News Karnataka Kannada
Tuesday, May 07 2024
ಕರಾವಳಿ

ವೆಬ್‍ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳ ರಚನೆ  ರಾಜ್ಯಮಟ್ಟದ ಕಾರ್ಯಾಗಾರ

Photo Credit :

ವೆಬ್‍ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳ ರಚನೆ  ರಾಜ್ಯಮಟ್ಟದ ಕಾರ್ಯಾಗಾರ

ಉಜಿರೆ: ಸಾಮಾಜಿಕ ಜಾಲತಾಣವನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಯುವಕರು ತಮ್ಮ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು. ಮಾನವನ ಅಭಿವೃದ್ಧಿಯಲ್ಲಿ, ಸಾಮಾಜಿಕ ಜಾಲತಾಣ ಅತ್ಯಂತ ಪ್ರಬಲವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಒಳಿತು-ಕೆಡುಕು ಅಪ್ರಸ್ತುತ. ಎಲ್ಲಾ ಕ್ಷೇತ್ರಗಳಲ್ಲಿ ಅದರದ್ದೇ ಆದ ಒಳಿತು ಕೆಡುಕುಗಳಿವೆ. ನಾವು ಅದನ್ನು ವ್ಯವಸ್ಥಿತವಾಗಿ ಅರಿತು ಬಳಸಬೇಕು ಎಂದು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ, ಎಸ್ ಸತೀಶ್ಚಂದ್ರ ಹೇಳಿದರು.

ಇವರು ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಆಯೋಜಿಸಿದ ವೆಬ್‍ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳ ರಚನೆ ಕುರಿತು ರಾಜ್ಯ ಮಟ್ಟದ  ಮೂರು ದಿನಗಳ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಜಾಲತಾಣ ಎಂಬುದು ಒಂದು ಸಾಗರವಿದ್ದಂತೆ. ಇದರ ವಿಸ್ತಾರವನ್ನು ಸಾಗರದ ಆಳಕ್ಕೆ ಹೋಲಿಸಬಹುದು. ಪ್ರಸ್ತುತ ಸಾಮಾಜಿಕ ಜಾಲತಾಣವು ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದೆ. ಹೊಸ ಶಿಕ್ಷಣ ನೀತಿಯಲ್ಲಿ ಇದರ ಅರಿವು ಅಗತ್ಯ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣ ಉತ್ತಮ ರೀತಿಯಲ್ಲಿ ಬಳಸುವುದು ಒಂದು ಕಲೆ. ಇದು ಪ್ರಪಂಚದ ಆಗು-ಹೋಗುಗಳಿಗೆ ಚಲನಾಶಕ್ತಿಯಾಗಿದೆ. ಜಗತ್ತಿನಾದ್ಯಂತ ಜನರ ಬೆಳವಣಿಗೆಗೆ ತೆರೆಯ ಹಿಂದೆ ಪ್ರಬಲವಾಗಿ ಕೆಲಸ ನಿರ್ವಹಿಸುತ್ತಿದೆ. ಆದ್ದರಿಂದ ಅದರ ಕುರಿತು ಬಳಕೆದಾರರಿಗೆ ಸೂಕ್ತ ಜ್ಞಾನ ಅಗತ್ಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ್ ಹೆಗಡೆ, ನವ ಮಾಧ್ಯಮ ಇಂದು ಎಲ್ಲಾ ಕ್ಷೇತ್ರಗಳತ್ತಲೂ ವಿಸ್ತರಿಸಿದೆ. ಉದ್ಯೋಗಾಕಾಂಕ್ಷಿಗಳು ಅವಶ್ಯ ಮೂಲಭೂತ ಜ್ಞಾನದೊಂದಿಗೆ ನವ ಮಾಧ್ಯಮದ ತಾಂತ್ರಿಕ ಕೌಶಲ್ಯವೂ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಾಗಾರವು ಕೌಶಲ್ಯಾಭಿವೃದ್ಧಿಯ ತರಬೇತಿಯಾಗಿ ಅವಶ್ಯ ಪ್ರಾತ್ಯಕಿಕೆಯನ್ನು ನೀಡುವ ಉದ್ದೇಶ ಹೊಂದಿದೆ ಎಂದರು.

ಕನ್ನಡ ನ್ಯೂಸ್ ನೌ ಡಾಟ್ ಕಾಂ ಸಂಪಾದಕ ವಸಂತ್ ಬಿ ಈಶ್ವರಗೆರೆ ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕಿಯಾಗಿ ಭಾಗವಹಿಸಿದರು. ಮೂರು ದಿನಗಳ ಕಾರ್ಯಾಗಾರದಲ್ಲಿ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್ ಚಾನೆಲ್ ರಚನೆ ಹಾಗೂ ನಿರ್ವಹಣೆ, ಆದಾಯ ಗಳಿಕೆ, ಪೇಸ್ ಬುಕ್ ಸಮುದಾಯ ಪುಟದ ರಚನೆ ಹಾಗೂ ನಿರ್ವಹಣೆ, ವೆಬ್ ಸೈಟ್ ರಚನೆ, ನಿರ್ವಹಣೆ ಹಾಗೂ ಆದಾಯ ಗಳಿಕೆ ಕುರಿತು ವಿಸ್ತೃತ ಪ್ರಾತ್ಯಕ್ಷಿಕೆ ನೀಡಲಾಯಿತು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ  ಪತ್ರಕರ್ತರು ಸೇರಿದಂತೆ ಒಟ್ಟು 98 ಮಂದಿ ಭಾಗವಹಿಸಿದ್ದರು.

ಈ ಸಮಾರಂಭದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಗೀತಾ ಎ.ಜೆ ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿನಿಯರಾದ ವರ್ಷಾ ಪ್ರಭು, ವಿಧಾತ್ರಿ ಭಟ್, ವಾಣಿ ಭಟ್ ಹಾಘೂ ಚೈತ್ರಾ  ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು