News Karnataka Kannada
Sunday, April 28 2024
ಕಲಬುರಗಿ

ಯುವಕರು ಮಿಲಿಟರಿ ಸೇರಿ, 4ವರ್ಷ‌ ಸೇವೆ ಮಾಡಿದರೆ ದೇಶ ಭಕ್ತಿ ಹೆಚ್ಚುತ್ತದೆ: ವಿ. ಸೋಮಣ್ಣ

V Somanna
Photo Credit : News Kannada

ಕಲಬುರಗಿ: ಅಗ್ನಿಪಥ ಯೋಜನೆ ವಿರೋಧಿಸುವವರ ಹಿಂದೆ ಯಾರಿದ್ದಾರೆ ಅಂತಾ ನನ್ನಗೆ ಗೊತ್ತಿಲ್ಲ, ಆದರೆ ಯುವಕರು ಯೋಜನೆ ಭಾಗವಾಗಿ ಮಿಲಿಟರಿ ಸೇರಿ, ನಾಲ್ಕು ವರ್ಷ‌ ಸೇವೆ ಮಾಡಿದರೆ ದೇಶ ಭಕ್ತಿಯ ಭಾವನೆಗಳು ಹೆಚ್ಚುತ್ತದೆ. ಪ್ರಧಾನಿ ಮೋದಿ ಅವರು ಸಾಮಾನ್ಯ ಜನರಿಗೆ ಬೇಡವಾದ ಯೋಜನೆ ಜಾರಿಗೆ ತರುವುದಿಲ್ಲ ಎಂಬ ಭರವಸೆ ಇದೆ.

ಈ ಯೋಜನೆ ಬಗ್ಗೆ ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಜನರಿಗೆ ತಿಳಿಸಲಾಗುತ್ತದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಬಿಬಿಎಂಪಿ ಚುನಾವಣೆ ವಿಚಾರ ಮಾತನಾಡಿ, ಬೆಂಗಳೂರಿನ ಜನಸಂಖ್ಯೆ ಒಂದೂವರೆ ಕೋಟಿಗೂ ಅಧಿಕವಿದೆ. ಚುನಾವಣೆ ನಡೆಸಲು ಸಿಎಂ ಬೊಮ್ಮಾಯಿ‌ ಉತ್ಸುಕರಾಗಿದ್ದಾರೆ. ಕೋರ್ಟ್ ನಿಯಮಾವಳಿಗಳ ಪ್ರಕಾರ ಚುನಾವಣೆ ನಡೆಸಲಾಗುತ್ತದೆ ಎಂದರು.

ವಿಧಾನ ಪರಿಷತ್ ಚುನಾವಣೆ ಫಲಿತಾಂಶದಲ್ಲಿ ನಮ್ಮಲ್ಲಿನ ಲೋಪ ದೋಷಗಳಿಂದ ಹಿನ್ನಡೆಯಾಗಿದೆ. ಇದು ನಮ್ಮಗೆ ಎಚ್ಚರಿಕೆ ಘಂಟೆಯಾಗಿದೆ. ಮುಂದಿನ ದಿನಗಳಲ್ಲಿ ತಪ್ಪುಗಳನ್ನು ಸರಿಪಡಿಸಿ ಚುನಾವಣೆ ಎದುರಿಸಲಾಗುವುದು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು