Categories: ಕರಾವಳಿ

ಬಾಯಿಗೆ ರುಚಿಯ ವೈವಿಧ್ಯತೆ ಉಣ ಬಡಿಸಿದ ತಿಂಡಿಮೇಳ

ಸುಳ್ಯ: ಎಡೆ ಬಿಟ್ಟು ಎಡೆ ಬಿಟ್ಟು `ಧೋ’ ಎಂದು ಸುರಿಯುವ ಮಳೆಯ ಅಬ್ಬರದ ನಡುವೆ ರುಚಿಯ ವೈವಿಧ್ಯತೆಯನ್ನು ಉಣಬಡಿಸಿದ ಬಿಸಿ ಬಿಸಿ ತಿಂಡಿ ತಿನಿಸುಗಳು ನೆರೆದ ನೂರಾರು ಮಂದಿಯ ಬಾಯಿಯನ್ನು ಸಿಹಿಯಾಗಿಸಿತು.

ಸುಳ್ಯ ತಾಲೂಕು ಶಿವಳ್ಳಿ ಸಂಪನ್ನದ ವತಿಯಿಂದ ಹಮ್ಮಿಕೊಂಡ ತಿಂಡಿ ಮೇಳವು ಸುಳ್ಯದ ಜನತೆಗೆ ವೈವಿದ್ಯಮಯ ಖಾದ್ಯಗಳ ರುಚಿಯ ವಿನೂತನ ಅನುಭವವನ್ನು ಕೊಡಮಾಡಿತ್ತು. ಮಳೆಗಾಲದಲ್ಲಿ ಮನೆ ಮನೆಗಳಲ್ಲಿ ಮಾಡುವ ವೈವಿಧ್ಯಮಯ ತಿಂಡಿಗಳ ರುಚಿಗಳು ಎಲ್ಲರ ಬಾಯನ್ನೂ ಸಿಹಿಯಾಗಿಸಿ ತಮ್ಮ ಅಡುಗೆಯ ನೈಪುಣ್ಯವನ್ನು ಎಲ್ಲರಿಗೂ ತಿಳಿಸಿಕೊಡಬೇಕು ಮತ್ತು ಕಲಿಸಿಕೊಡಬೇಕು ಎಂಬ ಉದ್ದೇಶದಿಂದ ತಿಂಡಿ ಮೇಳವನ್ನು ಏರ್ಪಡಿಸಲಾಗಿತ್ತು. ಶಿವಳ್ಳಿ ಸಂಪನ್ನವು ಪ್ರತಿ ವರ್ಷ ತಿಂಡಿ ಮೇಳವನ್ನು ಏರ್ಪಡಿಸುವುದರ ಮೂಲಕ ಸಾರ್ವಜನಿಕರ ಬಾಯಿಗೆ ರುಚಿಯ ವೈವಿಧ್ಯತೆಯನ್ನು ಸಾರುತ್ತಾರೆ.

ಸುಳ್ಯದ ಜ್ಯೂನಿಯರ್ ಕಾಲೇಜು ಬಳಿಯ ಬ್ರಾಹ್ಮಣರ ವಸತಿ ಗೃಹದ ಸಭಾಭವನದಲ್ಲಿ ಏರ್ಪಡಿಸಿದ ತಿಂಡಿ ಮೇಳದಲ್ಲಿ ಸುಮಾರು 25 ಕ್ಕೂ ಅಧಿಕ ಕೌಂಟರ್ಗಳ ಮೂಲಕ ತಿಂಡಿಗಳನ್ನು ಪ್ರದರ್ಶಿಸಿ ವಿತರಿಸಲಾಯಿತು. ಒಂದೊಂದು ಕೌಂಟರ್ನಲ್ಲಿಯೂ ಒಂದೊಂದು ಕುಟುಂಬದವರು ತಮ್ಮದೇ ಆದ ವಿಶೇಷ ತಿಂಡಿಗಳನ್ನು ಮಾಡಿ ಪ್ರದರ್ಶಿಸಿ ಉಣ ಬಡಿಸಿದರು. ಅದರ ತಯಾರಿಗೆ ಬಳಸುವ ವಸ್ತುಗಳು ಮತ್ತು ವಿಧಾನವನ್ನು ವಿವರಿಸಿ ಹೇಳುತ್ತಿದ್ದರು. ಪ್ರಾಕೃತಿಕವಾಗಿ ಸಿಗುವ ಫಲವಸ್ತುಗಳಾದ ಹಲಸು, ಬಾಳೆ ಹಣ್ಣು ಗಳಿಂದ ತಯಾರಿಸಿದ ವಿವಿಧ ಖಾದ್ಯಗಳು ಮೇಳದ ಹೈಲೈಟ್ಸ್ ಆಗಿತ್ತು.

ಹಲಸಿನ ಹಣ್ಣು ಮತ್ತು ಕಾಯಿಯಿಂದ ಮಾಡಲಾದ ತಿಂಡಿಗಳು, ಕರಿದ ತಿನಿಸುಗಳು, ಸೇಮಿಗೆ ರಸಾಯನ, ಗೋಳಿಬಜೆ, ಬಿಸ್ಕೆಟ್ ರೊಟ್ಟಿ, ಹಲಸಿನ ಸೋಂಟೆ, ಸಜಂಕ್ ಪತ್ರೊಡೆ, ಬೇಸನ್ ಭರ್ಪಿ, ವಡೆ, ಕ್ಯಾಬೇಜ್ ಬಜೆ, ಈರುಳ್ಳಿ ಬಜೆ, ಅಂಬಟೆ ಗೊಜ್ಜು, ಕೋಸಂಬರಿ, ಕಚೋರಿ, ವೆಜ್ ಸ್ಪಿಂಗ್ ರೋಲ್, ಕ್ಯಾರೆಟ್ ಹಲ್ವ, ಸಿಹಿ ಕುಂಬಳ ಹಲ್ವ, ಮೂಲಂಗಿ ಮಂಚೂರಿ, ಗೆಣಸಿನ ಹಲ್ವ, ಪತ್ರೊಡೆ ದೋಸೆ, ಆಟಿ ಪಾಯಸ, ಸೇಮಿಗೆ ಗೋಡಂಬಿ ಪಾಯಸ, ಉಚಿಡ್ಳುಗ, ಹಾಲ್ಬಾಯಿ, ನಾನ್ ಕಟಾಯಿ ಬಿಸ್ಕೆಟ್, ಮದ್ದೂರು ವಡೆ, ಗುಳಿ ಅಪ್ಪ ಪುದಿನ ಚಟ್ನಿ, ವಿವಿಧ ರೀತಿಯ ಫಲವುಗಳು, ಮಸಾಲ ಪುರಿ, ಪಾನ್ಪೂರಿ ಐಟಂಗಳು, ಪೋಡಿ ಮತ್ತಿತರರ ತಿಂಡಿ ತಿನಿಸುಗಳು ಜನರ ಬಾಯಿಯನ್ನು ಚಪ್ಪರಿಸುವಂತೆ ಮಾಡಿತ್ತು.

ಕೆಲವು ಕೌಂಟರ್ ಗಳಲ್ಲಿ ಸ್ಥಳದಲ್ಲಿಯೇ ತಯಾರಿಸಿದ ಬಿಸಿ ಬಿಸಿ ತಿಂಡಿಗಳನ್ನು ವಿತರಿಸಲಾಯಿತು. ಒಂದೊಂದು ಕುಟುಂಬದವರೂ ಒಂದೊಂದು ಕೌಂಟರ್ನಲ್ಲಿ ಬೇರೆ ಬೇರೆ ತರಹದ ತಿಂಡಿಗಳನ್ನು ಮಾಡಿ ತಮ್ಮ `ಕೈಚಳ’ಕವನ್ನು ತೋರ್ಪಡಿಸಿದರು. ತಿಂಡಿಯ ಹೆಸರನ್ನು ಮತ್ತು ತಯಾರಿಸಲು ಬಳಸುವ ವಸ್ತುಗಳ ಹೆಸರನ್ನು ಪ್ರದರ್ಶಿಸಲಾಗಿತ್ತು. ತಿಂಡಿ ಮೇಳದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರವನ್ನು ನೀಡಿ ಪುರಸ್ಕರಿಸಲಾಯಿತು. ಶಿವಳ್ಳಿ ಸಂಪನ್ನದ ವತಿಯಿಂದ ಪ್ರತಿ ವರ್ಷವೂ ವೈವಿಧ್ಯಮಯ ತಿಂಡಿಮೇಳಗಳನ್ನು ಸಂಘಟಿಸುವ ಮೂಲಕ ಶಿವಳ್ಳಿ ಸಂಪನ್ನದ ಎಲ್ಲಾ ಕುಟುಂಬಗಳು ಒಟ್ಟು ಸೇರಿ ಸಂಭ್ರಮಿಸುತ್ತಾರೆ.

ಗೋಳಿ ಬಜೆ ಕಾಯಿಸುವುದರ ಮೂಲಕ ತಿಂಡಿ ಮೇಳವನ್ನು ಸುಬ್ರಹ್ಮಣ್ಯದ ಯಜ್ಞೇಶ್ ಆಚಾರ್ ಉದ್ಘಾಟಿಸಿದರು. ಪಾಕ ಶಾಸ್ತ್ರಜ್ಞ ಬಾಲಕೃಷ್ಣ ಬೈಪಡಿತ್ತಾಯ, ಶಿವಳ್ಳಿ ಸಂಪನ್ನದ ಅಧ್ಯಕ್ಷ ರಮೇಶ ಸೋಮಯಾಗಿ, ಮಾಜಿ ಅಧ್ಯಕ್ಷ ಎಂ.ಎನ್.ಶ್ರೀಕೃಷ್ಣ, ಮಹಿಳಾ ಘಟಕದ ಅಧ್ಯಕ್ಷೆ ಹೇಮಾ ವೈಲಾಯ, ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

 

Desk

Recent Posts

ಅನೈತಿಕ ಸಂಬಂಧ ಶಂಕೆ: ಬೀದರ್​​ನಲ್ಲಿ ಯುವಕರಿಂದ ನೈತಿಕ ಪೊಲೀಸ್​ ಗಿರಿ

ಹಿಂದೂ ಯುವಕನ ಜೊತೆ ಮುಸ್ಲಿಂ ಸಮುದಾಯದ ಮಹಿಳೆ ಕುಳಿತಿದಕ್ಕೆ ಅದೇ ಕೋಮಿನ ಯುವಕರ ಗುಂಪೊಂದು ಹಲ್ಲೆ ನಡೆಸಿ, ನೈತಿಕ ಪೊಲೀಸ್​​…

5 hours ago

ಸಂಗೊಳ್ಳಿರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಆರೋಪಿ ಸೆರೆ

ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀಕನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ  ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ್ದ ಆರೋಪಿಯನ್ನು…

5 hours ago

ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಿಗೆ ಹುಸಿ ಬಾಂಬ್ ಬೆದರಿಕೆ

ಸಿಲಿಕಾನ್ ಸಿಟಿಯಲ್ಲಿ ಹುಸಿ ಬಾಂಬ್ ಬೆದರಿಕೆ ಮೇಲ್ ಮುಂದುವರೆದಿದ್ದು, ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಾದ ನಾಗವಾರದ ಸೇಂಟ್ ಫಿಲೋಮಿನಾ ಸೇರಿದಂತೆ…

6 hours ago

ಬೀದರ್‌: ಜಿಲ್ಲೆಯಾದ್ಯಂತ ತಂಪೆರೆದ ಮಳೆ, ಸಿಡಿಲಿಗೆ ವ್ಯಕ್ತಿ ಸಾವು

ಜಿಲ್ಲೆಯಾದ್ಯಂತ ಭಾನುವಾರ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ವಾತಾವರಣ ತಂಪಾಗಿದೆ.

6 hours ago

ಆಮ್ ಆದ್ಮಿ ಪಕ್ಷವನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ನಾನು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ

ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ಚುನಾವಣಾ…

7 hours ago

ಗೌಡರ ಕುಟುಂಬಕ್ಕೆ ಮೋಸ ಮಾಡುವುದಿಲ್ಲ: ಕೆ.ಮಂಜು

ರಾಜಕೀಯ ಕೊನೆಗಾಲದಲ್ಲಿ ನನ್ನ ಕೈ ಹಿಡಿದವರು ಎಚ್.ಡಿ.ದೇವೇಗೌಡರು, ಅವರ ಕುಟುಂಬಕ್ಕೆ ದ್ರೋಹ ಮಾಡುವ ಕೆಲಸ ಮಾಡುವುದಿಲ್ಲ ಎಂದು ಶಾಸಕ ಎ.…

8 hours ago