Categories: ಕರಾವಳಿ

ಪುಚ್ಚಮೊಗರಿನಲ್ಲಿ ಚಿರತೆ ಹಾವಳಿ: ಜನಪ್ರತಿನಿಧಿ, ಅಧಿಕಾರಿಗಳ ಪರಿಶೀಲನೆ

ಮೂಡುಬಿದಿರೆ: ಹೊಸಬೆಟ್ಟು ಗಾ.ಪಂ ವ್ಯಾಪ್ತಿಯ ಪುಚ್ಚಮೊಗರು ಶಾಂತಿರಾಜ್ ಕಾಲನಿ ಬಳಿಯಲ್ಲಿ ಮಂಗಳವಾರ ಚಿರತೆಯೊಂದು ಕಾಣಿಸಿಕೊಂಡಿದ್ದು, ಪರಿಸರದ ಜನರು ಭಯಭೀತರಾಗಿರುವುದರಿಂದ ಶಾಸಕ ಕೆ.ಅಭಯಚಂದ್ರ ಜೈನ್ ಅವರು ಬುಧವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಜೈನ್ ಅವರು ಕಳೆದ 2 ಎರಡು ದಿನಗಳಿಂದ ಶಂತಿರಾಜ ಕಾಲನಿ ಬಳಿ ಚಿರತೆಯು ತಿರುಗಾಡುತ್ತಿದೆ. ಅಲ್ಲದೆ ಮಂಗಳವಾರ ರಾತ್ರಿ ಚಿರತೆ ಕಾಣಿಸಿಕೊಂಡಿರುವುದರಿಂದ ಪರಿಸರದ ಜನರು ಭಯಬೀತರಾದ ಹಿನ್ನಲೆಯಲ್ಲಿ ತಕ್ಷಣ ಅರಣ್ಯಾಧಿಕಾರಿಗಳನ್ನು ಪರಿಶೀಲನೆಗೆ ಕಳುಹಿಸಲಾಗಿದ್ದು, ಅವರು ಕಾರ್ಯಪ್ರವೃತ್ತರಾಗಿ ಬೋನನ್ನು ಇಟ್ಟಿದ್ದಾರೆ. ಅಲ್ಲದೆ  ಆದಷ್ಟು ಬೇಗನೇ ಚಿರತೆಯನ್ನು ಹಿಡಿಯುವ ಭರವಸೆಯನ್ನು ನೀಡಿದ್ದಾರೆ. ಆದ್ದರಿಂದ ಯಾರೂ ಹೆದರಬೇಕಾಗಿಲ್ಲ ಎಂದು ತಿಳಿಸಿದರು.

ಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಆರ್ ಸುಬ್ರಹ್ಮಣ್ಯ ಅವರು ಮಾತನಾಡಿ ಕಾಡು ಪ್ರದೇಶಗಳಾಗಿರುವುದರಿಂದ ಪ್ರಾಣಿಗಳು ಇರುವುದು ಸಹಜ. ಚಿರತೆಯನ್ನು ಹಿಡಿಯಲು ವ್ಯವಸ್ಥೆಯನ್ನು ಮಾಡಲಾಗಿದೆ. ಶೀಘ್ರವಾಗಿ ಹಿಡಿಯಲಾಗುವುದು ಎಂದು ಹೇಳಿದರು.

ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಎಂಪಿಎಂಸಿ ಸದಸ್ಯ ಶ್ರೀನಿವಾಸ, ಉಪವಲಯಾರಣ್ಯಾಧಿಕಾರಿ ಪ್ರಕಾಶ್ ಶೆಟ್ಟಿ, ಸಿಬಂದಿಗಳಾದ ಅಯ್ಯಣ್ಣ, ನಾರಾಯಣ, ಚಂದ್ರಯ್ಯ ಮತ್ತು ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

Desk

Recent Posts

ಹೂಸ ರುಚಿ: ಅವಲಕ್ಕಿ ಹುಳಿ ಮಾಡುವುದು ಹೇಗೆ?

ಗಡಿಬಿಡಿಯ ಜೀವನದಲ್ಲಿ ಬೆಳಗ್ಗಿನ ಉಪಹಾರ ಮಾಡಿಕೊಂಡು ಆಫೀಸಿಗೆ ಹೋಗುವುದೇ ಸವಾಲ್. ಇಂತಹ  ಸಂದರ್ಭದಲ್ಲಿ ಅವಲಕ್ಕಿ ಇದ್ದರೆ ಅದರಿಂದ ಹುಳಿ ತಯಾರಿಸಿ…

9 seconds ago

ಬಾವಿಗೆ ಬಿದ್ದ ಮಗುವನ್ನು ರಕ್ಷಿಸಿದ ಯುವಕನಿಗೆ ಮೆಚ್ಚುಗೆಯ ಸುರಿಮಳೆ

ಸರಪಾಡಿಯ ಹಂಚಿಕಟ್ಟೆಯಲ್ಲಿ ಬಾವಿಗೆ ಬಿದ್ದ ಮಗುವೊಂದನ್ನು ತನ್ನ ಪ್ರಾಣದ ಹಂಗನ್ನು ತೊರೆದು ತುಂಡಾಗುವ ಸ್ಥಿತಿಯಲ್ಲಿದ್ದ ಹಳೆಯ ಹಗ್ಗವನ್ನು ಬಳಸಿ ಮೇಲಕ್ಕೆತ್ತಿದ…

10 mins ago

ಶ್ರೀರಾಮ ಸೇನೆ ರಾಜ್ಯಾಧ್ಯಕ್ಷರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲು

ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ, ಶ್ರೀರಾಮ ಸೇನೆಯ ಅಧ್ಯಕ್ಷ ಸಿದ್ದಲಿಂಗ ಶ್ರೀಗಳ ವಿರುದ್ಧ ಕಲಬುಗಿಯಲ್ಲಿ ಜಾತಿ…

14 mins ago

ಮಡಿಕೇರಿಯಲ್ಲಿ ಬುದ್ಧಿಮಾಂದ್ಯ ಹುಡುಗನ ರಕ್ಷಣೆ; ಸಂಬಂಧಪಟ್ಟವರು ಸಂಪರ್ಕಿಸುವಂತೆ ಮನವಿ

ಅನಾಥ ಬುದ್ಧಿಮಾಂದ್ಯ ಹುಡುಗನನ್ನು ರಕ್ಷಣೆ ಮಾಡಿ ಶಕ್ತಿ ಅನಾಥಾಶ್ರಮಕ್ಕೆ ಸೇರಿಸಿರುವ ಘಟನೆಯೊಂದು ಮಡಿಕೇರಿಯಲ್ಲಿ ನಡೆದಿದೆ.

19 mins ago

ಗ್ರಾಹಕರಂತೆ ಬಂದು ಬಂಗಾರದ ಬಳೆ ಎಗರಿಸಿದ ಖತರ್ನಾಕ್ ಕಳ್ಳಿಯರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ಗ್ರಾಹಕರ ಸೋಗಿನಲ್ಲಿ ಬಂದು ಬಂಗಾರದ ಖಡ್ಗ ಕದ್ದು ಪರಾರಿಯಾದ ಘಟನೆ ಕಲಬುರಗಿ ನಗರದ ಅನ್ನಪೂರ್ಣ ಕ್ರಾಸ್‌ನಲ್ಲಿರುವ ತನಿಷ್ಕ ಜ್ಯುವೆಲ್ಲರಿ ಶಾಪ್‌ನಲ್ಲಿ…

22 mins ago

ವಿಧಾನಸೌಧ ಪ್ರವೇಶಕ್ಕೆ ಇನ್ನು ಮುಂದೆ ಕ್ಯೂಆರ್ ಕೋಡ್ ಪಾಸ್‌: ಪರಮೇಶ್ವರ್‌

ಇನ್ನು ಮುಂದೆ ವಿಧಾನಸೌಧ ಪ್ರವೇಶಕ್ಕೆ ಬೇಕಾಬಿಟ್ಟಿ ಪಾಸ್‌ಗಳನ್ನು ವಿತರಿಸುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ.

40 mins ago