News Karnataka Kannada
Saturday, May 04 2024
ರಾಯಚೂರು

ಐತಿಹಾಸಿಕವಾಗಲಿದೆ ಲಿಂಗಸಗೂರಿನ ದಸರಾ ಮಹೋತ್ಸವ

Dasara celebrations in Lingasagur to be historic
Photo Credit : News Kannada

ಬಾಳೆಹೊನ್ನೂರು: ರಾಯಚೂರು ಜಿಲ್ಲೆ ಲಿಂಗಸಗೂರಿನಲ್ಲಿ ಅ.೧೫ರಿಂದ ೨೪ರವರೆಗೆ ನಡೆಯುವ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಮಹೋತ್ಸವ ಐತಿಹಾಸಿಕವಾಗಿರಲಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಲಿಂಗಸಗೂರಿನಲ್ಲಿ ಅ.೧೫ರಿಂದ ನಡೆಯಲಿರುವ ೩೨ನೇ ವರ್ಷದ ಶರನ್ನವರಾತ್ರಿದಸರಾ ಮಹೋತ್ಸವಕ್ಕೆ ತೆರಳುವ ಮುನ್ನ ರಂಭಾಪುರಿ ಪೀಠದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ ಲಿಂಗಸಗೂರಿನಲ್ಲಿ ಆಯೋಜಿಸಲಾಗಿದೆ. ಹಲವು ವರ್ಷಗಳಿಂದ ಅಲ್ಲಿ ದಸರಾ ನಡೆಸಬೇಕು ಎಂಬ ಆಶಯವಿತ್ತು. ಇದೀಗ ಮಹೋತ್ಸವ ನಡೆಸುವ ಶುಭ ಸಮಯ ಒದಗಿ ಬಂದಿದೆ ಎಂದರು.

ಧರ್ಮ ಸಮ್ಮೇಳನಕ್ಕೆ ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್, ದೇವರಭೂಪುರ ಬೃಹನ್ಮಠದ ಗಜದಂಡ ಶಿವಾಚಾರ್ಯರ ನೇತೃತ್ವದಲ್ಲಿ ಸಿದ್ಧತೆ ಪೂರ್ಣಗೊಂಡಿವೆ. ದಸರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು, ಧರ್ಮಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಆರೋಗ್ಯ ಪೂರ್ಣ ಸಮಾಜ ನಿರ್ಮಾಣಗೊಳ್ಳಲು ಎಲ್ಲ ಧರ್ಮಗಳೂ ಶ್ರಮಿಸುತ್ತ ಬಂದಿದ್ದು, ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಧ್ಯೇಯ ಹೊಂದಿ ಸಾತ್ವಿಕ ಸಮಾಜ ಕಟ್ಟಿ ಬೆಳೆಸಲು ರಂಭಾಪುರಿ ಪೀಠ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಎಲ್ಲೆಡೆ ಶಾಂತಿ, ಸಾಮರಸ್ಯ, ಸದ್ಭಾವನೆಗಳು ಬೆಳೆಯಬೇಕಿದೆ. ಎಲ್ಲ ಧರ್ಮಗಳಲ್ಲಿ ಪರಮ ಸತ್ಯ, ಶಾಂತಿ ಅಡಗಿದ್ದು, ದೇವನೊಬ್ಬ ನಾಮ ಹಲವು ಎಂಬ ಅರ್ಥ ಅರಿತು ಬಾಳಿದಾಗ ಎಲ್ಲೆಡೆ ಶಾಂತಿ ಸಮೃದ್ಧಿ ನೆಲೆಗೊಳ್ಳಲು ಸಾಧ್ಯ ಎಂದರು.

ಧರ್ಮ, ಜಾತಿ, ಭಾಷೆ, ಪ್ರಾಂತ್ಯದ ಹೆಸರಿನಲ್ಲಿ ಸಂಘರ್ಷಗಳು ನಡೆಯಬಾರದು. ನಾವೆಲ್ಲ ಭಾರತ ಮಾತೆಯ ಮಕ್ಕಳು ಎಂಬ ವಿಶಾಲ ಭಾವನೆಯಿಂದ ಬಾಳಬೇಕಾಗಿದೆ. ಸ್ವ ಧರ್ಮನಿಷ್ಠೆ ಮತ್ತು ಪರಧರ್ಮದ ಸಹಿಷ್ಣುತೆ ಎಲ್ಲರ ಉಸಿರಾಗಿರಬೇಕು. ಸಚ್ಚಾರಿತ್ರ್ಯ ಮತ್ತು ಸದ್ವಿಚಾರಗಳನ್ನು ಯುವಜನಾಂಗಕ್ಕೆ ಕೊಡುವ ಅಗತ್ಯವಿದೆ ಎಂದು ನುಡಿದರು.

ಭಾರತೀಯ ಉತ್ಕೃಷ್ಟ ಸಂಸ್ಕೃತಿ, ಆದರ್ಶಗಳನ್ನು ಮನವರಿಕೆ ಮಾಡುವ ಕೊಡುವ ಅವಶ್ಯಕತೆಯಿದ್ದು, ಕಲೆ, ಸಾಹಿತ್ಯ, ಸಂಗೀತ, ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಕಾರ್ಯಕ್ರಮಗಳನ್ನು ಮಾಡಬೇಕಿದೆ. ಈ ನಿಟ್ಟಿನಲ್ಲಿ ಲಿಂಗಸಗೂರಿನಲ್ಲಿ ನಡೆಯಲಿರುವ ದಸರಾ ನಾಡಹಬ್ಬದಲ್ಲಿ ಜಾತ್ಯತೀತವಾಗಿ ಮತ್ತು ಪಕ್ಷಾತೀತವಾಗಿ ಎಲ್ಲ ಜನ ಸಮುದಾಯದ ಜನರು ಪಾಲ್ಗೊಳ್ಳುವರೆಂಬ ವಿಶ್ವಾಸ ತಮಗಿದ್ದು, ೩೧ ವರ್ಷಗಳ ದಸರಾ ಮಹೋತ್ಸವಕ್ಕಿಂತ ವಿಭಿನ್ನವಾಗಿ ಲಿಂಗಸಗೂರಿನಲ್ಲಿ ಕೂಡ ಯಶಸ್ವಿಯಾಗುವುದೆಂಬ ನಿರೀಕ್ಷೆ ಇದೆ ಎಂದರು.

ಬೆಳಗ್ಗೆ ಪೀಠದ ಎಲ್ಲ ದೈವ ಮಂದಿರದಲ್ಲಿ ಜಗದ್ಗುರುಗಳು ವಿಶೇಷ ಅಷ್ಟೋತ್ತರ, ಮಹಾ ಮಂಗಳಾರತಿ ಪೂಜೆ ನೆರವೇರಿಸಿದರು.

ಸ್ಥಳೀಯ ಭಕ್ತರು ರಂಭಾಪುರಿ ಜಗದ್ಗುರುಗಳಿಗೆ ಗೌರವಾರ್ಪಣೆ ಮಾಡಿ ಬೀಳ್ಕೊಟ್ಟರು. ತಾಲೂಕು ಕಸಾಪ ಕಾರ್ಯದರ್ಶಿ ಸತೀಶ್ ಅರಳೀಕೊಪ್ಪ, ಜಿಲ್ಲಾ ಚುಸಾಪ ಅಧ್ಯಕ್ಷ ಯಜ್ಞಪುರುಷ ಭಟ್, ಉದ್ಯಮಿ ಬಾಳಯ್ಯ ಇಂಡಿಮಠ, ಹಾಸ್ಯ ಕಲಾವಿದ ಕೃಷ್ಣ ಭಟ್ ಇತರರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು