವನ್ನು  ಉದ್ಘಾಟಿಸಿದ್ದರು. ಪ್ರಕೃತಿ ವಿಕೋಪ ಬರಪರಿಹಾರ ಯೋಜನೆ ಪ್ರಕಾರ ಎರಡು ಕೋಟಿ ರೂ. ಖರ್ಚಿನಲ್ಲಿ ಎರಡು ಕಟ್ಟಡಗಳನ್ನು   ನಿರ್ಮಿಸಲಾಗಿತ್ತು.

ಪ್ರಕೃತಿ ವಿಕೋಪ ವುಂಟಾಗುವ ವೇಳೆ ಸಂತ್ರಸ್ಥರಿಗೆ ಪುನರ್ವಸತಿ  ಕಲ್ಪಿಸಲು  ಹಾಗೂ ಉಳಿದ ಸಂದರ್ಭಗಳಲ್ಲಿ  ತರಗತಿ ನಡೆಸುವ ಉದ್ದೇಶದೊಂದಿಗೆ ಕಟ್ಟಡವನ್ನು ನಿರ್ಮಿಸಲಾಗಿತ್ತು. ಕೆಳ ಅಂತಸ್ತಿನಲ್ಲಿ 10ನೇ ತರಗತಿ ಹಾಗೂ ಕಂಪ್ಯೂಟರ್ ಕೊಠಡಿ ಕಾರ್ಯಾಚರಿಸಲು ಹಾಗೂ ಮೇಲಂತಸ್ತನ್ನು  12ನೇ ತರಗತಿಗೆ ನೀಡಲು ಒಪ್ಪಂದವುಂಟಾಗಿತ್ತು. ಆದರೆ 12ನೇ ತರಗತಿಗೆ  ಕೆಳ ಅಂತಸ್ತನ್ನು ನೀಡಬೇಕೆಂದು ಒಂದು  ಬಣ  ಪಟ್ಟು ಹಿಡಿದಿದೆ.

ಇದರಿಂದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಎರಡು ಬಣ ಉಂಟಾಗಿದ್ದು , ಕಳೆದ ಎರಡುದಿನಗಳಿಂದ ಪ್ರತಿಭಟನೆ ಮತ್ತು ತರಗತಿ ಬಹಿಷ್ಕಾರ ನಡೆಯುತ್ತಿತ್ತು. ಗುರುವಾರ ಶಾಲಾ ಅಧಿಕಾರಿಗಳು ಸಭೆ ಕರೆದರೂ ಒಮ್ಮತಕ್ಕೆ ಬರಲು  ಸಾಧ್ಯವಾಗಿರಲಿಲ್ಲ.  ಈ ನಡುವೆ  ಮಂಗಳವಾರ ಬೆಳಿಗ್ಗೆ  ಈ ಕುರಿತು ವಿವಾದ ಮತ್ತೆ ಉಂಟಾಗಿ ಕೆಲ ವಿದ್ಯಾರ್ಥಿಗಳು ಅಧ್ಯಾಪಕರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಶಾಲೆ ಮುಂದೆ ಪೊಲೀಸರು ಕಾವಲು ಏರ್ಪಡಿಸಿದ್ದಾರೆ.

Desk

Recent Posts

ಬೀದರ್: ಸಂಭ್ರಮದಿಂದ ವಿಶ್ವಗುರು ಬಸವಣ್ಣನವರ ಜಯಂತಿ‌ ಆಚರಣೆ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ‌ ನಗರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

15 mins ago

ಡಿ ಬಾಸ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್ ಔಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್‌ ರಿಲೀಸ್ ಆಗಿದೆ. ಸಿನಿಮಾದ ತೆರೆ ಹಿಂದಿನ ಗ್ಲಿಂಪ್ಸ್ ಇದಾಗಿದೆ.…

23 mins ago

ಧಾರವಾಡದ ಪೇಡಾ ಈ ಬಾರಿ ಯಾರ ಬಾಯಿಗೆ ಬೀಳಲಿದೆ?; ಜೋಶಿ ವಿರುದ್ಧ ವಿನ್ ಆಗ್ತಾರಾ ವಿನೋದ್

ಕರ್ನಾಟಕದ ವಾಣಿಜ್ಯ ನಗರಿ ಎಂದೇ ಪ್ರಸಿದ್ಧಿ ಪಡೆದ ಜಿಲ್ಲೆ ಧಾರವಾಡ. ಬಾಯಿ ನೀರೂರಿಸುವ ಧಾರವಾಡ ಪೇಡಾಕ್ಕೆ ಧಾರವಾಡವಲ್ಲದೆ ಬೇರೆ ಸಾಟಿಯಿಲ್ಲ,…

25 mins ago

ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ 3 ವಾರಸುದಾರರಿಲ್ಲದ ಶವಗಳ ಅಂತ್ಯಸಂಸ್ಕಾರ

ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಮೂರು ಅಪರಿಚಿತ ವ್ಯಕ್ತಿಗಳ ಶವದ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಗೌರಯುತವಾಗಿ ನಡೆಸಲಾಯಿತು.

46 mins ago

ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆಯಡಿ 1 ಲಕ್ಷ ರೂ. ಜಮಾ

ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಇಬ್ಬರು ಹೆಂತಿಯರು ಇರುವವರಿಗೆ 2 ಲಕ್ಷ ರೂ. ಆರ್ಥಿಕ ನೆರವು…

60 mins ago

ಕಿಂಗ್ಸ್‌-ರಾಯಲ್ಸ್‌ ಕದನದಲ್ಲಿ ಕಲಾಶ್‌ನಿಕಾವೋ: ಕೊಹ್ಲಿ ಕೆಣಕಿ ಉಳಿದವರುಂಟೇ

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆರ್‌ ಸಿ ಬಿ ತಂಡ ಪಂಜಾಬ್ ಕಿಂಗ್ಸ್ ಅನ್ನು 60 ರನ್‌ಗಳಿಂದ…

1 hour ago