News Karnataka Kannada
Sunday, May 12 2024
ಕರಾವಳಿ

ಫಾದರ್ ಮುಲ್ಲರ್ ವಾಕ್ ಶ್ರವಣ ವಿದ್ಯಾಲಯಕ್ಕೆ ಯು.ಜಿ.ಸಿ. ಮಾನ್ಯತೆ

Photo Credit :

ಫಾದರ್ ಮುಲ್ಲರ್ ವಾಕ್ ಶ್ರವಣ ವಿದ್ಯಾಲಯಕ್ಕೆ ಯು.ಜಿ.ಸಿ. ಮಾನ್ಯತೆ

ಮಂಗಳೂರು: ಫಾದರ್ ಮುಲ್ಲರ್ ವಾಕ್ ಶ್ರವಣ ವಿದ್ಯಾಲಯ, ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯುಶನ್ ಇದರ ಅಂಗ ಸಂಸ್ಥೆಯಾಗಿದ್ದು 2007ರಲ್ಲಿ ಆರಂಭಗೊಂಡು ಇಂದಿಗೆ ದಶಮಾನೋತ್ಸವದ ಪರಿಪೂರ್ಣತೆಯ ಹಾದಿಯಲ್ಲಿ ಸಾಗುತ್ತಿದೆ. ವಿದ್ಯಾಲಯದಲ್ಲಿ ಬ್ಯಾಚುಲರ್ ಇನ್ ಆಡಿಯಾಲಾಜಿ ಆಂಡ್ ಸ್ಪೀಚ್ ಲ್ಯಾಂಗ್ವೇಜ್ ಪೆಥೋಲಾಜಿ (BASLP) ಎಂಬ ನಾಲ್ಕು ವರ್ಷದ ವಾಕ್ ಶ್ರವಣ ವಿಜ್ಣಾನದ ಪದವಿ ವಿಷಯದ ಬಗ್ಗೆ ಬೋಧನೆಯನ್ನು ನೀಡುತ್ತಿದೆ. ಈ ವಿದ್ಯಾಲಯಕ್ಕೆ ಕೇಂದ್ರದ ಯು.ಜಿ.ಸಿ.ಯಿಂದ 12(ಬಿ) ಮಾನ್ಯತೆಯನ್ನು ಇದೀಗ ನೀಡಿದೆಯೆಂದು ಫಾದರ್ ಮುಲ್ಲರ್ ಚಾರೀಟೇಬಲ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ರಿಚ್ಚರ್ಡ್ ಅಲೋಶಿಯಸ್ ಕುವೆಲ್ಲೊ ಹಾಗೂ ವೈದ್ಯಕೀಯ ಸೇವೆಯ ಮುಖ್ಯ ಅಧೀಕ್ಷಕರಾದ ಡಾ.ಬಿ. ಸಂಜೀವ ರೈ ಇವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

ಯು.ಜಿ.ಸಿಯು ಹೇಳಿದ ಎಲ್ಲಾ ಮಾನದಂಡಗಳ ಪರಿಪೂರ್ಣತೆಯನ್ನು ಕಾಲೇಜು ಹೊಂದಿದ್ದು, ಇದನ್ನು ಪರಿಶೀಲಿಸಿ ಮಂಗಳೂರು ವಿಶ್ವಾವಿದ್ಯಾಲಯದ ಶಿಫಾರಸ್ಸಿನ ಮೇರೆಗೆ ಯು.ಜಿ.ಸಿಯು 12(ಬಿ) ಮಾನ್ಯತೆಯನ್ನು ನೀಡಿರುತ್ತದೆ. ಸ್ವಯಂ ಹಣಕಾಸು ಹೊಂದಿದ ವಿದ್ಯಾಲಯಕ್ಕೆ ಇನ್ನು ಮುಂದೆ ಯು.ಜಿ.ಸಿ.ಯು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ನೀಡುವಂತಹ ಅನುದಾನಗಳಿಗೆ ಅರ್ಹವಾಗಿರುತ್ತದೆ. ಯುಜಿಸಿ ಪಡೆದಿರುವುದು ಸಂಶೋಧನೆ ಮತ್ತು ಹೊರಗಿನ ಕಾರ್ಯಕ್ರಮಗಳಿಗೆ ಅನುದಾನವನ್ನು ಪಡೆಯಲು ಕಾಲೇಜನ್ನು ಶಕ್ತಗೊಳಿಸುತ್ತದೆ. ಅದಲ್ಲದೆ ವಿದ್ಯಾಲಯವು ಈಗಾಗಲೇ ಯು.ಜಿ.ಸಿಯ 2(ಎಫ್) ವಿಭಾಗಕ್ಕೆ ಒಳಗೊಂಡಿದ್ದು, ಇದರೊಂದಿಗೆ ನ್ಯಾಕ್ ಮಾನ್ಯತೆ, ಎನ್. ಎ. ಬಿ.ಎಚ್ ಮಾನ್ಯತೆ ಹೊಂದಿದ್ದ ದೇಶದ ಎರಡನೇ ವಾಕ್ ಶ್ರವಣ ವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿದ್ಯಾಲಯವು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ತನ್ನ ಸ್ವತಂತ್ರ ಹೊರ ರೋಗಿ ವಿಭಾಗವನ್ನು ಹೊಂದಿದ್ದು, ಇದರಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಸೌಲಭ್ಯಗಳು ಲಭ್ಯವಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಶಾಶ್ವತ ಅನುಮೋದನೆಯನ್ನು ಪಡೆದ ವಿಶ್ವವಿದ್ಯಾನಿಲಯದ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಗೂ ಹೆಸರು ವಾಸಿಯಾಗಿರುತ್ತದೆ.

ಅದಲ್ಲದೇ ವಾಕ್ ಶ್ರವಣದ ಕೌನ್ಸಿಲ್ ರಿಹ್ಯಾಬಿಲಿಟೇಶನ್ ಕೌನ್ಸಿಲ್ ಆಫ್ ಇಂಡಿಯಾ(RCI)ವು ಮುಂದುವರಿಕಾ ಮಾನ್ಯತೆಗೆ ಪರಿಶೀಲನೆಯನ್ನು ನಡೆಸಿ, ವಿದ್ಯಾಲಯವು ಕೌನ್ಸಿಲ್ ಹೇಳಿದ ಮಾನದಂಡಕ್ಕೆ ಸಂಪೂರ್ಣ ಪರಿಪೂರ್ಣತೆಯನ್ನು ಹೊಂದಿಕೊಂಡಿದ್ದು 2016-17ನೇ ವರ್ಷದಿಂದ ನಿರಂತರ ಮೂರು ವರ್ಷಗಳ ಕಾಲಾವಧಿಗೆ ಮುಂದುವರಿಕಾ ಮಾನ್ಯತೆಯನ್ನು ಹೆಚ್ಚುವರಿ ಐದು ವಿದ್ಯಾರ್ಥಿಗಳ ಪರಿಮಿತಿಯ ಅನುಮೋದನೆಯನ್ನು ನೀಡಿದೆ.

ಇದನ್ನು ಮಂಗಳೂರು ವಿಶ್ವಾವಿದ್ಯಾನಿಲಯವು ಕೂಡ ಪರಿಶೀಲಿಸಿ 2017-18ನೇ ಶೈಕ್ಷಣಿಕ ವರ್ಷದಿಂದ 25-30ಕ್ಕೆ ಹೆಚ್ಚಿಸಿದೆ. ವಿದ್ಯಾಲಯದಲ್ಲಿ ಕಲಿತ ವಿದ್ಯಾರ್ಥಿಗಳು ವಾಕ್ ಶ್ರವಣದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಗಳು ನಡೆಸಿದ ಅರ್ಹತೆಯನ್ನು ಪಡೆದಿರುತ್ತಾರೆ.

ನಾವು ಮಂಗಳೂರು ವಿಶ್ವವಿದ್ಯಾನಿಲಯದ ಕಿರಿಯ ಕಾಲೇಜಾಗಿದ್ದರೂ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶಾಶ್ವತ ಸದಸ್ಯತ್ವವನ್ನು ಪಡೆದುಕೊಂಡ ಮೊದಲ ಕಾಲೇಜು ಮತ್ತು ನ್ಯಾಕ್ (NAAC) ಮೂಲಕ ಮಾನ್ಯತೆಯನ್ನು ಸಹ ಪಡೆದಿದ್ದೇವೆ. ನಾವು ಕೇವಲ ಹತ್ತು ವರ್ಷಗಳಲ್ಲಿ ಮೇಲಿನ ಎಲ್ಲಾ ರುಜುವಾತುಗಳನ್ನು ಸ್ವೀಕರಿಸಿದ್ದೇವೆ ಎಂದು ಸಂತೋಷದಿಂದ ಹೇಳುತ್ತೇವೆ.

ಈ ವಿದ್ಯಾಲಯದ ಆಡಳಿತ ಮಂಡಳಿಯ ಮುಖ್ಯಸ್ಥರು ಹಾಗೂ ಫಾದರ್ ಮುಲ್ಲರ್ ಚಾರೀಟೇಬಲ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ರಿಚ್ಚರ್ಡ್ ಅಲೊಶೀಯಸ್ ಕುವೆಲ್ಲೊ, ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ. ಬಿ. ಸಂಜೀವ ರೈ ಅವರ ದೂರದೃಷ್ಟಿ, ಶಿಕ್ಷಕರ ಗುಣಮಟ್ಟದ ಸೇವೆ ಹಾಗೂ ಕಾಲೇಜು ವಿದ್ಯಾರ್ಥಿಗಳ ತಂಡ ಸ್ಫೂರ್ತಿ ಮತ್ತು ಸಾರ್ವಜನಿಕರು ತೋರಿಸಿದ ನಿರಂತರ ಪ್ರೋತ್ಸಾಹ ಹಾಗೂ ವಿಶ್ವಾಸದ ಕಾರಣಾವಾಗಿ ಇಂದು ಫಾದರ್ ಮುಲ್ಲರ್ ವಾಕ್ ಶ್ರವಣ ವಿದ್ಯಾಲಯವು ಈ ವಿಸ್ತಾರವಾದ ಯಶಸ್ಸನ್ನು ಗಳಿಸಲು ಕಾರಣವಾಗಿದೆಯೆಂದು ವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.ಅಖಿಲೇಶ್ ಪಿ.ಎಂ ಅವರು ತಿಳಿಸಿದ್ದಾರೆ. ಮುಂದಿನ ವರ್ಷದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಲು ಪ್ರಯತ್ನ ಮಾಡಲಾಗುವುದು. ಇದಕ್ಕೆ ಅವಶ್ಯಕತೆ ಇರುವ ಎಲ್ಲಾ ಸೌಲಭ್ಯಗಳೂ ಲಭ್ಯವಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು