Categories: ಕರಾವಳಿ

ದಾರಿ ದೀಪಗಳಿಗೆ ಹಾನಿ: ಯುವಕರ ಬಂಧನ

ಪುತ್ತೂರು: ಬಪ್ಪಳಿಗೆಯಲ್ಲಿ ನಗರಸಭೆಯ ದಾರಿ ದೀಪಗಳಿಗೆ ಹಾನಿಯುಂಟು ಮಾಡುತ್ತಿದ್ದ ಯುವಕರನ್ನು ಸಿ.ಸಿ.ಕ್ಯಾಮರಾದ ಫೂಟೇಜ್ ಆಧರಿಸಿ ಪುತ್ತೂರು ಪೊಲೀಸರು ಬಂಧಿಸಿದ್ದಾರೆ.

ಬಪ್ಪಳಿಗೆಯಲ್ಲಿ ದಾರಿ ದೀಪಗಳು ಹಾನಿಗೀಡಾಗಿರುವ ವಿಚಾರ ಜ.21ರಂದು ಬೆಳಿಕಿಗೆ ಬಂದ ತಕ್ಷಣ ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪುತ್ತೂರು ಪೊಲೀಸರು ಬಪ್ಪಳಿಗೆ ಮಸೀದಿ ಬಳಿಯ ಸಿ.ಸಿ.ಕ್ಯಾಮರಾವನ್ನು ಪರಿಶೀಲಿಸಿದಾಗ ಜ.20ರಂದು ರಾತ್ರಿ ಯುವಕರಿಬ್ಬರು ದಾರಿ ದೀಪಗಳಿಗೆ ಕಲ್ಲು ಬೀಸಾಕಿ ಹಾನಿ ಮಾಡುತ್ತಿರುವ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಪತ್ತೆಯಾಗಿದ್ದು ಅದರ ಆಧಾರದಲ್ಲಿ ದಾರಿ ದೀಪಗಳಿಗೆ ಹಾನಿ ಮಾಡಿದ ಯುವಕರಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹಾನಿಗೀಡಾದ ಸೊತ್ತಿನ ಮೌಲ್ಯ ವಸೂಲಿ:
ಯುವಕರಿಬ್ಬರು ಸುಮಾರು 12 ಟ್ಯೂಬ್‍ಲೈಟ್ ಮತ್ತು 2 ಸಿಎಫ್‍ಎಲ್ ಬಲ್ಪ್‍ಗಳನ್ನು ಹಾನಿ ಮಾಡಿದ್ದರು. ಅದರ ಒಟ್ಟು ಮೊತ್ತ ರೂ. 17ಸಾವಿರವನ್ನು ಅವರ ಪೋಷಕರು ನಗರಸಭೆಗೆ ಪಾವತಿಸಿದ್ದಾರೆಂದು ತಿಳಿದುಬಂದಿದೆ.

Desk

Recent Posts

ನೂಕುನುಗ್ಗಲಿನಲ್ಲೂ ಪಾದಯಾತ್ರೆ ಹೊರಟ ಭಕ್ತರು : ವಿಡಿಯೋ ವೈರಲ್‌

ಯಮುನೋತ್ರಿ, ಗಂಗೋತ್ರಿ, ಕೇದರ್‌ನಾಥ್‌ ಮತ್ತು ಬದರಿನಾಥ್‌ ಪವಿತ್ರ ಚಾರ್‌ ಧಾಮ್‌ ಯಾತ್ರೆಯ ಹಿನ್ನಲೆಯಲ್ಲಿ ಅಪಾರ ಪ್ರಮಾಣದ ಭಕ್ತರು ಜಮಾಯಿಸಿದ ಪರಿಣಾಮ…

4 mins ago

ಕೆಂಪು ಲಿಪ್​ ಸ್ಟಿಕ್ ಬಳಕೆ ಮೇಲೆ ನಿಷೇಧ ವಿಧಿಸಿದ ಉತ್ತರ ಕೊರಿಯಾ: ಹಚ್ಚಿದರೆ ಕಠಿಣ ಶಿಕ್ಷೆ!

ಮಹಿಳೆಯರು ತುಟಿಗೆ ಹಚ್ಚುವ ಕೆಂಪು ಲಿಪ್​  ಸ್ಟಿಕ್ ಬಳಕೆಯ ಮೇಲೆ ಉತ್ತರ ಕೊರಿಯಾದಲ್ಲಿ ಕಟ್ಟುನಿಟ್ಟಾದ ನಿಷೇಧ ವಿಧಿಸಿದೆ.

4 mins ago

ಬಸವೇಶ್ವರ ಜಾತ್ರೆ: ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ಜಿಲ್ಲೆಯ ಸೊನ್ನ ಗ್ರಾಮದ ಶಿವುಕುಮಾರ ಮಾಸ್ತಾರ ದಂಪತಿಗಳ ಸಹಾಯಾರ್ಥದೊಂದಿಗೆ ಗ್ರಾಮದ ಸುಮಾರು 200 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ವಿಶ್ವರಾಧ್ಯ…

23 mins ago

ಬಿಜೆಪಿ ಮತ್ತೆ ಗೆದ್ದರೆ ವಿಪಕ್ಷಗಳ ನಾಯಕರು ಜೈಲು ಪಾಲಾಗುತ್ತಾರೆ: ಕೇಜ್ರಿವಾಲ್‌

ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯು ಬಿಜೆಪಿ ಗೆದ್ದರೆ, ಮಮತಾ ಬ್ಯಾನರ್ಜಿ, ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಆರ್‌ಜೆಡಿ ನಾಯಕ ತೇಜಸ್ವಿ…

27 mins ago

ದೆಹಲಿಯಲ್ಲಿ ಬಿರುಗಾಳಿ: ಇಬ್ಬರು ಮೃತ್ಯು, 23 ಮಂದಿಗೆ ಗಾಯ

ಬಿರುಗಾಳಿಗೆ ಇಬ್ಬರು ಸಾವನ್ನಪ್ಪಿದ್ದು, 23 ಮಂದಿ ಗಾಯಗೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

50 mins ago

ಹೆಚ್ಚಿನ ಫೀಸ್ ತೆಗೆದುಕೊಂಡರೆ ಖಾಸಗಿ ಶಾಲೆಗಳ ವಿರುದ್ಧ ಕ್ರಮ : ಬಂಗಾರಪ್ಪ

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಪೋಷಕರು ತಮ್ಮ ಮಕ್ಕಳಿಗೆ ಮುಂದಿನ ವಿದ್ಯಾಭ್ಯಸದ ಬಗ್ಗೆ ಈಗಾಗಲೇ ಯೋಚಿಸುತ್ತಿದ್ದಾರೆ

58 mins ago