Categories: ಕರಾವಳಿ

ನಕಲಿ ನೋಟು ಪ್ರಕರಣ: ಆರೋಪಿಯ ಬಂಧನ

ಕಾಸರಗೋಡು: ನಕಲಿ ನೋಟು ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಅಪರಾಧ ಪತ್ತೆದಳದ ಸಿಬಂದಿಗಳು ಬಂಧಿಸಿದ್ದಾರೆ.

ಬಂಧಿತನನ್ನು  ಸುರತ್ಕಲ್ ಕೃಷ್ಣಾಪುರದ ಎಂ.ಶರೀಫ್ (48) ಎಂದು ಗುರುತಿಸಲಾಗಿದೆ. ಹಲವು ವರ್ಷಗಳಿಂದ ಈತ ತಲೆಮರೆಸಿಕೊಂಡಿದ್ದನು. 2002ರಲ್ಲಿ  ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ನೋಟು  ವಶಪಡಿಸಿಕೊಂಡ ಆರೋಪದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದಾನೆ. ಬಂಧಿತನಾಗಿದ್ದ ಈತ 2008ರ ಬಳಿಕ ತಲೆಮರೆಸಿಕೊಂಡಿದ್ದನು. ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದನು.

ಈತನಿಗಾಗಿ ಪೊಲೀಸರು ಕಳೆದ ಹಲವು ವರ್ಷಗಳಿಂದ ಶೋಧ ನಡೆಸುತ್ತಾ ಬರುತ್ತಿದ್ದರು. ಆದರೆ ಈತ ತಲೆ ಮರೆಸಿಕೊಂಡಿದ್ದನು.  ಶರೀಫ್, ಆರೋನ್, ಮುನೀರ್ ಎಂಬ ಹೆಸರಿನಿಂದ ಕರ್ನಾಟಕದ ಹಲವೆಡೆ ಈತ ತಲೆಮರೆಸಿಕೊಂಡಿದ್ದನು. ಮೊಬೈಲ್ ಸಿಮ್ ಗಳನ್ನು ಆಗಾಗ ಬದಲಾಯಿಸುತ್ತಿದ್ದನು. ಈ ನಡುವೆ ಲಭಿಸಿದ ಖಚಿತ ಮಾಹಿತಿಯಂತೆ ವಾಮಂಜೂರು ನಿಂದ ಅಪರಾಧ ಪತ್ತೆ ದಳದ ಸಿಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾದರು. ಪೊಲೀಸರನ್ನು ಕಂಡು ಪರಾರಿಯಾಗಲೆತ್ನಿಸಿದ ಈತನನ್ನು ಬೆನ್ನಟ್ಟಿ ಬಂಧಿಸಲಾಯಿತು.

Desk

Recent Posts

ಕೊಪ್ಪಳದಲ್ಲಿ ಒಂದೇ ದಿನ ತಂದೆ ಮಗ ಮೃತ್ಯು

ತಂದೆ ಮಗ ಒಂದೇ ದಿನ ಸಾವನ್ನಪ್ಪಿದ ಘಟನೆ ಕೊಪ್ಪಳದ ಬಂಡಿಹರ್ಲಾಪುರಾದಲ್ಲಿ ನಡೆದಿದೆ.

15 mins ago

ಬರ ಪರಿಹಾರ : ಸಿದ್ದರಾಮಯ್ಯಗೆ ಎರಡು ನಾಲಿಗೆ ಇದೆಯೋ ಹತ್ತು ನಾಲಿಗೆ ಇದೆಯೋ? ಎಂದ ಆರ್‌ ಅಶೋಕ್‌

ಬರ ಪರಿಹಾರ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ಸಮರ ನಡೆಯುತ್ತಿದೆ. ಸಿದ್ದರಾಮಯ್ಯಗೆ ಎರಡು ನಾಲಿಗೆ ಇದೆಯೋ ಹತ್ತು ನಾಲಿಗೆ…

35 mins ago

ನೆರೆಮನೆಯ ಕಾರಿನ ಗ್ಲಾಸ್‌ ಪುಡಿ ಮಾಡಿದ ಶಿಕ್ಷಕಿ: ದೂರು ದಾಖಲು

ಶಿಕ್ಷಕಿಯೊಬ್ಬಳು ನೆರೆಮನೆಯವರ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಕಿಟಕಿ ಗ್ಲಾಸ್‌ ಒಡೆದಿರುವ ಘಟನೆ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ.

58 mins ago

ಹಾಸನ ಅಶ್ಲೀಲ ವಿಡಿಯೋ ಪ್ರಕರಣ: ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದ ಹೆಚ್‌.ಡಿ ಕುಮಾರಸ್ವಾಮಿ

ಹಾಸನದಲ್ಲಿ ಹರಿದಾಡುತ್ತಿರುವ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ಅತಿ ದೊಡ್ಡ ಸಂಚಲನ ಸೃಷ್ಟಿಸಿದ್ದು, ಉಪ್ಪು ತಿಂದವನು ನೀರು…

1 hour ago

ಬೈಕ್​ಗೆ ಕಾರು ಡಿಕ್ಕಿ ಹೊಡೆದು ಸವಾರ ಸಾವು

ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಬೈಕ್‌ ಸವಾರ ಸಾವನ್ನಪ್ಪಿದ ಘಟನೆ ರಾಜಾಜಿನಗರ 6th ಬ್ಲಾಕ್‌ ನಲ್ಲಿ…

2 hours ago

ಕಾಂಗ್ರೆಸ್‍ ನ ಗ್ಯಾರಂಟಿ ಜನರನ್ನು ರಕ್ಷಿಸುತ್ತಿದೆ: ಡಿಕೆಶಿ

ರಾಜ್ಯದಲ್ಲಿ ಜನ ಕಾಂಗ್ರೆಸ್‍ನ ಗ್ಯಾರಂಟಿ ಯೋಜನೆಯಿಂದ ಬದುಕುತ್ತಿದ್ದಾರೆ. ನಮ್ಮ ಗ್ಯಾರಂಟಿ ಜನರನ್ನು ರಕ್ಷಿಸುತ್ತಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

2 hours ago