ರಾಯಚೂರು : ಬಸ್ ಪಲ್ಟಿಯಾಗಿ 30 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರಿನ ದೇವದುರ್ಗದ ಕೊತ್ತದೊಡ್ಡಿಯಲ್ಲಿ ನಡೆದಿದೆ.
ಪುಣೆಯಿಂದ ಅರಕೇರಾ ಗ್ರಾಮಕ್ಕೆ ಬರುತ್ತಿದ್ದ ಖಾಸಗಿ ಬಸ್ ಗೆ ಬೈಕ್ ಡಿಕ್ಕಿ ಹೊಡೆಯುವುದರಲ್ಲಿತ್ತು. ಬೈಕ್ ಅಪಘಾತವಾಗುತ್ತೆ ಎಂದು ತಪ್ಪಿಸಲು ಹೋಗಿ ಬಸ್ ಪಲ್ಟಿಯಾಗಿದೆ. ಬಸ್ ಪಲ್ಟಿಯಾಗುತ್ತಿದ್ದಂತೆ ಚಾಲಕ ಹಾಗೂ ನಿರ್ವಾಹಕ ಬಸ್ ನಿಂದ ಪರಾರಿಯಾಗಿದ್ದಾರೆ.
ಅಪಘಾತದಲ್ಲಿ 30 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ದೇವದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.