ಮಂಗಳೂರು: ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಮಂಗಳೂರಿನ ಚಿಣ್ಣರಿಗಾಗಿ ವಿಶಿಷ್ಟ ಸ್ಪರ್ಧೆ “ನನ್ನ ಗೆಳೆಯ ಗಣೇಶ” ಎಂಬ ಶೀರ್ಷಿಕೆಯಡಿ ಗಣಪತಿ ಮೂರ್ತಿ ಮಾಡುವ ಸ್ಪರ್ಧೆಯನ್ನು ‘ಹ್ಯಾಪಿ ಹಾರ್ಟ್ಸ್’ ತಂಡವು ಫೋರಮ್ ಫಿಝಾ ಮಾಲ್ ಸಹಯೋಗದಲ್ಲಿ ಸೆ.11ರಂದು(ನಾಳೆ) ಏರ್ಪಡಿಸಿದೆ.
ಸ್ಪರ್ಧೆಯು ಮಂಗಳೂರಿನ ಫೋರಮ್ ಫಿಝಾ ಮಾಲ್ ನಲ್ಲಿ ನಾಳೆ ಸರಿಯಾಗಿ ಸಂಜೆ 4ರಿಂದ 6 ಗಂಟೆಯವರೆಗೆ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನವನ್ನು ತಂಡವು ನೀಡಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ನಿಯಮಗಳು ಈ ಕೆಳಗಿನಂತಿವೆ:
*ನಿಮ್ಮ ಮಕ್ಕಳು 15 ವರ್ಷಕ್ಕಿಂತ ಕೆಳಗಿನವರಾಗಿದ್ದಲ್ಲಿ ಒಬ್ಬರೇ ಅಥವಾ ಇಬ್ಬರ ತಂಡವಾಗಿಯೂ ಭಾಗವಹಿಸಬಹುದು.
*5 ವರ್ಷದ ಕೆಳಗಿನ ಮಕ್ಕಳು ತನ್ನ ತಂದೆ ಅಥವಾ ತಾಯಿಯೊಂದಿಗೆ ತಂಡವಾಗಿ ಭಾಗವಹಿಸಬಹುದು.
*ಸಾರ್ವಜನಿಕ ವಿಭಾಗದಲ್ಲಿ 15ವರ್ಷಕ್ಕೆ ಮೇಲ್ಪಟ್ಟು 5 ಜನರ ತಂಡದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು.
*ಗಣೇಶನ ಮೂರ್ತಿ ಮಾಡಲು ನಿಮ್ಮ ಆಯ್ಕೆಯ ವಸ್ತುಗಳನ್ನು ತರಬಹುದು. ಉದಾಹರಣೆಗೆ : ಮಣ್ಣು, ಮರಳು, ಚಿಪ್ಪುಗಳು, ಕಾಗದ, ರಟ್ಟು, ಹತ್ತಿ, ಹಣ್ಣು-ತರಕಾರಿ, ಇತ್ಯಾದಿ.
ಮಕ್ಕಳ ವಯಸ್ಸು, ಪ್ರತಿಭೆ, ಸ್ವಚ್ಛತೆ, ಕಲಾಕೃತಿಯ ಆಧಾರದ ಮೇಲೆ ತೀರ್ಪು ನೀಡಲಾಗುತ್ತದೆ. ಮೊದಲ 5 ವಿಜೇತರಿಗೆ ಬಹುಮಾನ ನೀಡಲಾಗುತ್ತದೆ. ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9611299644, 9449046936