Categories: ಕರಾವಳಿ

ರೈಲಿನಡಿಗೆ ಬಿದ್ದು ರಿಕ್ಷಾ ಚಾಲಕ ಮೃತ್ಯು

ಪುತ್ತೂರು: ರೈಲಿನ ಅಡಿಗೆ ಬಿದ್ದು ರಿಕ್ಷಾ ಚಾಲಕರೋರ್ವರು ಮೃತಪಟ್ಟ ಘಟನೆ ಹಾರಾಡಿ ಕರ್ಮಲ ಸಮೀಪ ಫೆ.13ರಂದು ನಡೆದಿದೆ.

ಮೂಲತಃ ಕಡಬ ತಾಲೂಕಿನ ಏನೆಕಲ್ಲು ಕಲ್ಲಾಜೆ ದಿ. ವಾಮನ ಗೌಡರ ಪುತ್ರ ಹಾರಾಡಿ ನಂದಿಲದಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದ ರಿಕ್ಷಾ ಚಾಲಕ ನಾರಾಯಣ ಯಾನೆ ನಿತ್ಯ(45) ಎಂಬವರು ರೈಲಿನಡಿಗೆ ಬಿದ್ದು ಮೃತಪಟ್ಟವರು. ಅವಿವಾಹಿತರಾಗಿದ್ದ ನಿತ್ಯ ಅವರು ಸುಮಾರು 7 ವರ್ಷದಿಂದ ಹಾರಾಡಿ ನಂದಿಲದಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯ ಹೊಂದಿದ್ದ ಅವರು ಫೆ. 3ರಂದು ಬೆಳಗ್ಗೆ ರಿಕ್ಷಾದಲ್ಲಿ ಹೋದವರು ಮತ್ತೆ ಮನೆಗೆ ಹಿಂದಿರುಗಿಲಿಲ್ಲ. ಫೆ. 13ರಂದು ಬಾಡಿಗೆ ಮನೆಯಿಂದ ತುಸು ದೂರದಲ್ಲಿರುವ ಕರ್ಮಲ ಎಂಬಲ್ಲಿ ಪಾಸೆಂಜರ್ ರೈಲಿನಡಿಗೆ ಅವರು ಬಿದ್ದು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಆರಂಭದಲ್ಲಿ ಗುರುತು ಪರಿಚಯ ಸಿಗದ ಹಿನ್ನೆಲೆಯಲ್ಲಿ ರೈಲ್ವೇ ಪೊಲೀಸರು ಮಧ್ಯಾಹ್ನದ ವೇಳೆ ಬಂದು ಮೃತ ದೇಹವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಬಳಿಕ ಮೃತ ದೇಹದ ಗುರುತು ಪತ್ತೆಯಾಗಿತ್ತು. ಮೃತರು ಸಹೋದರರು ಮತ್ತು ಸಹೋದರಿಯರನ್ನು ಅಗಲಿದ್ದಾರೆ. ಘಟೆನೆಗೆ ಸಂಬಂಧಿಸಿ ಮಂಗಳೂರು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಪ್ಪಿನಂಗಡಿಯಲ್ಲಿ ಪತ್ತೆಯಾದ ಆಟೋ ರಿಕ್ಷಾ
ನಿತ್ಯ ಅವರು ಫೆ.3ರಂದು ರಿಕ್ಷಾದಲ್ಲಿ ಹೋದವರು ನಾಪತ್ತೆಯಾಗಿದ್ದರು. ಆದರೆ ಅವರ ಆಟೋ ರಿಕ್ಷಾ ಉಪ್ಪಿನಂಗಡಿಯ ಬಾರ್ ಆ್ಯಂಡ್ ರೆಸ್ಟೋರೆಂಟ್‍ನ ಬಳಿ ಪತ್ತೆಯಾಗಿತ್ತು. ಈ ಕುರಿತು ಮಾಹಿತಿ ಪಡೆದು ಕೊಂಡ ಅವರ ಸಂಬಂಧಿಕರು ಆಟೋ ರಿಕ್ಷಾವನ್ನು ಪುತ್ತೂರಿಗೆ ತಂದಿದ್ದರು.

ನೆಹರೂನಗರ ಪಾರ್ಕ್‍ನಲ್ಲಿ ಬಾಡಿಗೆ
ನಿತ್ಯ ಅವಿವಾಹಿತರಾಗಿದ್ದರಿಂದ ಬಾಡಿಗೆ ಮನೆಯಲ್ಲಿ ಅಡುಗೆ ಮಾಡದೆ ಹೊಟೇಲ್‍ನಲ್ಲೇ ಊಟೋಪಚಾರ ಮಾಡುತ್ತಿದ್ದರು. ಬೆಳಗ್ಗೆ ಹೋದರೆ ರಾತ್ರಿಯೇ ಮನೆಗೆ ಬರುತ್ತಿದ್ದು, ನೆಹರೂ ನಗರ ಪಾರ್ಕ್‍ನಲ್ಲಿ ಬಾಡಿಗೆ ಮಾಡುತ್ತಿದ್ದರು. ನಮ್ಮೊಂದಿಗೆ ತುಂಬಾ ಅನ್ಯೋತೆಯಿಂದ ಇದ್ದರು ಎಂದು ಬಾಡಿಗೆ ಮನೆಯ ಮಾಲಕರು ಮಾಹಿತಿ ನೀಡಿದ್ದಾರೆ. a

Desk

Recent Posts

ಪ್ರವಾಹಕ್ಕೆ ತತ್ತರಿಸಿ ಹೋದ ಅಫ್ಗಾನಿಸ್ತಾನ : 200ಕ್ಕೂ ಹೆಚ್ಚು ಜನ ಬಲಿ

ಅಫ್ಘಾನಿಸ್ತಾನದಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದೆ. ಈ ಪ್ರವಾಹದಿಂದಾಗಿ ಸುಮಾರು 200ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಶನಿವಾರ…

17 seconds ago

ಫ್ಲೈಯಿಂಗ್ ಎಲೆಕ್ಟ್ರಿಕ್ ಟ್ಯಾಕ್ಸಿ ನಿರ್ಮಿಸಲು ಮುಂದಾದ ಮದ್ರಾಸ್ ಐಐಟಿ-ಶ್ಲಾಘಿಸಿದ ಆನಂದ್ ಮಹೀಂದ್ರಾ

ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಯನ್ನು ಅಭಿವೃದ್ಧಿಪಡಿಸುತ್ತಿರುವ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‍ನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು…

12 mins ago

ಜಮ್ಮು –ಕಾಶ್ಮೀರ : ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್)…

22 mins ago

ನೂಕುನುಗ್ಗಲಿನಲ್ಲೂ ಪಾದಯಾತ್ರೆ ಹೊರಟ ಭಕ್ತರು : ವಿಡಿಯೋ ವೈರಲ್‌

ಯಮುನೋತ್ರಿ, ಗಂಗೋತ್ರಿ, ಕೇದರ್‌ನಾಥ್‌ ಮತ್ತು ಬದರಿನಾಥ್‌ ಪವಿತ್ರ ಚಾರ್‌ ಧಾಮ್‌ ಯಾತ್ರೆಯ ಹಿನ್ನಲೆಯಲ್ಲಿ ಅಪಾರ ಪ್ರಮಾಣದ ಭಕ್ತರು ಜಮಾಯಿಸಿದ ಪರಿಣಾಮ…

41 mins ago

ಕೆಂಪು ಲಿಪ್​ ಸ್ಟಿಕ್ ಬಳಕೆ ಮೇಲೆ ನಿಷೇಧ ವಿಧಿಸಿದ ಉತ್ತರ ಕೊರಿಯಾ: ಹಚ್ಚಿದರೆ ಕಠಿಣ ಶಿಕ್ಷೆ!

ಮಹಿಳೆಯರು ತುಟಿಗೆ ಹಚ್ಚುವ ಕೆಂಪು ಲಿಪ್​  ಸ್ಟಿಕ್ ಬಳಕೆಯ ಮೇಲೆ ಉತ್ತರ ಕೊರಿಯಾದಲ್ಲಿ ಕಟ್ಟುನಿಟ್ಟಾದ ನಿಷೇಧ ವಿಧಿಸಿದೆ.

41 mins ago

ಬಸವೇಶ್ವರ ಜಾತ್ರೆ: ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ಜಿಲ್ಲೆಯ ಸೊನ್ನ ಗ್ರಾಮದ ಶಿವುಕುಮಾರ ಮಾಸ್ತಾರ ದಂಪತಿಗಳ ಸಹಾಯಾರ್ಥದೊಂದಿಗೆ ಗ್ರಾಮದ ಸುಮಾರು 200 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ವಿಶ್ವರಾಧ್ಯ…

1 hour ago