News Karnataka Kannada
Wednesday, May 01 2024
ಕಲಬುರಗಿ

ರಾಮನವಮಿ ಮೆರವಣಿಗೆಯಲ್ಲಿ ಪಿಎಸ್​ಐ ಕಿಂಗ್ ಪಿನ್ ದಿವ್ಯ ಜೊತೆ ಬಿಜೆಪಿಯ ಉಮೇಶ ಜಾಧವ್

ನಿನ್ನೆ ಪಿಎಸ್​ಐ ಕಿಂಗ್ ಪಿನ್​​ ಆರ್​ಡಿ ಪಾಟೀಲ್ ನಿವಾಸಕ್ಕೆ ಕಲಬುರಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ (Umesh Jadhav) ಭೇಟಿ ನೀಡಿ ಊಟೋಪಚಾರ ಮಾಡಿದ್ದರು
Photo Credit : NewsKarnataka

ಕಲಬುರಗಿ: ನಿನ್ನೆ ಪಿಎಸ್​ಐ ಕಿಂಗ್ ಪಿನ್​​ ಆರ್​ಡಿ ಪಾಟೀಲ್ ನಿವಾಸಕ್ಕೆ ಕಲಬುರಗಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್  ಭೇಟಿ ನೀಡಿ ಊಟೋಪಚಾರ ಮಾಡಿದ್ದರು. ಆದರೆ ಇಂದು ಮತ್ತೋರ್ವ ಆರೋಪಿ ಜೊತೆ ಉಮೇಶ ಜಾದವ್ ಅವರ ಫೋಟೋ ವೈರಲ್ ಆಗಿದೆ. ಪಿಎಸ್​ಐ ಕೇಸ್​​ನಲ್ಲಿ ಅರೆಸ್ಟ್ ಆಗಿದ್ದ ದಿವ್ಯಾ ಹಾಗರಗಿ ಜೊತೆ ಉಮೇಶ್ ಜಾಧವ್ ಫೋಟೋಗೆ ಪೋಸ್​ ನೀಡಿದ್ದಾರೆ.

ರಾಮನವಮಿ ಮೆರವಣಿಗೆ ವೇಳೆ ತೆಗೆಸಿಕೊಂಡ ಫೋಟೋವನ್ನು ಜಾದವ್​ ಫೇಸ್ ಬುಕ್​ನಲ್ಲಿ ಹಾಕಿಕೊಂಡಿದ್ದಾರೆ.ನಿನ್ನೆ ಕಿಂಗ್ ಪಿನ್​​ ಆರ್.ಡಿ.ಪಾಟೀಲ್ ಬೆಂಬಲಯಾಚಿಸಿದ್ದ ಬಿಜೆಪಿ ಸಂಸದರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನೆಲೆ ಇದೀಗ ಮತ್ತೋರ್ವರ ಜೊತೆ ಫೋಟೋ ವೈರಲ್​ ಆಗಿದೆ. ಸದ್ಯ ದಿವ್ಯಾ ಹಾಗರಗಿ ಬೇಲ್ ಮೇಲೆ‌ ಹೊರಗಡೆ ಇದ್ದಾರೆ. ಲಕ್ಷಾಂತರ ಯುವಕರ ಭವಿಷ್ಯಕ್ಕೆ ಕೊಳ್ಳಿಯಿಟ್ಟ ಆರೋಪಿಗಳ ಜೊತೆ ಉಮೇಶ ಜಾದವ್ ಪೋಸ್ ಕೊಡುತ್ತಿರುವುದು ಆಕ್ರೋಶಕ್ಕೆ ಗುರಿಯಾಗಿದೆ.ನಾಮಪತ್ರ ಸಲ್ಲಿಕೆಗೂ ಮುನ್ನ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್​ರಿಂದ ಟೆಂಪಲ್ ರನ್ ಮಾಡಲಾಗುತ್ತಿದೆ. ಕಾಳಗಿ ತಾಲ್ಲೂಕಿನ ರಟಕಲ್ ರೇವಣಸಿದ್ದೆಶ್ವರ, ಬಳಿಕ ಕಲಬುರಗಿ ನಗರದ ಶರಣಬಸವೇಶ್ವರರ ದೇವಸ್ಥಾನ ದಲ್ಲಿ‌ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು