News Karnataka Kannada
Monday, May 13 2024
ಕಲಬುರಗಿ

ಶಿಕ್ಷಣಪ್ರೇಮಿ, ಮಾಜಿ ಎಂಎಲ್​ಸಿ ಮಾರುತಿರಾವ್‌ ಮಾಲೆ ನಿಧನ

Maale
Photo Credit : News Kannada

ಕಲಬುರಗಿ:  ಶಿಕ್ಷಣಪ್ರೇಮಿ, ಮಾಜಿ ವಿಧಾನಪರಿಷತ್ ಸದಸ್ಯ, ರಾಷ್ಟ್ರ ಏಕೀಕರಣ ಹೋರಾಟಗಾರ ಮಾರುತಿರಾವ್ ಡಿ. ಮಾಲೆ  ಅವರು ನಿಧನರಾಗಿದ್ದಾರೆ. ರಾಷ್ಟ್ರ ಏಕೀಕರಣ ಸಂದರ್ಭದಲ್ಲಿ ಏಕೀಕರಣಕ್ಕೆ ವಿರೋಧಿಸಿ ಹಿಂಸಾಚಾರ ನಡೆಸುತ್ತಿದ್ದ ನಿಜಾಮರ‌ ವಿರುದ್ಧ ಧೀರತನದಿಂದ ಹೋರಾಟ ನಡೆಸಿದ್ದ ಮಾರುತಿರಾವ್ ಡಿ. ಮಾಲೆ ಕಳೆದ ಕೆಲ‌ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಮೂಲತಃ ಬೀದರ್ ಜಿಲ್ಲೆಯ ಘಾಟಬೊರಾಳ್ ಗ್ರಾಮದ ನಿವಾಸಿ, 83 ವರ್ಷದ ಮಾರುತಿರಾವ್ ಡಿ. ಮಾಲೆ ಅವರು ಶೀಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಇನ್ನು ಇವರ ಅಂತ್ಯಕ್ರಿಯೆ ಇಂದು (ಡಿಸೆಂಬರ್ 27) ಕಲಬುರಗಿ ಜಿಲ್ಲೆಯ ಹಾರುತಿ ಹಡಗಿಲ್ ಗ್ರಾಮದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಅಂತ್ಯಕ್ರಿಯೆಯಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಸೇರಿದಂತೆ ಇತರೆ ರಾಜಕೀಯ ನಾಯಕರು ಭಾಗಿಯಾಗಲಿದ್ದಾರೆ.

ಮಾರುತಿರಾವ್ ಡಿ. ಮಾಲೆ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾಗಿದ್ದರು. ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿಯನ್ನು ಸ್ಥಾಪಿಸಿ ಅದರ ಫೌಂಡರ್ ಜೆನರಲ್ ಸೆಕ್ರೆಟರಿ ಆಗಿದ್ದ ಮಾರುತಿರಾವ್ ಮಾಲೆ ಹತ್ತು ಹಲವು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಸಾವಿರಾರು ಜನರಿಗೆ ವಿದ್ಯಾದಾನ ಮಾಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು