ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಒಟ್ಟು 246 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಆರು ಮಂದಿ ಕೊರೋನಾಗೆ ಬಲಿಯಾಗಿರುವರು.
ಮಂಗಳೂರ ತಾಲೂಕಿನಲ್ಲಿ 150, ಬಂಟ್ವಾಳ 47, ಪುತ್ತೂರು 16, ಸುಳ್ಯ7, ಬೆಳ್ತಂಗಡಿ 15 ಮತ್ತು ಇತರ ಜಿಲ್ಲೆಗಳ 11 ಕೊರೋನಾ ಸೋಂಕಿತರು ಪತ್ತೆಯಾಗಿರುವರು ಎಂದು ಆರೋಗ್ಯ ಇಲಾಖೆಯು ಮಾಹಿತಿ ನೀಡಿದೆ.
ಗುರುವಾರ ಮಂಗಳೂರಿನ ಮೂರು, ಇತರ ಜಿಲ್ಲೆಗಳ ಎರಡು ಮತ್ತು ಬಂಟ್ವಾಳದ ಒಬ್ಬರು ಕೊರೋನಾಗೆ ಬಲಿಯಾಗಿರುವರು.