News Karnataka Kannada
Sunday, April 28 2024
ಕಲಬುರಗಿ

ಎಫ್‌ಡಿಎ ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕರಣ: ಹಾಸ್ಟೆಲ್ ವಾರ್ಡನ್ ಬಂಧನ

ಕೆಇಎ ಪರೀಕ್ಷೆ ಅಕ್ರಮಕ್ಕೆ  ಸಂಬಂಧಪಟ್ಟಂತೆ ಎಫ್‌ಡಿಎ ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮತ್ತೊಬ್ಬನನ್ನು ಪೊಲೀಸ್‌ ವಶ ಪಡಿಸಿಕೊಂಡಿದೆ.
Photo Credit : News Kannada

ಕಲಬುರಗಿ: ‌ಕೆಇಎ ಪರೀಕ್ಷೆ ಅಕ್ರಮಕ್ಕೆ  ಸಂಬಂಧಪಟ್ಟಂತೆ ಎಫ್‌ಡಿಎ ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮತ್ತೊಬ್ಬನನ್ನು ಪೊಲೀಸ್‌ ವಶ ಪಡಿಸಿಕೊಂಡಿದೆ.

ಬಸವರಾಜ್‌ ಬಂಧಿತ ಆರೋಪಿ. ಈತ ಚಿಕ್ಕಬಳ್ಳಾಪುರದ ಸಮಾಜ ಕಲ್ಯಾಣ ಇಲಾಖೆಯ ವೃತ್ತಿಪರ ಹಾಸ್ಟೆಲ್  ವಾರ್ಡ್‌ನ ಆದ ಒಂದೇ ತಿಂಗಳಿಗೆ ಸಿಕ್ಕಿಬಿದ್ದಿದ್ದಾನೆ.

ಜನವರಿ 19ರಂದು ಬಸವರಾಜ್ ವಾರ್ಡನ್ ಆಗಿ ಕೆಲಸಕ್ಕೆ ಸೇರಿದ್ದ. ಆದರೆ ತನ್ನ ಕಳ್ಳ ಕೆಲಸದಿಂದಾಗಿ ಸಿಐಡಿ ಬಲೆಗೆ ಬಿದ್ದಿದ್ದಾನೆ.ಇಂಗ್ಲಿಷ್‌ನಲ್ಲಿ ಎಂ.ಎ, ಬಿ.ಇಡಿ ಪದವೀಧರನಾಗಿರುವ ಬಸವರಾಜ್ ಯಾಳವಾರ್‌ ಮೇಲೆ ಈ ಹಿಂದೆ ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಕೋಕಾ ಕಾಯ್ದೆ ಅಡಿ ಪ್ರಕರಣ ದಾಖಲಾಗುತ್ತಿದ್ದಂತೆ ಬಸವರಾಜ್ ನಾಪತ್ತೆಯಾಗಿದ್ದ. ಹೀಗಾಗಿ ಸಿಐಡಿ ಪೊಲೀಸರು ಬಸವರಾಜ್ ಬಂಧನಕ್ಕೆ ಬಸವರಾಜ್ ಓದಿದ ಪ್ರದೇಶಗಳಲ್ಲಿ, ಕಲಬುರಗಿ ವಿವಿ, ಸಿಂದಗಿ ಹಾಗೂ ಬೆಂಗಳೂರು ಕಡೆ ಹುಡುಕಾಟವನ್ನು ನಡೆಸಿದ್ದರು. ಕೊನೆಗೆ ಚಿಕ್ಕಬಳ್ಳಾಪುರದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಾರ್ಡನ್ ಆಗಿದ್ದ ಎಂದು ಸುಳಿವು ಸಿಕ್ಕಿ  ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ.

ಹಾಗಾದ್ರೇ ಈತ ಮಾಡಿದ ಆ ಗನಾಂದಾರಿ ಕೆಲಸ ಯಾವುದು ಅಂತಿರಾ ಇಲ್ಲಿದೆ ಮಾಹಿತಿ, ಕೆಇಎ ಪರೀಕ್ಷಾ ಅಕ್ರಮದ ತನಿಖೆಯನ್ನು ನಡೆಸುತ್ತಿದ್ದಂತೆ ಅಫಜಲಪುರ ತಾಲೂಕಿನ‌ ಸರ್ಕಾರಿ ಪಿಯು ಕಾಲೇಜಿನ ಇಬ್ಬರು ಪ್ರಿನ್ಸಿಪಾಲ್‌ಗೆ 40 ಲಕ್ಷ ರೂಪಾಯಿ ಹಣ ಸಂದಾಯವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಆಳವಾಗಿ ತನಿಖೆ ನಡೆಸಲಾಗಿದ್ದು ತನಿಖೆ ವೇಳೆ ಒಂದೊಂದಾಗಿ ವಿಷಯ ಬಿಚ್ಚಿಟ್ಟಿದ್ದಾನೆ. ಅದರಲ್ಲಿ ತಾನು ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ್, ಕರ್ಜಗಿ ಸರ್ಕಾರಿ ಕಾಲೇಜಿನ‌ ಪ್ರಾಚಾರ್ಯ ಬಸವಣ್ಣ ಪೂಜಾರಿ‌ ಅವರಿಂದ ಸಹಾಯ ಪಡೆದುಕೊಂಡಿರುವ ಬಗ್ಗೆ ಬಸವರಾಜ್‌ ಹೇಳಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು