News Karnataka Kannada
Thursday, May 02 2024
ಕಲಬುರಗಿ

ಬಸವೇಶ್ವರರ ಭಾವಚಿತ್ರಕ್ಕೆ ಅಪಮಾನ: ಪ್ರತಿಭಟನೆ

Basaveshwara's portrait insulted: Protest
Photo Credit : News Kannada

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಗ್ರಾಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಅಪಮಾನ ಖಂಡಿಸಿ ಶುಕ್ರವಾರ ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬೀದರ- ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯನ್ನು ಸುಮಾರು ಅರ್ಧಗಂಟೆ ಕಾಲ ತಡೆದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಜೇವರ್ಗಿ ತಾಲ್ಲೂಕು ವೀರಶೈವ ಸಮಾಜದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ ಸೀರಿ ಮಾತನಾಡಿ, ‘ಬಸವೇಶ್ವರರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಸುಟ್ಟಿದ್ದರಿಂದ ವೀರಶೈವ ಸಮಾಜಕ್ಕೆ ನೋವು ಉಂಟಾಗಿದೆ. ಬಸವೇಶ್ವರ ಭಾವಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವ ಮೂಲಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಆರೋಪಿಗಳನ್ನು ಗಡಿಪಾರು ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಗ್ರೇಡ್-2 ತಹಶೀಲ್ದಾರ್ ಪ್ರಸನ್ನಕುಮಾರ ಮೋಘೆಕರ್ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ವೀರಶೈವ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ಧರಾಮ ಅಂಗಡಿ, ಬಸವಕೇಂದ್ರ ತಾಲ್ಲೂಕು ಘಟಕದ ಅಧ್ಯಕ್ಷ ಶರಣಬಸವ ಕಲ್ಲಾ, ಶಿವನಗೌಡ ಹಂಗರಗಿ, ಜಗದೀಶ ಪಾಟೀಲ ನರಿಬೋಳ, ಜಾಗತಿಕ ಲಿಂಗಾಯತ ಮಹಾಸಭಾ ಜೇವರ್ಗಿ ತಾಲ್ಲೂಕು ಘಟಕದ ಅಧ್ಯಕ್ಷನೀಲಕಂಠ ಅವಂಟಿ, ಷಣ್ಮುಖಪ್ಪ ಹಿರೇಗೌಡ, ಗುರುಲಿಂಗಯ್ಯ ಹಿರೇಮಠ, ಗುಂಡು ಸಾಹು ಗೋಗಿ, ಸಾಹೇಬಗೌಡ ಕಲ್ಲಾ, ಕಂಟೆಪ್ಪ ಮಾಸ್ತರ ಹರವಾಳ, ತಿಪ್ಪಣ್ಣ ಹಡಪದ, ತಿಪ್ಪಣ್ಣ ಗುಂಡಗುರ್ತಿ, ಮಲ್ಲಿಕಾರ್ಜುನ ಬಿರಾದಾರ ಸೊನ್ನ, ಭಗವಂತರಾಯ ಶಿವಣ್ಣಕರ್, ಶ್ರೀಶೈಲಗೌಡ ಮಾಲಿಪಾಟೀಲ, ಬಸವರಾಜ ಹೂಗಾರ ಯಡ್ರಾಮಿ, ಮಹಾಂತಗೌಡ ಪಾಟೀಲ ಚನ್ನೂರ, ಸಂಗಣ್ಣಗೌಡ ಗುಳ್ಯಾಳ, ಅನೀಲ ರಾಂಪೂರ, ಪ್ರಕಾಶ ಪುಲಾರೆ, ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪಟ್ಟಣದ ನೂರಾರು ಜನತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು