News Karnataka Kannada
Monday, April 29 2024
ಕೊಪ್ಪಳ

ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಹಣ ಎಣಿಕೆ

ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನ ಹುಂಡಿ ಹಣವನ್ನು ಗಂಗಾವತಿ ತಾಲೂಕು ಆಡಳಿತದ ವತಿಯಿಂದ ಎಣಿಕೆ ಮಾಡಲಾಯಿತು. ತಹಶೀಲ್ದಾರ್ ವಿಶ್ವನಾಥ್ ಮುರಡಿ ಅವರ ನೇತೃತ್ವದಲ್ಲಿ ಹುಂಡಿ ಹಣವನ್ನು ಎಣಿಕೆ ಮಾಡಲಾಗಿದ್ದು, ಸಿಸಿ ಕ್ಯಾಮೇರಾ, ಪೊಲೀಸ್ ಬಂದೋಬಸ್ತ್ ನಲ್ಲಿ ಹಣ ಎಣಿಕೆ ಮಾಡಲಾಯಿತು.
Photo Credit : News Kannada

ಕೊಪ್ಪಳ: ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನ ಹುಂಡಿ ಹಣವನ್ನು ಗಂಗಾವತಿ ತಾಲೂಕು ಆಡಳಿತದ ವತಿಯಿಂದ ಎಣಿಕೆ ಮಾಡಲಾಯಿತು. ತಹಶೀಲ್ದಾರ್ ವಿಶ್ವನಾಥ್ ಮುರಡಿ ಅವರ ನೇತೃತ್ವದಲ್ಲಿ ಹುಂಡಿ ಹಣವನ್ನು ಎಣಿಕೆ ಮಾಡಲಾಗಿದ್ದು, ಸಿಸಿ ಕ್ಯಾಮೇರಾ, ಪೊಲೀಸ್ ಬಂದೋಬಸ್ತ್ ನಲ್ಲಿ ಹಣ ಎಣಿಕೆ ಮಾಡಲಾಯಿತು.

ಈ ಎಣಿಕೆಯ ವೇಳೆ 2023ರ ಡಿಸೆಂಬರ್‌ 14 ರಿಂದ 2024ರ ಜನವರಿ 5 ರವರೆಗೆ ಹುಂಡಿಯಲ್ಲಿ ಒಟ್ಟು 27,27,761 ರೂಪಾಯಿಗಳು ಸಂಗ್ರಹವಾಗಿವೆ. ನೇಪಾಳ ದೇಶದ ಎರಡು ವಿದೇಶಿ ನೋಟುಗಳು, 3 ವಿದೇಶಿ ನಾಣ್ಯಗಳು ದೊರೆತಿವೆ.

ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಮಹಾಂತ್ ಗೌಡ ಪಾಟೀಲ್, ಶಿರಸ್ತೇದಾರ ಮೈಬೂಬ ಅಲಿ, ಕೃಷ್ಣವೇಣಿ, ನರ್ಮದಾ ಬಾಯಿ, ಕಂದಾಯ ನಿರೀಕ್ಷರಾದ ಮಂಜುನಾಥ್ ಹಿರೇವ್ಮಠ, ಮಹೇಶ್ ದಲಾಲ್ ಹಾಗೂ ತಹ‌ಶೀಲ್ದಾರ್ ಕಚೇರಿ ಸಿಬ್ಬಂದಿ‌ಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು