ಯಾದಗಿರಿ : ಮನೆಯಲ್ಲಿ ಯಾರು ಇಲ್ಲದನ್ನು ಅರಿತು ಬಾಲಕಿಯನ್ನು ಗುಡಿಸಲಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಅತ್ಯಾಚಾರಕ್ಕೆ ಯತ್ನಿಸುತ್ತಿರುವ ವೇಳೆ ಬಾಲಕಿ ಕಿರುಚಿಕೊಂಡಿದ್ದಾಳೆ. ಕೂಡಲೇ ಸ್ಥಳೀಯರು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಜನವರಿ 27ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ವೃದ್ಧನನ್ನು ಬಂಧಿಸಿದ್ದಾರೆ.
ವಿಷ ಯಾರಿಗಾದ್ರೂ ತಿಳಿಸಿದ್ರೆ ನಿನ್ನ ತಮ್ಮನ ಕತ್ತು ಹಿಸುಕಿ ಕೊಲೆ ಮಾಡೋದಾಗಿ ವೃದ್ಧ ಬೆದರಿಕೆ ಹಾಕಿದ್ದನು. ನಂತರ ಜಾನುವಾರು ಕಟ್ಟುವ ಗುಡಿಸಲಿಗೆ 7 ವರ್ಷದ ಬಾಲಕಿಯನ್ನು ಕರೆದುಕೊಂಡು ಹೋಗಿದ್ದನು.
ಬಾಲಕಿಯ ತಾಯಿ ಇಬ್ಬರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹತ್ತಿ ಬಿಡಿಸಲು ತೆರಳಿದ್ರು. ಈ ವೇಳೆ 68 ವರ್ಷದ ವೃದ್ಧ ಹೀನಕೃತ್ಯಕ್ಕೆ ಮುಂದಾಗಿದ್ದನು. ವೃದ್ಧನ ವಿರುದ್ದ ಯಾದಗಿರಿ ಮಹಿಳಾ ಪೊಲೀಸ ಠಾಣೆಯಲ್ಲಿ POCSO ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.