ಪ್ರಜಾಪ್ರಭುತ್ವಕ್ಕೆ ಬಹುತ್ವ, ಜಾತ್ಯಾತೀತತೆ ಅನಿವಾರ್ಯ: ಹಮೀದ್ ಅನ್ಸಾರಿ

ಬೆಂಗಳೂರು: ಪ್ರಜಾಪ್ರಭುತ್ವಕ್ಕೆ ಬಹುತ್ವ ಮತ್ತು ಜಾತ್ಯಾತೀತತೆ ಅನಿವಾರ್ಯ ಎಂದು ಉಪರಾಷ್ಟ್ರಪತಿ ಶ್ರೀ ಹಮೀದ್ ಅನ್ಸಾರಿ ತಿಳಿಸಿದರು.

ಅವರು ನಗರದ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಆಯೋಜಿಸಿದ್ದ 25 ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಬಹುತ್ವದಿಂದಾಗಿಯೇ ಸಂವಿಧಾನವು ಪ್ರಜಾಸತ್ತಾತ್ಮಕ ರಾಜ್ಯಾಡಳಿತ ಕ್ರಮ ಮತ್ತು ಜ್ಯಾತ್ಯಾತೀತ ರಾಷ್ಟ್ರರಚನೆಯನ್ನು ಹೊಂದಿದ್ದು, ಬಹುತ್ವ ಎನ್ನುವುದು ನೈತಿಕ ಮೌಲ್ಯವಾಗಿದೆ ಹಾಗೂ ಇಂದಿನ ಆಧುನಿಕ ಸಂವೇದನೆಯಲ್ಲಿ ನಾಗರೀಕತ್ವದ ನಂಬಿಕೆಯೂ ಆಗಿದೆ ಎಂದರು.

ಜಾತ್ಯಾತೀತತೆಯ ಮೂಲ ತತ್ವಗಳಾದ ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಹಿಷ್ಣುತೆಗಳನ್ನು ಪುನರುಚ್ಚರಿಸಿ ಅವುಗಳನ್ನು ಪುನರುಜ್ಜೀವನಗೊಳಿಸಬೇಕಾಗಿದೆ ಎಂದು ಉಪರಾಷ್ಟ್ರಪತಿಗಳು ಹೇಳಿದರು. ಮಹಿಳೆಯರಿಗೆ ಮತ್ತು ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ನೀಡುವತ್ತ ಶ್ರಮಿಸಬೇಕಾದ ಅಗತ್ಯವಿದೆ ಎಂದ ಅವರು, ಸಹಿಷ್ಣುತೆಯನ್ನು ಬಲವಾಗಿ ಸಮರ್ಥಿಸಬೇಕಿದೆ. ಪರಸ್ಪರ ತಿಳುವಳಿಕೆ ಮತ್ತು ಒಪ್ಪಿಕೊಳ್ಳುವ ಮನೋಧರ್ಮವೂ ಅಗತ್ಯ ಎಂದರು. ಬಹುತ್ವದ ಪ್ರಜಾಪಭುತ್ವದಲ್ಲಿ ಇತರ ಎಂದರೆ ನಾವೇ ಆಗಿದ್ದೇವೆ. ಇದಕ್ಕೆ ಕುಂದು ತರುವ ಯಾವುದೇ ಯತ್ನವನ್ನು ತಡೆಯಬೇಕೆಂದು ತಿಳಿಸಿದರು.

ಭಾರತದ ಮುಖ್ಯ ನ್ಯಾಯಾಧೀಶರು ಹಾಗೂ ನ್ಯಾಷನಲ್ ಲಾ ಸ್ಕೂಲ್ ಆಪ್ ಇಂಡಿಯಾ ಯುನಿವರ್ಸಿಟಿಯ ಕುಲಪತಿ ಶ್ರೀ ಜಗದೀಶ್ ಸಿಂಗ್ ಕೇಹರ್ ಪಿದ್ಯಾಥಿಗಲಿಗೆ ಪದವಿ ಪ್ರದಾನ ಮಾಡಿದರು.

ನ್ಯಾಷನಲ್ ಲಾ ಸ್ಕೂಲ್ ಆಪ್ ಇಂಡಿಯಾ ಯುನಿವರ್ಸಿಟಿಯ ಬಿ.ಎ.ಎಲ್.ಎಲ್.ಬಿ ವಿದ್ಯಾರ್ಥಿನಿ ಕು. ಶ್ರುತಿ ಅಶೋಕ್, ಅತಿ ಹೆಚ್ಚಿನ ಅಂಕಗಳನ್ನು ಪಡೆದಿದ್ದು, 15 ಚಿನ್ನದ ಪದಕಗಳನ್ನು ಹಾಗೂ ಪ್ರಮಾಣಪತ್ರವನ್ನು ಉಪರಾಷ್ಟ್ರಪತಿಗಳಿಂದ ಸ್ವೀಕರಿಸಿದರು.

ರಾಜ್ಯಪಾಲರಾದ ಶ್ರೀ ವಜುಭಾಯಿ ವಾಲಾ, ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಭಾತರದ ಮಾಜಿ ಮುಖ್ಯ ನ್ಯಾಯಾಧೀಶರಾದ ಶ್ರೀ ರಾಜೇಂದ್ರ ಬಾಬು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಟಿ.ಬಿ.ಜಯಚಂದ್ರ, ನ್ಯಾಷನಲ್ ಲಾ ಸ್ಕೂಲ್ ಆಪ್ ಇಂಡಿಯಾ ಯುನಿವರ್ಸಿಟಿಯ ಉಪ ಕುಲಪತಿ ಪ್ರೊ.ಆರ್. ವೆಂಕಟರಾವ್ ಉಪಸ್ಥಿತರಿದ್ದರು.

Desk

Recent Posts

ಪ್ರಜ್ವಲ್ ಪ್ರಕರಣ ಕಾಂಗ್ರೆಸ್ ನಿಂದ ರಾಜಕೀಯ: ಅರವಿಂದ ಲಿಂಬಾವಳಿ ಆರೋಪ

ಪ್ರಜ್ವಲ್ ಲೈಂಗಿಕ ಹಗರಣದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಆರೋಪಿಸಿದರು.

2 mins ago

ಬಿಸಿಲಿನ ತಾಪದಿಂದ ಹೊಲದಲ್ಲಿ ಕೆಲಸಕ್ಕೆ ಹೋಗಿದ್ದ ರೈತ ಸಾವು

ಬಿಸಿಲಿನ ತಾಪದಿಂದ ಹೊಲದ ಕೆಲಸಕ್ಕೆ ತೆರಳಿದ್ದ ರೈತರೊಬ್ಬರು ಸಾವಿಗೀಡಾದ ಘಟನೆ ಜಾಲಿಬೆಂಚಿ ಗ್ರಾಮದಲ್ಲಿ ನಡೆದಿದೆ.

17 mins ago

ದೇವೇಗೌಡರ ಕುಟುಂಬ ನೈತಿಕ ಹೊಣೆ ಹೊತ್ತು ರಾಜಕೀಯ ಬಿಡಲಿ: ಮೊಯ್ಲಿ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ದೇವೇಗೌಡರ ಕುಟುಂಬ ನೈತಿಕ ಹೊಣೆ ಹೊತ್ತು ರಾಜಕೀಯ ಬಿಡಬೇಕು ಎಂಬ…

24 mins ago

ಬಾಲಕನನ್ನು ಕಚ್ಚಿದ ನಾಯಿಯನ್ನು ಕೊಂದು ತಿಂದ ಭೂಪ

ತನ್ನ ಸೋದರಳಿಯನಿಗೆ ಕಚ್ಚಿದ ಸಾಕುನಾಯಿಯನ್ನು ವ್ಯಕ್ತಿಯೊಬ್ಬ ಕೊಂದು ತಿಂದ ಘಟನೆ ಥೈಲ್ಯಾಂಡಿನಲ್ಲಿ ನಡೆದಿದ್ದು, ಇದರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

41 mins ago

ಯೋಗಿ ಆದಿತ್ಯನಾಥ್ ಅವರ ಡೀಪ್‌ಫೇಕ್ ವೀಡಿಯೋ ಶೇರ್ ಮಾಡಿದ ಆರೋಪಿಯ ಬಂಧನ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಅವರ ಡೀಪ್‌ಫೇಕ್ ವೀಡಿಯೋವನ್ನು ಪೋಸ್ಟ್ ಮಾಡಿ ಶೇರ್ ಮಾಡಿದ ಆರೋಪದ ಮೇಲೆ ಉತ್ತರಪ್ರದೇಶ ಎಸ್‌ಟಿಎಫ್  ತಂಡ…

56 mins ago

ಉರುಳಿಗೆ ಸಿಲುಕಿದ ಚಿರತೆಯನ್ನು ರಕ್ಷಿಸಿ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ

ಉರುಳಿಗೆ ಸಿಲುಕಿ ನರಳುತ್ತಿದ್ದ ಚಿರತೆಯನ್ನು ರಕ್ಷಿಸಿ ಸುರಕ್ಷಿತವಾಗಿ ನಾಗರಹೊಳೆ ಅಭಯಾರಣ್ಯಕ್ಕೆ ಬಿಟ್ಟ ಘಟನೆ ಪಿರಿಯಾಪಟ್ಟಣ ತಾಲೂಕಿನ ಮಲ್ಲಿನಾಥಪುರ ಗ್ರಾಮದ ಅರಣ್ಯ ನಡು ತೋಪಿನಲ್ಲಿ ನಡೆದಿದೆ.

1 hour ago