ಬೆಂಗಳೂರು:  ನಟ ಸೂರ್ಯ ಅಭಿಯನದ ಬಹುನಿರೀಕ್ಷಿತ ಚಿತ್ರಗಳಾದ ಒಂದಾದ `ಕಂಗುವ’ ಚಿತ್ರದ ಟ್ರೈಲರ್‌ ಇದೀಗ ಬಿಡುಗಡೆಗೊಂಡಿದೆ. ಸೂರ್ಯ  ಈ ಚಿತ್ರ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಂಗುವ ಚಿತ್ರವನ್ನು ಶಿವಾ ನಿರ್ದೇಶಿಸಿದ್ದಾರೆ ಮತ್ತು ಬಾಬಿ ಡಿಯೋಲ್, ದಿಶಾ ಪಟಾನಿ, ನಟರಾಜನ್ ಸುಬ್ರಮಣ್ಯಂ, ಜಗಪತಿ ಬಾಬು, ಯೋಗಿ ಬಾಬು, ರೆಡಿನ್ ಕಿಂಗ್ಸ್ಲಿ, ಕೋವೈ ಸರಳಾ, ಆನಂದರಾಜ್, ರವಿ ರಾಘವೇಂದ್ರ ಮತ್ತು ಇನ್ನೂ ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಂಗುವ ಅಕ್ಟೋಬರ್ 10ರಂದು ಥಿಯೇಟರ್‌ಗಳಿಗೆ ಬರಲಿದೆ.

ಇನ್ನು ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಟ್ರೇಲರ್ ಅನ್ನು ಹಂಚಿಕೊಂಡ ಸೂರ್ಯ, ” ನಾವು ತಂಡವಾಗಿ ಒಟ್ಟಾಗಿ ಮಾಡಿದ ಈ ಸಿನಿಮಾ ಬಗ್ಗೆ ನಂಬಲಾಗದಷ್ಟು ಹೆಮ್ಮೆ ಇದೆ, ಧನ್ಯವಾದಗಳು, ಜನ್ಮದಿನದ ಶುಭಾಶಯಗಳು ಪ್ರಿಯ ಶಿವ!! ಕಂಗುವಟ್ರೇಲರ್ ನಿಮಗಾಗಿ! (sic ).” ಎಂದು ಬರೆದುಕೊಂಡಿದ್ದಾರೆ.

ಬುಡಕಟ್ಟು ಜನರ ದೃಶ್ಯದೊಂದಿಗೆ ಟ್ರೈಲರ್‌ ಶುರುವಾಗುತ್ತದೆ. ಸೂರ್ಯನ ಪಾತ್ರವನ್ನು ಉಗ್ರ ಡೇರ್‌ಡೆವಿಲ್ ಎಂದು ಚಿತ್ರಿಸಲಾಗಿದೆ. ಕಂಗುವಾದಲ್ಲಿ ಬಾಲಿವುಡ್ ನಟಿ ದಿಶಾ ಪಟಾನಿ ನಟಿಸಿದ್ದಾರೆ.