News Karnataka Kannada
Wednesday, May 01 2024
ಕಲಬುರಗಿ

ಟೊಮೆಟೊಗೆ ಅತಿ ಕನಿಷ್ಠ ಬೆಲೆ: ಕೆ.ಜಿಗೆ ₹10 ರಂತೆ ಮಾರಾಟ

Lowest price for tomatoes: Sold at Rs 10 per kg
Photo Credit : News Kannada

ಕಲಬುರಗಿ: ಜುಲೈನಲ್ಲಿ ಕೆ.ಜಿಗೆ ₹200 ತಲುಪಿ ಗ್ರಾಹಕರ ನಿದ್ದೆಗೆಡಿಸಿದ್ದ ಟೊಮೆಟೊ ದರ ಇದೀಗ ತೀವ್ರವಾಗಿ ಕುಸಿದಿದ್ದು, ಸದ್ಯ ಪ್ರತಿ ಕೆ.ಜಿಗೆ ₹10ರಂತೆ ಮಾರಾಟವಾಗುತ್ತಿದೆ.ಬೆಲೆ ಏರುಗತಿಯಲ್ಲಿದ್ದಾಗ ₹2000, ₹2,500ಕ್ಕೂ ಹೆಚ್ಚು ಮಾರಾಟವಾಗಿದ್ದ 18-20 ಕೆ.ಜಿಯ ಒಂದು ಟ್ರೇ ಟೊಮೆಟೊ ಈಗ ಅತಿ ಕನಿಷ್ಠ ₹180-₹200ಗೂ ಕಡಿಮೆ ದರಕ್ಕೆ ಬಿಕರಿಯಾಗುತ್ತಿದೆ.

ಮೊದಲಿಗಿಂತ ಈಗ ಟೊಮೆಟೊ ಗುಣಮಟ್ಟದಲ್ಲೂ ಸುಧಾರಣೆ ಕಂಡುಬಂದಿದ್ದು ಬಹುತೇಕ ಮಹಾರಾಷ್ಟ್ರದಿಂದ ಪೂರೈಕೆಯಾಗುತ್ತಿದೆ.

‘ಮಾರುಕಟ್ಟೆಯಲ್ಲಿ ಕೆ.ಜಿ ಟೊಮೆಟೊಗೆ ₹10 ಇದೆ. 3 ಕೆ.ಜಿ ಖರೀದಿಸಿದರೆ ₹20 ಎನ್ನುತ್ತಾರೆ. ಮನೆ ಹತ್ತಿರ ಬರುವ ವ್ಯಾಪಾರಿಗಳಲ್ಲಿ ಕೊಂಡರೆ ಈ ದರವಿಲ್ಲ’ ಎಂದು ಗ್ರಾಹಕ ಸೂಗೂರಪ್ಪ ಹೇಳಿದರೆ, ‘ಬೆಲೆ ಹೆಚ್ಚಾಗಿದೆ ಎಂದು ತಿಂಗಳಿಗೂ ಮುಂಚೆ ಬಹುತೇಕರು ಟೊಮೆಟೊ ಹಾಕಿದ್ದರು. ಸದ್ಯ ಆ ಬೆಳೆ ಬಂದಿದ್ದು ಬೇಡಿಕೆಗಿಂತ ಪೂರೈಕೆ ಹೆಚ್ಚಾಗಿದೆ. ಹೀಗಾಗಿ ಸಹಜವಾಗಿಯೇ ಬೆಲೆ ಇಳಿದಿದೆ’ ಎನ್ನುತ್ತಾರೆ ವ್ಯಾಪಾರಿಯೊಬ್ಬರು.

ಇನ್ನು, ಈರುಳ್ಳಿ ದರ ಕಳೆದ ವಾರದಂತೆ ಪ್ರತಿ ಕೆ.ಜಿಗೆ ₹30 ಇದೆ. ಹಸಿ ಮೆಣಸಿನಕಾಯಿ ಪ್ರತಿ ಕೆ.ಜಿಗೆ ₹120ರಂತೆ ಮಾರಾಟವಾಗುತ್ತಿದೆ. ಕೆಲವು ತಳಿಗಳ ಆಧಾರದಲ್ಲಿ ದರದಲ್ಲೂ ವ್ಯತ್ಯಾಸವಿದೆ. ಉಳಿದಂತೆ ಆಲೂಗಡ್ಡೆ, ಬದನೆಕಾಯಿ, ಗಜ್ಜರಿ, ಸೌತೆಕಾಯಿಗಳ ದರ ಪ್ರತಿ ಕೆ.ಜಿಗೆ ₹60 ಇದೆ. ದೊಣ್ಣೆಮೆಣಸಿನಕಾಯಿ ಪ್ರತಿ ಕೆ.ಜಿಗೆ ₹70, ಹೀರೆಕಾಯಿ ₹50ರಂತೆ ಮಾರಾಟವಾಗುತ್ತಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು