Categories: ಯಾದಗಿರಿ

ವೈದ್ಯರ ನಿರ್ಲಕ್ಷ್ಯ: ನರಳಿ ನರಳಿ ಪ್ರಾಣ ಬಿಟ್ಟ ರೋಗಿ

ಯಾದಗಿರಿ:  ವೈದ್ಯರ ನಿರ್ಲಕ್ಷ್ಯದ  ಕಾರಣ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ವಾಂತಿ ಮತ್ತು ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಯಾದಗಿರಿ ಜಿಲ್ಲೆಯ ಶಹಾಪುರ‌ ತಾಲೂಕಿನ ವನದುರ್ಗ ಗ್ರಾಮದ ಭೀಮರಾಯ (60) ಎಂಬುವವರನ್ನು ಕುಟುಂಬಸ್ಥರು ಶಹಾಪುರ‌ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು.

ವೈದ್ಯರು ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಗೆ ಯಾದಗಿರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ಸೂಚನೆ ನೀಡಿದ್ದಾರೆ. ಅದರಂತೆ ರೋಗಿ ಭೀಮರಾಯ ಅವರ ಪುತ್ರ ತಕ್ಷಣವೇ ಯಾದಗಿರಿ ಜಿಲ್ಲಾಸ್ಪತ್ರೆಗೆ ತಂದೆಯನ್ನು ಕರೆದುಕೊಂಡು ಬಂದು ಸೇರಿಸಿದ್ದಾರೆ.

ರೋಗಿ ಆಸ್ಪತ್ರೆಯಲ್ಲಿ ದಾಖಲಾಗಿ ಎರಡು ಗಂಟೆ ಕಳೆದರೂ ವೈದ್ಯರು ಚಿಕಿತ್ಸೆ ನೀಡಿಲ್ಲ. ಕಾಲಿಗೆ ಬಿದ್ದು ಅಂಗಲಾಚಿದರೂ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ. ಕೊನೆಗೆ ರೋಗಿ ನರಳಿ ನರಳಿ ಆಸ್ಪತ್ರೆಯಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

ಚಿಕಿತ್ಸೆ ನೀಡದೆ ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆಂದು ಭೀಮರಾಯ ಅವರ ಪುತ್ರ ಆರೋಪಿಸಿದ್ದಾರೆ. ಯಾದಗಿರಿ  ಜಿಲ್ಲಾಸ್ಪತ್ರೆಯ ಮುಂದೆ ಶವವಿಟ್ಟು ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಯಾದಗಿರಿ ಜಿಲ್ಲಾಸ್ಪತ್ರೆ ವೈದ್ಯರ ನಡೆ ವಿರುದ್ಧ ಸಾರ್ವಜನಿಕರು ಕೂಡ ಆಕ್ರೋಶ ಹೊರ ಹಾಕಿದ್ದು ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Ashika S

Recent Posts

ಮನೆಗೆ ನುಗ್ಗಿ ಅಂಜಲಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ.…

32 mins ago

ಚಿತ್ರದುರ್ಗ: ಮನೆಯೊಂದರಲ್ಲಿ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

ನಗರದ ಜೈಲು ರಸ್ತೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳಿಗೆ ಸಂಬಂಧಿಸಿದ ಎಫ್‌ಎಸ್‌ಎಲ್‌ ಅಂತಿಮ ವರದಿ ಪೊಲೀಸರ ಕೈ ಸೇರಿದ್ದು, ಸಾವಿಗೆ…

39 mins ago

ಬಿರುಗಾಳಿ ಸಹಿತ ಮಳೆಗೆ ಕುಸಿದ ಮಹಾದ್ವಾರ

ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಬಸವ ಮಹಾದ್ವಾರ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ…

49 mins ago

ಮತ್ತೆ ಭರ್ಜರಿ ಏರಿಕೆ ಕಂಡ ‌ಚಿನ್ನದ ಬೆಲೆ !

ಜಾಗತಿಕವಾಗಿ ಚಿನ್ನಕ್ಕೆ ಈಗ ಸಖತ್ ಬೇಡಿಕೆ ಸೃಷ್ಟಿಯಾಗಿರುವುದು ಈ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿನಿಂದ ಚಿನ್ನದ ಬೆಲೆ…

1 hour ago

ಮಳೆಯಿಂದಾಗಿ ಪಂದ್ಯ ರದ್ದು; ಪ್ಲೇಆಫ್​ಗೇರಿದ್ದು ಯಾರು ?

ಐಪಿಎಲ್ 2024ರ 66ನೇ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ತಂಡ ಗುಜರಾತ್ ತಂಡವನ್ನು ಎದುರಿಸಬೇಕಿತ್ತು. ಆದರೆ, ಟಾಸ್‌ಗೂ ಮುನ್ನವೇ…

1 hour ago

ಗುಡ್‌ ನ್ಯೂಸ್:‌ ಶುಗರ್‌, ಹೃದ್ರೋಗ ಸೇರಿ 41 ಔಷಧಿಗಳ ಬೆಲೆ ಕಡಿತ

ಕೇಂದ್ರ ಸರ್ಕಾರವು 41 ಅಗತ್ಯ ಔಷಧಗಳು ಹಾಗೂ ಹೃದಯ ರಕ್ತನಾಳದ ಕಾಯಿಲೆ, ಸಕ್ಕರೆ ಕಾಯಿಲೆ ಇರುವವರು ಬಳಸುವ 6 ಫಾರ್ಮುಲೇಷನ್‌ಗಳ…

2 hours ago