News Karnataka Kannada
Thursday, May 09 2024
ಕಲಬುರಗಿ

ನೈಟ್‌ಲ್ಯಾಂಡಿಂಗ್‌: ರನ್‌ವೇ ಸಾಮರ್ಥ್ಯ ಪರಿಶೀಲನೆ

Night Landing: Runway Capacity Check
Photo Credit : News Kannada

ಕಲಬುರಗಿ: ಇಲ್ಲಿನ ಕಲಬುರಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನ ನಿಲುಗಡೆಗಾಗಿ (ನೈಟ್‌ ಲ್ಯಾಂಡಿಂಗ್‌) ಈಗಾಗಲೇ ಪೂರ್ಣಗೊಂಡಿರುವ ರನ್‌ವೇನ ನೈಟ್‌ಲ್ಯಾಂಡಿಂಗ್ ಸಾಮರ್ಥ್ಯದ ಪರೀಕ್ಷೆಗಾಗಿ ದೆಹಲಿಯಿಂದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಮತ್ತೊಂದು ತಂಡ ಗುರುವಾರ ಭೇಟಿ ನೀಡಿ ಪರಿಶೀಲಿಸಿತು.

ತಾಂತ್ರಿಕ ಕಾಮಗಾರಿಗಳು ಮತ್ತು ನಾವಿಗೇಷನಲ್‌ನ ಕಾರ್ಯನಿರ್ವಹಣೆಯ ಪರಿಶೀಲನೆಗೆ ಡಿಜಿಸಿಎನ ಪೈಲಟ್ ಹಾಗೂ ಫ್ಲೈಟ್‌ ಇನ್‌ಸ್ಪೆಕ್ಟೆರ್‌ ತಂಡಗಳು ಈಚೆಗೆ ಭೇಟಿ ನೀಡಿದ್ದ ಬಳಿಕ ಮತ್ತೊಂಡು ತಂಡ ಬಂದಿದೆ. ಡಿಜಿಸಿಎ ಕಾರ್ಯಾಚರಣೆಯ ನಿರ್ದೇಶಕ ಎಸ್.ದುರೈರಾಜ್ ಹಾಗೂ ಸಹಾಯಕ ನಿರ್ದೇಶಕ ರಾಜೇಶ್ ನಾಗಸ್ವರಂ ಅವರು ಭೇಟಿ ಕೊಟ್ಟರು.

‘ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೂ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ ಸುತ್ತಾಡಿ ಹಲವು ಪರೀಕ್ಷೆ, ತಪಾಸಣೆಗಳನ್ನು ಮಾಡಿದರು. ರನ್‌ವೇ, ರನ್‌ವೇನಲ್ಲಿ ಅಳವಡಿಸಲಾದ ಅತ್ಯಾಧುನಿಕ ಲೈಟಿಂಗ್ ವ್ಯವಸ್ಥೆ, ಅಗ್ನಿಶಾಮಕ ವ್ಯವಸ್ಥೆ, ವಾಯು ಸಂಚಾರದಟ್ಟಣೆ ನಿಯಂತ್ರಣಾಲಯ (ಎಟಿಸಿ) ಕೇಂದ್ರ, ವಾಯು ಸಂಚಾರ ನಿರ್ವಾಹಕದ ಸಂವಹನ, ನ್ಯಾವಿಗೇಷನ್ ಮತ್ತು ಕಣ್ಗಾವಲು ವ್ಯವಸ್ಥೆಗಳು (ಸಿಎನ್‌ಎಸ್) ಸೇರಿದಂತೆ ಹಲವು ತಾಂತ್ರಿಕ ಕೇಂದ್ರಗಳಿಗೆ ಭೇಟಿ ನೀಡಿ, ಅವುಗಳ ಕಾರ್ಯಕ್ಷಮತೆ ಹಾಗೂ ಸಾಮರ್ಥ್ಯವನ್ನು ಕೂಲಂಕಷವಾಗಿ ಪರಿಶೀಲಿಸಿದರು’ ಎಂದು ವಿಮಾನನಿಲ್ದಾಣದ ನಿರ್ದೇಶಕ ಡಾ. ಚಿಲಕಾ ಮಹೇಶ ‘ ತಿಳಿಸಿದರು.

‘ವಿಮಾನಗಳ ಸುರಕ್ಷಿತ ಕಾರ್ಯಾಚರಣೆಯಲ್ಲಿ ಸಿಎನ್‌ಎಸ್, ಎಟಿಸಿ, ರನ್‌ವೇ ಲೈಟಿಂಗ್ ಪ್ರಮುಖ ಪಾತ್ರವಹಿಸುತ್ತವೆ. ವಿಮಾನ ನಿಲ್ದಾಣವು ರಾತ್ರಿ ವೇಳೆಯಲ್ಲಿ ವಿಮಾನಗಳು ಇಳಿಯುವ ಸಾಮರ್ಥ್ಯವನ್ನು ಹೊಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಅವರು ಪರಿಶೀಲಿಸಿದ್ದಾರೆ. ಪರಿಶೀಲನಾ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುವರು’ ಎಂದು ಮಾಹಿತಿ ನೀಡಿದರು.

ಈಚೆಗೆ ದೆಹಲಿಯಿಂದ ವಿಶೇಷ ವಿಮಾನದೊಂದಿಗೆ ಬಂದ ಇಬ್ಬರು ಪೈಲಟ್‌ಗಳು ಒಂದೂವರೆ ಗಂಟೆ ವಿಮಾನ ನಿಲ್ದಾಣದ ಸುತ್ತಲೂ ಹಾರಾಟ ನಡೆಸಿದ್ದರು. ನೈಟ್‌ ಲ್ಯಾಂಡಿಂಗ್‌ ಸೇವೆಯಲ್ಲಿ ಮಹತ್ವದ ಪಾತ್ರವಹಿಸುವ ‘ಅಗತ್ಯ ನ್ಯಾವಿಗೇಷನಲ್ ಕಾರ್ಯಕ್ಷಮತೆಯ (ಆರ್‌ಎನ್‌ಪಿ)’ ಪ್ರಾಯೋಗಿಕ ಪರೀಕ್ಷೆ ಮಾಡಿದರು. 5 ಕಿ.ಮೀ. ದೂರದಿಂದಲೂ ನಿಲ್ದಾಣದ ರನ್‌ವೇ ಪೈಲಟ್‌ಗೆಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಪರಿಶೀಲಿಸಿ, ಕೈಗೊಂಡ ಕಾರ್ಯಗಳ ಬಗ್ಗೆ ಮೆಚ್ಚಿಗೆಯೂ ವ್ಯಕ್ತಪಡಿಸಿತ್ತು. ಈಗ ಮತ್ತೊಂದು ತಂಡ ಬಂದು ಪರಿಶೀಲಿಸಿ, ವರದಿ ತೆಗೆದುಕೊಂಡು ಹೋಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು